ಶ್ರೀರಾಮುಲು ಅಣ್ಣಾ ಬೇಕಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಲಿ: ಡಿಕೆಶಿ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

ಕುಂದಗೋಳ ಶಾಸಕರಾಗಿದ್ದ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂಬ ಶಾಸಕ ಬಿ.ಶ್ರೀರಾಮುಲು ಅವರ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ‘ಶ್ರೀರಾಮುಲು ಅಣ್ಣಾ ಬೇಕಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಲಿ’ ಎಂದು ಸವಾಲು ಹಾಕಿದ್ದಾರೆ.

ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಡಿಕೆಶಿ ಅವರು ಬುಧವಾರ ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಉಪಚುನಾವಣೆ, ಮಹಾರಾಷ್ಟ್ರ ಜತೆಗಿನ ನೀರು ಹಂಚಿಕೆ, ಹಾಗೂ ಉಪ ಚುನಾವಣೆಯ ತಯಾರಿ ಕುರಿತು ಮಾತನಾಡಿದರು. ಅವರ ಮಾತಿನ ಪ್ರಮುಖ ಅಂಶಗಳು ಹೀಗಿವೆ…

ರಾಮುಲು ಆರೋಪಕ್ಕೆ ತಿರುಗೇಟು:

ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂಬ ಶಾಸಕ ಬಿ. ಶ್ರೀರಾಮುಲು ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್…

ಶಿವಳ್ಳಿಯವರು ಮೈತ್ರಿ ಸರಕಾರದ ಕಿರುಕುಳದಿಂದ ಮೃತಪಟ್ಟಿದ್ದಾರೆನ್ನುವುದಾದರೆ.
ಶ್ರೀರಾಮುಲು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಮಾತನಾಡುವುದಕ್ಕೆ ಒಂದು ಮಿತಿ ಬೇಕು. ಬೇಕಾಬಿಟ್ಟಿಯಾಗಿ ಶ್ರೀರಾಮುಲು ಮಾತನಾಡಿದ್ದು ಸರಿಯಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂದು ಇಂಥ ಅರ್ಥಹೀನ ಹೇಳಿಕೆ ನೀಡುವುದು ಸರಿಯಲ್ಲ.

ಶಿವಳ್ಳಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡದೆ, ಜನರಿಗಾಗಿ ದುಡಿದಿದ್ದಾರೆ. ನಮ್ಮ ಶ್ರೀರಾಮುಲು ಅಣ್ಣಾ ಇಂತಹ ಮಾತುಗಳನ್ನು ಮಾತನಾಡಿ, ರಾಜಕೀಯ ಗೌರವವನ್ನು ಹಾಳು ಮಾಡಬಾರದು. ಅವರು ಬೇಕಾದರೆ ಸೇಡಿನ ರಾಜಕೀಯ ಮಾಡಲಿ, ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ.

ಕಾರ್ಯಕರ್ತರಿಗೆ ಎಲ್ಲಾ ಜವಾಬ್ದಾರಿ:
ನಮ್ಮ‌ ಪಕ್ಷದ ಕಾರ್ಯಕರ್ತರಿಗೆ ಎಲ್ಲಾ ಜವಾಬ್ದಾರಿ ನೀಡಲಾಗಿದೆ. ಎಲ್ಲಾ ಸಚಿವರು ಮತ್ತು ಮುಖಂಡರಿಗೆ ಇವತ್ತು ಬರಬೇಕು ಎಂಬುದು ಸೂಚನೆ ಇತ್ತು. ಕೆಲವರು ಬಂದಿಲ್ಲ, ಬಂದವರನ್ನ ಪ್ರಚಾರಕ್ಕೆ ಕಳಿಸಿಲಾಗಿದೆ.

ನಮಗೆ ದೊಡ್ಡವರು ಬೇಡ, ಸಣ್ಣ ಸಣ್ಣ ಕಾರ್ಯಕರ್ತರು ಬೇಕು. ನಮ್ಮ ಶಾಸಕರು ಬರದೆ ಇದ್ದರೂ, ನಮ್ಮ‌ ಕಾರ್ಯಕರ್ತರು ಇದ್ದಾರೆ ನಾವು ಚುನಾವಣೆ ಮಾಡುತ್ತೆವೆ. ಕುಂದಗೋಳದಲ್ಲಿ ಒಳ್ಳೆಯ ಜನ ಇದ್ದಾರೆ. ನಾವು ಪರಿಶ್ರಮ ಪಟ್ಟಾಗ ನಮಗೆ ಪ್ರತಿಫಲ ಸಿಗಲು ಸಾಧ್ಯ.

ದೆಹಲಿ ಆಗಮಿಸುವಂತೆ ಪೋನ್ ಕರೆ ಬಂದಿತ್ತು, ನಾನು ಹೋಗುವುದಿಲ್ಲ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿದೆ.

ಸಿದ್ದನಾಮಯ್ಯನವರ ನಾಯಕತ್ವದಲ್ಲಿ ನಾವು ಚುನಾವಣಾ ಎದುರಿಸಿದ್ದೇವೆ. ಆದರೂ ಮೈತ್ರಿ ಧರ್ಮಕ್ಕೆ ನಾವೂ ಬದ್ಧರಿದ್ದೇವೆ. ಸಿಎಂ ಕುರ್ಚಿ ಖಾಲಿ ಇದ್ದಾಗ ಯಾರು ಆ ಹುದ್ದೆ ಅಲಂಕರಿಸುತ್ತಾರೆ ಎಂಬುದನ್ನು ನೋಡೋಣ.

ಮಹಾರಾಷ್ಟ್ರ ಜತೆ ನೀರು ಹಂಚಿಕೆ:

ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದ ಜನ ಕುಡಿಯುವ ನೀರು ಸಿಗದೆ ತತ್ತರಿಸಿದ್ದಾರೆ. ಹೀಗಾಗಿ ತಜ್ಞರ ತಂಡ ಸಿಎಂ ಭೇಟಿ ಮಾಡಿತ್ತು. ಕೃಷ್ಣಾ ನಡಿಗೆ ನೀರು ಹರಿಸಿ ಎಂದು ಮಹಾರಾಷ್ಟ್ರಕ್ಕೆ ಬೇಡಿಕೆ ಇಟ್ಟಾಗ ಅವರು ನೀರಿಗೆ ನೀರು ಎಂಬ ಮನವಿ ಮಾಡಿದ್ರು.

ನೀರು ತರಲು ಸಮೀಕ್ಷೆ ನಡೆಸಿ ಎಲ್ಲಿಂದ ಬಿಡಬೇಕು ಹೇಗೆ ಬಿಡಬೇಕು ಅಂತಾ ಎಂಓವಿ ಮಾಡಿದ್ದೀವಿ. ಈವರೆಗೂ ನೀರು ಬಿಟ್ಟಿಲ್ಲ.

ಮಹಾರಾಷ್ಟ್ರ ಮುಖ್ಯಮಂತ್ರಿಗೆ ನಮ್ಮ ಸಿಎಂ ಮೂಲಕ ಮನವಿ ಮಾಡಿಕೊಳ್ಳಲಾಗುವುದು. ದಯವಿಟ್ಟು ಕಟ್ಟುನಿಟ್ಟಿನ ಆದೇಶ ಮಾಡಿ ನೀರು ಬಿಡಬೇಕು ಅಂತಾ ಮನವಿ ಮಾಡುತ್ತೇವೆ.

ನೆರೆಹೊರೆ ರಾಜ್ಯಗಳು ಸಹಬಾಳ್ವೆ ಇಂದ ಇರಬೇಕು. ಈ ದೃಷ್ಟಿಯಿಂದ ನೀರು ಬೀಡಬೇಕು. 4 ಟಿಎಂಸಿ ನೀರು ಬೇಡಿಕೆ ಇದೆ, ನೀರಿನಲ್ಲಿ ರಾಜಕಾರಣ ಮಾಡಬಾರದು. ಈ ಸಂದರ್ಭದಲ್ಲಿ ಹೃದಯದ ರಾಜಕಾರಣದ ಅಗತ್ಯವಿದೆ.

Leave a Reply