ಅಪ್ಪನ ಬೈಗುಳಕ್ಕೆ ಜಗ್ಗೇಶ್ ಪ್ರೀತಿ ಪತ್ರ..! ತುಂಬಾ ತಡವಾಗಿ

ಡಿಜಿಟಲ್ ಕನ್ನಡ ಟೀಮ್:

1979/80ರ ಸಮಯದಲ್ಲಿ ಅಪ್ಪ ನನಗೆ ನಿನ್ನ ಅನ್ನ ನೀನೆ ದುಡಿದು ತಿನ್ನು, ಆಗ ಬದುಕಿನ ಅರ್ಥ ನಿನಗಾಗುವುದು ಎಂದಾಗ ಅಂದು ನನಗೆ #ಮಯೂರ ಚಿತ್ರದ #interval ದೃಶ್ಯದ ರಾಜಣ್ಣ ನಂತೆ ಶಪಥಮಾಡಿ ಮನೆಬಿಟ್ಟು ಹೋಗಿ ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿದ್ದೆ.! ಆಗ ನನಗೆ ಇದ್ದ ಆಸೆ ಒಂದೆ ಜೀವನದಲ್ಲಿ ಒಂದು ಆಟೋ ಸ್ವಂತ ಪಡೆದು ದಿನ 100 ರೂಪಾಯಿ ದುಡಿಯುವ ಮನುಷ್ಯನಾಗಿ ಅಪಮಾನಿಸಿದ ಅಪ್ಪನ ಮುಂದೆ ಮೀಸೆ ತಿರುವಿ ಬದುಕಬೇಕು ಎಂದು! ಬದುಕಿಗೆ ಬುದ್ಧಿ ಹೇಳುವ #ಅಪ್ಪ ಅಂದು ಶತ್ರುವಂತೆ ಕಂಡ.!

ಇಂದು ಆಕಸ್ಮಿಕ ಒಬ್ಬ ಆಟೋರಿಕ್ಷಾ ಸಹೋದರ ಸಿಕ್ಕಾಗ ಅವನ ಅನುಮತಿ ಪಡೆದು ಆಟೋ ಓಡಿಸಿದೆ!ಅಪ್ಪ ಹಾಗು ನನ್ನ ಮನಸ್ತಾಪದ ದಿನಗಳು ನೆನಪಾಗಿ #ಅಪ್ಪ ಎಂಥ ಶ್ರೇಷ್ಟ. ಮಗ ನಾನು ಎಂಥ ಅಧಮ.!ವ್ಯತ್ಯಾಸ ನನ್ನ ತಲೆತಗ್ಗಿಸುವಂತೆ ನಾಚಿಕೆಯಾಯಿತು..! ಮಗ ಬದುಕು ಕಲಿಯಲಿ ಎಂದು ಅಪ್ಪ ಆಡಿದ ಮಾತೆಲ್ಲಾ ಅಣಕ ಅಪಮಾನದಂತೆ ಕೇಳುತ್ತಿತ್ತು ರಕ್ತ ಬಿಸಿಯಿದ್ದಾಗ..! ಅದರೆ ಈಗ? ನೀವು ಬೈದು ಬುದ್ಧಿ ಹೇಳುತ್ತಿದ್ದ ಮಗ ಇಂದು ತಾತನಾಗಿ ಬದುಕಿನ ಪುಟಗಳ ಮೆಲುಕುಹಾಕಿದಾಗ ಅಪ್ಪ ಎಂಥ ಶ್ರೇಷ್ಟಮನುಜ ನೀನು ಅನ್ನಿಸಿತು..! ತಪ್ಪಾಯಿತು ಕ್ಷಮಿಸಿ ಅಂದರು ಕೇಳದಷ್ಟು ದೂರದ ಊರಿಗೆ ಹೋಗಿಬಿಟ್ಟೆ..!

ಕ್ಷಮೆ ಕೇಳಲು ನಾನು ನೀನಿರುವ ಜಾಗಕ್ಕೆ ಬರಬೇಕು..!ಇನ್ನು ಅನೇಕ ಕಾರ್ಯವಿದೆ ಮುಗಿಸಿ ಮಾಗಿದಾ ದೇಹ  ಮಾಗಿದಾಗ ನಿನ್ನಲ್ಲಿಗೆ ಬರುವೆ! ಆಗಲಾದರು ಕ್ಷಮಿಸು.! ಎಷ್ಟೇ ಆದರು ನಾನು ನಿನ್ನ ಮಗನಲ್ಲವೆ..!
ಒಂದಂತು ನಿನಗೆ ಸಮಾಧಾನ ಆಗುತ್ತದೆ! ಅಪ್ಪ ನಾನು ಶ್ರಮಿಸಿ ನಿನ್ನ ವಂಶದ ಹೆಸರು ಉಳಿಸಿರುವೆ!
ನೀನು ಅಮ್ಮ ಗರ್ವಪಡುತ್ತೀರಿ ನನ್ನ ಸಾಧನೆ ಕಂಡು..!love you pa..ever loving son.. ನಿಮ್ಮ ಈಶ ಎನ್ನಬೇಕು ಅನ್ನಿಸಿತು ಜನ್ಮ..

ತಂದೆತಾಯಿ ನಡೆದಾಡುವ ದೇವರು ಬದುಕಿದ್ದಾಗಲೆ ಗೌರವಿಸಿ! ಕಳೆದುಕೊಂಡ ಮೇಲೆ ಪರಿತಪಿಸಿದರು ಮತ್ತೆ ಸಿಗರು. ಹೀಗೆ ತಮ್ಮ ತಂದೆಯನ್ನು ನೆನಪಿಸಿಕೊಂಡು ಪ್ರೀತಿಯ ಪತ್ರವನ್ನು​ ನವರಸ ನಾಯಕ ಜಗ್ಗೇಶ್​ ಬರೆದಿದ್ದಾರೆ. ಅವರು ತಂದೆಗೆ ಪತ್ರ ಬರೆಸಿರೋದು ತುಂಬಾ ತಡವಾಗಿದೆ. ಅದನ್ನು ಅವರು ಈಗಿನ ಜನರಿಗೆ ನೇರವಾಗಿ ಹೇಳಿದ್ದಾರೆ. ತಂದೆ ಹೇಳುವ ಮಾತು ಏನು ಅನ್ನೋ ಸತ್ಯ ಅರ್ಥವಾಗುವ ವೇಳೆಗೆ ಅವರಿಲ್ಲ. ಹಾಗಾಗಿ ನೀವುಗಳು ತಂದೆತಾಯಿ ಬದುಕಿದ್ದಾಗ ಪ್ರೀತಿಸಿ, ಗೌರವಿಸಿ. ಕಳೆದುಕೊಂಡ ಮೇಲೆ ನನ್ನ ಹಾಗೆ ಪರಿತಪಿಸಬೇಡಿ ಎಂದು ಸಲಹೆ ನೀಡಿದ್ದಾರೆ.

Leave a Reply