ಇಹಲೋಕ ತ್ಯಜಿಸಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ

ಡಿಜಿಟಲ್ ಕನ್ನಡ ಟೀಮ್:

ಖ್ಯಾತ ರಂಗಕರ್ಮಿ, ಚಿತ್ರನಟ ಮಾಸ್ಟರ್ ಹಿರಣ್ಣಯ್ಯ ಗುರುವಾರ ವೀಧಿವಶರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ಮಾಸ್ಟರ್ ಹಿರಣ್ಣಯ್ಯ, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ಮೈಸೂರು ಮೂಲದ ಮಾಸ್ಟರ್ ಹಿರಣ್ಣಯ್ಯ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ‌ ನಟನೆ ಮಾಡಿದ್ದಾರೆ. ಜತೆಗೆ ಹಲವು ನಾಟಕಗಳ‌ ಮೂಲಕ‌ ಸಂಚಲನ ಸೃಷ್ಟಿ ಮಾಡಿದ್ದರು. ಹಿರಣ್ಣಯ್ಯ ಅವರು ಜಠರ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಅವರು ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ.

ಹಿರಣ್ಣಯ್ಯ ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಮಧ್ಯಾಹ್ನ 12 ಗಂಟೆಗೆ ಕುಟುಂಬಸ್ಥರು ಹಿರಣ್ಣಯ್ಯ ಅವರ ಪಾರ್ಥಿವ ಶರೀರವನ್ನು ತ್ಯಾಗರಾಜನಗರದಲ್ಲಿರುವ ಸ್ವಗೃಹಕ್ಕೆ ತರಲಿದ್ದಾರೆ.

ಹಿರಣ್ಣಯ್ಯ ಅವರು 1934ರ ಫೆಬ್ರವರಿ 15ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕೆ. ಹಿರಣ್ಣಯ್ಯ ಕೂಡ ನಟ, ನಿರ್ದೇಶಕ ಹಾಗೂ ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ರಂಗ ಕಲಾವಿದರಾಗಿದ್ದರು.

Leave a Reply