ಜನರಿಗಾಗಿ ಶಿವಳ್ಳಿ ಪ್ರಾಣತ್ಯಾಗ: ಕುಂದಗೋಳದಲ್ಲಿ ಸಚಿವ ಡಿಕೆಶಿ ಪ್ರಚಾರ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಚಿವ ಶಿವಳ್ಳಿ ಕುಂದಗೋಳ ಕ್ಷೇತ್ರದ ಜನರಿಗಾಗಿ ತನ್ನ ಆರೋಗ್ಯವನ್ನು ಲೆಕ್ಕಿಸದೇ ಪ್ರಾಣತ್ಯಾಗ ಮಾಡಿದ್ದಾರೆ. ತನಗಾಗಿ ಏನನ್ನೂ ಮಾಡಿಕೊಳ್ಳದೆ, ಎಲ್ಲವನ್ನು ಜನರಿಗಾಗಿ ಮಾಡಿದ್ದಾರೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಕುಂದಗೋಳ ವಿಧಾನಸಭಾ ಕ್ಷೇತ್ರದ ನೂಲ್ವಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಸಚಿವರು ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಕುಸುಮಾ ಶಿವಳ್ಳಿ ಪರ ಮತಯಾಚಿಸಿದರು.

ನೂಲ್ವಿ ಗ್ರಾಮದ ವೀರಶೈವ ಮಠವಾದ, ಗಂಗಾಧರ ಮಠಕ್ಕೆ ಭೇಟಿ ಮಾಡಿ ದರ್ಶನ ಪಡೆದರು. ಇದಕ್ಕೂ ಮುನ್ನ ಅವರಿಗೆ ಸುಮಗಲಿಯರಿಂದ ಆರತಿ ಬೆಳೆಗೆ ಸ್ವಾಗತ ನೀಡಲಾಯಿತು. ನಂತರ ತೆರದ ವಾಹನಯ ಪ್ರಚಾರ ಮಾಡಿದ ಸಚಿವರು ಹೇಳಿದ್ದಿಷ್ಟು…

‘ಸಿಎಸ್ ಶಿವಳ್ಳಿ ಜೀವ ಜನರಿಗಾಗಿ ಜೀವವನ್ನೇ ನೀಡಿದ್ದಾರೆ. ತನ್ನ ಆರೋಗ್ಯವನ್ನು ಲೆಕ್ಕಿಸದೆ ಈ  ಭಾಗದ ಜನರ ಸೇವೆ ಮಾಡಿದ್ದಾನೆ. ಶಿವಳ್ಳಿ ತನಗಾಗಿ ಏನು ಮಾಡಿಕೊಂಡಿಲ್ಲಾ ಕೇವಲ ಜನರಿಗಾಗಿ ಮಾಡಿದ್ದಾನೆ. ನೂರು ಜನ ಚಿಕ್ಕನಗೌಡ್ರನ್ನು ಹುಟ್ಟಬಹುದು ಆದ್ರೆ, ಆದ್ರೆ ಒಬ್ಬ ಶಿವಳ್ಳಿ ಹುಟ್ಟುವುದು ಕಷ್ಟ.

ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ದಿವಂಗತ ಸಿ ಎಸ್ ಶಿವಳ್ಳಿ ಹೋರಾಟ ಮಾಡಿದ್ದಾರೆ. ಬಿಜೆಪಿ ಎಸ್ ಐ ಚಿಕ್ಕನಗೌಡ್ರು ಹೋರಾಟ ಮಾಡಿದ್ದಾರ? ನಿಮ್ಮ ಮತವನ್ನು ಸಾಲವಾಗಿ ನಮಗೆ ಕೊಡಿ, ನಾವು ಸಾಲಗಾರರಾಗಿ ನಿಮ್ಮ ಕೆಲಸ ಮಾಡುತ್ತೇವೆ. ಚಿಕ್ಕನಗೌಡ್ರು ವೋಟ್ ಹಾಕಿಲ್ಲಾ ಅಂತಾ ನೀರು ಬಂದ್ ಮಾಡಿಸಿರೋದು ನೆನೆಪು ಇದೆಯಾ?

ನಮ್ಮ ಅಕ್ಕಾ ಕುಸುಮಕ್ಕಾ ಶಾಸಕರನ್ನಾಗಿ ಮಾಡಿ, ನಮ್ಮ ಮೈತ್ರಿ ಸರ್ಕಾರ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ. ಕುಸುಮಾ ಶಿವಳ್ಳಿ ಆಯ್ಕೆಯಾದ್ರೆ ಎರಡ್ಮೂರು ತಿಂಗಳಿಗೆ ಒಂದು‌ ಸಾರಿ ನಾನು ಕುಂದಗೋಳಕ್ಕೆ ಬಂದು ಹೋಗ್ತಿನಿ.’

ಬಿಜೆಪಿ ವಿರುದ್ಧ ವಾಗ್ದಾಳಿ:

ಆಪರೇಷನ್ ಕಮಲ ಮೂಲಕ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಕೆಡವಲು ಪ್ರಯತ್ನಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ‘ನಮ್ಮ ಶಾಸಕರು ಖರೀದಿಗಿಲ್ಲಾ ಈ ಹಿಂದೆ ಆಪರೆಷಯ ಕಮಲ ಮಾಡಿದ್ರು, ಆದ್ರೆ ಈವಾಗ ಆ ಶಕ್ತಿ ನಮಗೂ ಇದೆ. ಆದ್ರೆ ನಾವು ಅಧಿಕಾರ ದುರುಪಯೋಗ ಪಡೆಸಿಕೊಳ್ಳುವದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ವಾಹನ ಬಿಟ್ಟು ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದ ಡಿಕೆಶಿ

ಕುಂದಗೋಳ ವಿಧಾನಸಭಾ ಉಪಚುನಾವಣೆ ರೋಡ ಶೋ ನಡೆಸಬೇಕಿದ್ದ ಸಚಿವ ಡಿ ಕೆ ಶಿವಕುಮಾರ್, ತಮ್ಮ ವಾಹನವನ್ನು ಇಳಿದು ಪಾದಯಾತ್ರೆ ಮಾಡಿ  ಮೈತ್ರಿ‌ಪಕ್ಷದ ಅಭ್ಯರ್ಥಿ ಕುಸುಮ ಶಿವಳ್ಳಿ ಪರ ಮತಯಾಚನೆ ಮಾಡಿದರು.

ನೂಲ್ವಿ ಗ್ರಾಮದಲ್ಲಿ ಬೃಹತ್ ರೋಡ್ ಶೋ ಆಯೋಜನೆ ಮಾಡಲಾಗಿತ್ತು. ಗ್ರಾಮದಲ್ಲಿ ತೆರೆದ ವಾಹನದಲ್ಲಿ ಡಿಕೆಶಿ ಪ್ರಚಾರ ಮಾಡಬೇಕಿತ್ತು. ಆದ್ರೆ ರೋಡ ಶೋ ನಡೆಸಲು ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿದ್ದೀರಾ? ಎಂದು ಸಚಿವರು ಕಾರ್ಯಕರ್ತರಿಗೆ ಪ್ರಶ್ನಿಸಿದರು. ಆಗ ಕಾರ್ಯಕರ್ತರು ಅನುಮತಿ ಸಿಕ್ಕಿಲ್ಲ ಎಂಬ ಮಾಹಿತಿ ನೀಡುತ್ತದಂತೆ ವಾಹನದಿಂದ ಕೆಳಗೆ  ಇಳಿದ ಡಿಕೆಶಿ, ‘ಚುನಾವಣಾ ಆಯೋಗದವರು ನಮ್ಮ ವಾಹನವನ್ನೇ ಸೀಜ್ ಮಾಡಲು ಕಾಯ್ತಿದ್ದಾರೆ. ಈಗಾಗಲೇ ನಮ್ಮ ಪಾರ್ಟಿ ಆಫಿಸ್ಗೆ ಬೀಗ ಜಡೆದಿದ್ದಾರೆ’ ಎಂದು ಹೇಳಿ ಪಾದಯಾತ್ರೆ ಮೂಲಕವೇ ಕುಸುಮಾ ಶಿವಳ್ಳಿ ಪರ ಮತಬೇಟೆ ನಡೆಸಿದರು.

Leave a Reply