ಇಂದಿರಾ ಗಾಂಧಿ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಸಂಚು!?

ಡಿಜಿಟಲ್ ಕನ್ನಡ ಟೀಮ್:

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಗ್ರ ಸಂಘಟನೆಗಳು ಟಾರ್ಗೆಟ್​ ಮಾಡಿದ್ದಾರೆ ಅನ್ನೋದು ಸಾಕಷ್ಟು ಹಿಂದಿನ ಸುದ್ದಿ. ಆದ್ರೆ ಮೋದಿ ಹತ್ಯೆ ಮಾಡಲು ಸಿದ್ಧ ಎಂದು ಭಾರತದ ಮಾಜಿ ಸೈನಿಕ ಹೇಳಿಕೊಂಡಿರೋದು ಸದ್ಯ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಹೌದು, ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ನಂತರ ನಾಮಪತ್ರ ತಿರಸ್ಕೃತಗೊಂಡಿರುವ ಮಾಜಿ ಯೋಧ ತೇಜ್ ಬಹದ್ದೂರ್ ಮೋದಿ ಹತ್ಯೆಗೆ ಸಿದ್ಧ ಎಂದು ಹೇಳಿಕೊಂಡಿರುವ ವೀಡಿಯೊ ಈಗ ವೈರಲ್ ಆಗಿದೆ.

ಸೇನೆಯಲ್ಲಿರುವ ಸಮಸ್ಯೆಗಳ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ ಯೋಧ ತೇಜ್​ ಬಹದ್ದೂರ್​ ಯಾದವ್​​, ಸೇನೆಯಿಂದ ವಜಾಗೊಂಡಿದ್ರು. ಆ ಬಳಿಕ ವಾರಾಣಸಿ ಕ್ಷೇತ್ರದಿಂದ ಎಸ್​ಪಿ-ಬಿಎಸ್​ಪಿ ಮಹಾಘಟಬಂಧನ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ರು. ಆ ಬಳಿ ಚುನಾವಣಾ ಆಯೋಗ ನಾಮಪತ್ರ ತಿರಸ್ಕಾರ ಮಾಡಿತ್ತು. ಆ ಬಳಿಕ ಈ ವಿಡಿಯೋ ವೈರಲ್​ ಆಗಿದೆ.

ಸ್ನೇಹಿತರ ಜೊತೆ ಗುಂಡಿನ ಪಾರ್ಟಿ ಮಾಡ್ತಿರುವ ದೃಶ್ಯದಲ್ಲಿ ತೇಜ್ ಬಹದ್ದೂರ್​ ಯಾದವ್​ ಅವರು ಸ್ನೇಹಿತರ ಜೊತೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಾನು ಸಿದ್ಧ, ಆದ್ರೆ 50 ಕೋಟಿ ರೂಪಾಯಿ ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದ್ರೆ ನಿನಗೆ ಹಣ ಕೊಟ್ಟರೆ ಪಾಕಿಸ್ತಾನವೇ ಕೊಡಬೇಕು ಎಂದು ಸ್ನೇಹಿತರು ಹೇಳಿದ್ದಾರೆ. ಆಗ ಪಾಕಿಸ್ತಾನ ಕೊಡೋದಾದ್ರೆ ಬೇಡ ಎಂದಿರುವ ಮಾಜಿ ಸೈನಿಕನ ಮಾತಿನ ವಿಡಿಯೋ ವೈರಲ್ ಆಗಿದೆ. ಆದ್ರೆ ಈ ವೀಡಿಯೊ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದನ್ನು ಇನ್ನಷ್ಟೇ ಖಚಿತವಾಗಬೇಕಿದೆ.

ಮೋದಿ ಹಿಂದುತ್ವವಾದಿ ಅನ್ನೋ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳು ಸಂಚು ರೂಪಿಸಿದ್ದಾರೆ ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಎಸ್​ಪಿಜಿ ಭದ್ರತೆ ಕೊಡಲಾಗಿದೆ. ನೂರಕ್ಕೂ ಹೆಚ್ಚು ಮಂದಿ ಕಮಾಂಡೋ ಪಡೆ ಮೋದಿಯ ರಕ್ಷಾ ಕೋಟೆಯಾಗಿ ಕೆಲಸ ಮಾಡ್ತಿದೆ. ಪ್ರಧಾನಿ ನರೇಂದ್ರ ಮೋದಿ ಹೋಗುವ ಪ್ರತಿಯೊಂದ ಸ್ಥಳಕ್ಕೂ ಮೊದಲೇ ತೆರಳಿ ಭದ್ರತೆ ಬಗ್ಗೆ ನಿಗಾ ವಹಿಸುತ್ತದೆ. ಹೀಗಾಗಿ ಈ ಭದ್ರ ಕೋಟೆಯನ್ನು ಮೆಟ್ಟಿ ನಿಂತು ಮೋದಿಯನ್ನು ಟಚ್ ಮಾಡೋದು ಸುಲಭದ ಮಾತಲ್ಲ. ಹೀಗಾಗಿ ತೇಜ್ ಬಹದ್ದೂರ್ ವೀಡಿಯೊದಲ್ಲಿ ಕುಡಿದ ಅಮಲಿನಲ್ಲಿ ತಮ್ಮ ಬೇಸರವನ್ನು ಹೀಗೆ ಹೊರ ಹಾಕಿದ್ದರೆ ಅಥವಾ ಈ ವೀಡಿಯೊ ಚುನಾವಣೆಯ ಗಿಮಿಕ್ ನ ಭಾಗವೇ ತಿಳಿಯಬೇಕು.

1984ರಲ್ಲಿ ಐರನ್ ಲೇಡಿ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭದ್ರತಾ ಪಡೆ ಸಿಬ್ಬಂದಿಗಳೇ ಹತ್ಯೆ ಮಾಡಿದ್ದು, ತೇಜ್ ಬಹದ್ದೂರ್ ವೀಡಿಯೊ ನಂತರ ಇಂದಿರಾ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆಯೇ ಎಂಬ ಚರ್ಚೆ ಕೂಡ ಆರಂಭವಾಗಿದೆ.

Leave a Reply