ಮಹಾರಾಷ್ಟ್ರ ಜತೆ ನೀರು ಹಂಚಿಕೆ ಸೂತ್ರ! ಉತ್ತರ ಭಾಗದ ಕುಡಿಯುವ ನೀರು ಪೂರೈಕೆಗೆ ಹೊಸ ಮಾರ್ಗ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು ಮಹಾರಾಷ್ಟ್ರ ಸರ್ಕಾರದ ಜತೆ ನೀರಿಗೆ ನೀರು ಹಂಚಿಕೆ ಮಾಡಿಕೊಳ್ಳುವ ಹೊಸ ಮಾರ್ಗ ಕಂಡುಕೊಂಡಿದೆ.

ಹೌದು, ಸೋಮವಾರ ಬೆಳಗಾವಿ, ಬಾಗಲಕೋಟ, ವಿಜಯಪುರ ಜಿಲ್ಲೆಯ ಭಾಗಗಳ ನೀರಿನ ಸಮಸ್ಯೆ ಕುರಿತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಈ ಭಾಗದ ಜನಪ್ರತಿನಿಧಿಗಳ ಸಭೆ ನಡೆಸಿದರು. ಈ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಸಭೆಯ ಕುರಿತು ಮಾಹಿತಿ ನೀಡಿದರು.

‘ಉತ್ತರ ಕರ್ನಾಟಕದ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಪದೇ ಪದೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ನಿಡಬೇಕು ಎಂದು ಸ್ಥಳಿಯ ಜನಪ್ರತಿನಿದಿಗಳು ಬೇಡಿಕೆ ಇಟ್ಟಿದ್ದಾರೆ.

ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆಯನ್ನ ಕೊಟ್ಟಿದ್ದೇನೆ. ಆದರೆ ಈ ಬಾರಿ 150 ಕ್ಕೂ ಹೆಚ್ಚು ತಾಲೂಕಿನಲ್ಲಿ ಬರಗಾಲ ಆವರಿಸಿದೆ. ವಿಶೇಷವಾಗಿ ಕೃಷ್ಣಾ ನದಿ ಪಾತ್ರದ ಪ್ರದೇಶಗಳಲ್ಲಿ ನಿರಿನ ಸಮಸ್ಯೆ ಇದೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ನೀರು ಹರಿಸುವಂತೆ ಬೆಡಿಕೆಯನ್ನ ಇಟ್ಟಿದ್ದೆವೆ. ರಾಜ್ಯದ ಪರವಾಗಿ ನಾನು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಎರಡು ಸರಕಾರದ ಅಧಿಕಾರಿಗಳು ಕೂಡಾ ಚರ್ಚೆ ಮಾಡಿದ್ದಾರೆ.

ಬರಗಾಲ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಮಹಾರಾಷ್ಟ್ರ ನೀರು ಹರಿಸಲು ಆ ಸರಕಾರಕ್ಕೆ 2 ಕೋಟಿ ಹಣವನ್ನು ನಿಡಿದ್ದೇವೆ.

ಇಷ್ಟು ದಿನಗಳ ಕಾಲ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಹಣ ಪಡೆಯುತ್ತಿತ್ತು. ಆದರೆ ಈಗ ತಮಗೆ ಹಣ ಬೇಡ. ಬದಲಾಗಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡಿದ್ದಾರೆ. ಹಿಪ್ಪರಗಿ ಜಲಾಶಯದಿಂದ ಜತ್ತ, ಜಾಂಬೋಟಿಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಮನವಿಗೆ ಸ್ಪಂದಿಸಿ ಶೀಘ್ರವೇ ಪತ್ರ ಬರೆಯುತ್ತೇನೆ. ಹೀಗೆ ಎರಡೂ ರಾಜ್ಯಗಳ ನಡುವೆ ನೀರು ಹಂಚಿಕೆ ಮಾಡಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.

ಈ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಅಗ್ರಿಮೆಂಟನ್ನ ಮಾಡಿಕ್ಕೊಳ್ಳಲು ಮಹಾರಾಷ್ಟ್ರ ಸರ್ಕಾರ ಒಪ್ಪಿಕ್ಕೊಂಡಿದೆ. ಇದರ ಸಾಧಕ ಬಾಧಕಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸಿ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸಿದ್ಧವಿದ್ದು, ಒಪ್ಪಂದಕ್ಕೆ ನಮ್ಮ ಸರ್ಕಾರವೂ ಒಪ್ಪಿದೆ. ಎಲ್ಲೆಲ್ಲಿ ನೀರು ಉಳಿಸಿ ಮಹಾರಾಷ್ಟ್ರಕ್ಕೆ ನೀಡಬೇಕು ಎಂಬುದರ ಬಗ್ಗೆ ತಾಂತ್ರಿಕವಾಗಿ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ.

ಸದ್ಯಕ್ಕೆ ಮಹಾರಾಷ್ಟ್ರ ಸರ್ಕಾರ ನಾಲ್ಕು ಟಿಎಂಸಿ ನೀರನ್ನು ರಾಜಾಪೂರ ಡ್ಯಾಂ ನಿಂದ ಬಿಡುಗಡೆ ಮಾಡಲು ಒಪ್ಪಿದೆ. 23ರ ನಂತರ ನೀರು ಬಿಡಲಾಗುತ್ತದೆ. ಅಲ್ಲಿಯವರೆಗೂ ಏನೂ ಮಾಡಲು ಸಾಧ್ಯವಿಲ್ಲ ಎಂದಿದೆ.’

ರೈತರಲ್ಲಿ ಮನವಿ…

ಕುಡಿಯುವ ಉದ್ದೇಶಕ್ಕಾಗಿ ಪೂರೈಕೆ ಮಾಡುವ ನೀರನ್ನು ವ್ಯವಸಾಯಕ್ಕೆ ರೈತರು ಬಳಕೆ ಮಾಡಬಾರದು ಎಂದು ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ಅಗತ್ಯಕ್ಕಾಗಿ ನೀರು ಪಡೆಯಲಾಗುತ್ತಿದ್ದು, ಕೆವಲ ಕುಡಿಯಲಿಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

Leave a Reply