ಮಹದಾಯಿ ಕಾಮಗಾರಿ ವಿಳಂಬಕ್ಕೆ ಕೇಂದ್ರ ಕಾರಣ: ಸಚಿವ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ನಮ್ಮ ಬಳಿ ಸಾಕಷ್ಟು ಹಣವಿದೆ. ಹೀಗಾಗಿ ನಾವು ಯೋಜನೆಗೆ ಸಿದ್ಧ. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸದ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ, ಕೃಷ್ಣ ಹಾಗೂ ಭೀಮಾ ನದಿಗಳಿಗೆ ನೆರೆಯ ಮಹಾರಾಷ್ಟ್ರದಿಂದ ನೀರು ಪಡೆಯುವ ವಿಚಾರವಾಗಿ ಸಚಿವರು ಬೆಳಗಾವಿಯಲ್ಲಿ ಈ ಭಾಗದ ಸಚಿವರು, ಶಾಸಕರು, ನಾಯಕರು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿತ್ತು.

ರಾಜ್ಯ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಆರ್.ಬಿ. ತಿಮ್ಮಾಪುರ, ಸಂಸದರಾದ ಪ್ರಕಾಶ್ ಹುಕ್ಕೇರಿ, ಪಿ.ಸಿ. ಗದ್ದೀಗೌಡರ, ರಾಜ್ಯಸಭೆ ಸದಸ್ಯರಾದ ಪ್ರಭಾಕರ ಕೋರೆ, ಶಾಸಕರಾದ ಸಿದ್ದು ಸವದಿ, ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಎಂಎಲ್ ಸಿ ಎಸ್.ಆರ್. ಪಾಟೀಲ, ಸಿಎಂ ಸಂಸದೀಯ ಗಣೇಶ್ ಹುಕ್ಕೇರಿ, ಕಾರ್ಯದರ್ಶಿ ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಮಹಂತೇಶ ಕವಟಗಿನಠ, ಬೆಳಗಾವಿ ಉತ್ತರ ವಲಯ ನೀರಾವರಿ ಮುಖ್ಯ ಎಂಜಿನಿಯರ್ ಅರವಿಂದ ಕೂಗಲಿ ಭಾಗವಹಿಸಿದ್ದರು.

ಈ ಸಭೆಗೂ ಮುನ್ನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು ಹೇಳಿದ್ದಿಷ್ಟು…

  • ‘ಉತ್ತರ ಕರ್ನಾಟಕದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡಿದ್ದೀನಿ. ಆ ವಿಚಾರವಾಗಿ ಗ್ರೌಂಡ್ ರಿಪೋರ್ಟ್ ಪಡೆಯಲು ಬಂದಿರುವೆ. ನೀರಿಗಾಗಿ ಎಲ್ಲಾ ಶಾಸಕರು, ಸಂಸದರು, ಅಧಿಕಾರಿಗಳ ಜೊತೆ ಚರ್ಚೆ ಮಾಡ್ತಿವಿ. ನಾನು ಮಹಾರಾಷ್ಟ್ರ ಜೊತೆ ಮಾತನಾಡಿರುವೆ. ಈಗ ವಿಳಂಬವಾಗಿದೆ ಮುಂದೆ ತೊಂದರೆ ಆಗಬಾರದು. ಜನ ಪ್ರತಿನಿಧಿ ಜೊತೆಗೆ ಚರ್ಚೆ ಮಾಡ್ತಿನಿ.’
  • ಇನ್ನು ಕಳಸಾ-ಬಂಡೂರಿ ಮಹದಾಯಿ ವಿಚಾರವಾಗಿ ಮಾತನಾಡಿದ ಅವರು… ‘ನಮ್ಮ ಹತ್ತಿರ ಸಾಕಷ್ಟು ಹಣವಿದೆ. ನಾವೂ ಕೆಲಸ ಮಾಡಲು ಸಿದ್ಧವಿದ್ದೇವೆ. ಕೇಂದ್ರದ ಸರ್ಕಾರದಿಂದ ನೋಟಿಫಿಕೇಶ್ ಆಗಬೇಕು.ಆದಾದ ಮೇಲೆ ನಾವು ಕೆಲಸ ಮಾಡ್ತಿವಿ. ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನಾನು ಮಹದಾಯಿ ವಿಚಾರದಲ್ಲಿ ಬದ್ಧನಾಗಿದ್ದೇನೆ.
  • ಮಾಜಿ ಸಚಿವ ಬಸವರಾಜ ಬೋಮ್ಮಾಯಿಯವರ ಕುಂದಗೋಳದಲ್ಲಿ ಕಾಂಗ್ರೆಸ್ ಅಕ್ರಮ ಸಾರಾಯಿ ತಂದಿಟ್ಟಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ…  ‘ಬೋಮ್ಮಾಯಿ ಅವರಿಗೆ ನಾನೇ ಚುನಾವಣಾ ಅಧಿಕಾರಿ ನಂಬರ ಕೊಡ್ತಿನಿ. ಕೇಂದ್ರ ಸರ್ಕಾರ ಅವರದ್ದೇ ಇದೇ ಏನೇನು ಬೇಕು ಅದನ್ನ ಸೀಜ್ ಮಾಡಿಕೊಳ್ಳಲಿ’ ಎಂದರು.
  • ಸಭೆಯಲ್ಲಿ ಯಾರೇಲ್ಲಾ ಭಾಗವಹಿಸುತ್ತಾರೆ ಪ್ರಶ್ನೆ ಎಂಬ ಪ್ರಶ್ನೆಗೆ ಸಚಿವರ ಉತ್ತರ… ‘ನನಗೆ ಏನು ಗೊತ್ತಿಲ್ಲ. ಯಾರಿಗೆ ಆಸಕ್ತಿ ಇದೆಯೋ ಅವರು ಬರ್ತಾರೆ. ಆಸಕ್ತಿ ಇಲ್ಲದವರು ಬರದೆ ಇರಬಹುದು. ನಾನು ಯಾವುದನ್ನು ತಲೆಕೆಡಿಸಿಕೊಳ್ಳುವುದಿಲ್ಲ.

Leave a Reply