ಮೋಡದ ಮರೆಯಲ್ಲಿ ದಾಳಿ! ಮೋದಿ ಹೇಳಿಕೆಗೆ ಭಾರೀ ಲೇವಡಿ

ಡಿಜಿಟಲ್ ಕನ್ನಡ ಟೀಮ್:

ಪುಲ್ವಾಮಾ ದಾಳಿ‌ ಬಳಿಕ ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.‌ ಆದ್ರೆ ಬಾಲಾಕೋಟ್ ದಾಳಿಯನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ. 200 ರಿಂದ 300 ಮಂದು ಪಾಕಿಸ್ತಾನ ಮೂಲದ ಉಗ್ರರು ಹತರಾಗಿದ್ದಾರೆ ಎಂದು ಹೇಳಿಕೊಂಡಿತ್ತು.‌ ಆದ್ರೆ ಅಧಿಕೃತವಾಗಿ ಯಾವುದೇ ಸಾವು ನೋವಿನ ಬಗ್ಗೆ ಸಾಕ್ಷ್ಯ ಕೊಟ್ಟಿರಲಿಲ್ಲ. ಆದರೂ ದೇಶದ ಜನ ಕೇಂದ್ರ ಸರ್ಕಾರವನ್ನು ದೇಶ ರಕ್ಷಣೆ ವಿಚಾರದಲ್ಲಿ ನಂಬಿಕೆ ಇರಿಸಿದ್ದರು. ಅದೇನೆ ಆಗಲಿ‌ ದೇಶ ರಕ್ಷಣೆ ವಿಚಾರ ಅನ್ನೋ ಕಾರಣಕ್ಕೆ ಜನ ಬೆಂಬಲ ನೀಡಿದ್ರು. ಇದೀಗ ಪ್ರಧಾನಿ ನರೇಂದ್ರ ಮೋದಿ ಈ ದಾಳಿ ಬಗ್ಗೆ ನೀಡಿರುವ ಹೇಳಿಕೆ ವಿರೋಧಿಗಳ ಲೇವಡಿಗೆ ಕಾರಣವಾಗಿದೆ.

ಬಾಲಾಕೋಟ್ ವಾಯುದಾಳಿ ನಡೆಸುವ ದಿನ ರಾತ್ರಿ 1.30 ರಿಂದ 2.15 ಎಂದು ಸಮಯ ನಿಗದಿ ಮಾಡಲಾಗಿತ್ತು. ಮಧ್ಯರಾತ್ರಿ 12 ಗಂಟೆಗೆ ನಾನು ಅಧಿಕಾರಿಗಳ ಸಭೆ ನಡೆಸಿದ್ದೆ, ಆ ವೇಳೆಯಲ್ಲಿ ಬಾಲಾಕೋಟ್‌ನಲ್ಲಿ ಭಾರೀ ಮಳೆಯಾಗ್ತಿತ್ತು.‌ ಮೋಡ ಕವಿದ ವಾತಾವರಣ ಇತ್ತು. ಹಾಗಾಗಿ ಅಧಿಕಾರಿಗಳು ಆಪರೇಷನ್ ಸಕ್ಸಸ್ ಆಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಮತ್ತೊಂದು ದಿನಾಂಕ ನಿಗದಿ ಮಾಡೋಣ ಎನ್ನುವ ಸಲಹೆ ನೀಡಿದ್ರು. ಆದ್ರೆ ನಾನು ಆ ವಿಚಾರದಲ್ಲಿ ಅಷ್ಟೊಂದು ತಿಳಿದ ವ್ತಕ್ತಿ‌ ಅಲ್ಲದಿದ್ದರೂ ಮೋಡ, ಮಳೆ ಇರೋದ್ರಿಂದ ನಮಗೆ ಹೆಚ್ಚು ಅನುಕೂಲ, ಮಳೆ ಜೊತಗೆ ಮೋಡ ಇರುವುದರಿಂದ ಪಾಕಿಸ್ತಾನದ ರೇಡಾರ್ ನಮ್ಮ ಯುದ್ಧ ವಿಮಾನವನ್ನು ಪತ್ತೆ ಹಚ್ಚಲಾರದು ಎಂದು ಸೂಚಿಸಿದ್ದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ವಾಯುಪಡೆ ಹಾಗೂ ರಕ್ಷಣಾ ತಜ್ಞರ ಸಲಹೆಯನ್ನು ಧಿಕ್ಕರಿಸಿದ್ದಕ್ಕೆ ದಾಳಿ ವಿಫಲವಾಯಿತು ಎಂದು ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ರೆ, ಪಾಕಿಸ್ತಾನ ರೇಡಾರ್ ಮೋಡದಲ್ಲಿ ಕೆಲಸ ಮಾಡಲ್ಲ ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿದ್ದು, ಭವಿಷ್ಯದಲ್ಲಿ ಅನಾನುಕೂಲ ಎಂದು ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ. ಸೀತಾರಾಮ ಯೆಚೂರಿ, ಕಾಂಗ್ರೆಸ್ ಸೇರಿದಂತೆ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ರೇಡಾರ್ ಹೇಗೆ ಕೆಲಸ ಮಾಡುತ್ತೆ ಅನ್ನೋ ಪರಿಜ್ಞಾನ ಇಲ್ಲ. ಆದರೂ ಹೇಳಿಕೆ ನೀಡುವ ಮೂಲಕ ವಾಯುಪಡೆಗೆ ಅವಮಾನ ಮಾಡಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಮಾಜಿ ಸಂಸದೆ ರಮ್ಯಾ ಕೂಡ ಮೋದಿಯವರ ಕಾಲೆಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪುಲ್ವಾಮಾ ದಾಳಿ ಬಳಿಕ ಬಾಲಾಕೋಟ್ ದಾಳಿ ನಡೆದಿತ್ತು. ಈ ವೇಳೆ ಪ್ರತಿಕ್ರಿಯೆ ಕೊಟ್ಟಿದ್ದ ಮಾಜಿ ಪ್ರಧಾನಿ ದೇವೇಗೌಡರು, ದಾಳಿ ಮಾಡುವುದಾದರೆ ಮಾಡಿ ಎಂದು ಪ್ರಧಾನಿಗೆ ಸಲಹೆ ನೀಡಿದ್ದೆ ಎಂದಿದ್ದ ಹೇಳಿಕೆ ಭಾರೀ ಟ್ರೋಲ್ ಆಗಿತ್ತು. ಅದೇ ರೀತಿ‌ ಮೋದಿ ಮಾತು ಭಾರೀ ಟ್ರೋಲ್ ಆಗ್ತಿದೆ.‌ ಸೂರ್ಯಯಾನ ಸಾಧ್ಯವಿಲ್ಲ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ರೆ, ಮೋದಿ ರಾತ್ರಿ ವೇಳೆಯಲ್ಲಿ ಸೂರ್ಯಯಾನ ಸಕ್ಸಸ್ ಆಗುತ್ತೆ ಎಂದಿದ್ದಾರೆ ಎನ್ನುವ ಹೊಸ ಬರಹ ಗಮನ ಸೆಳೆಯುತ್ತಿದೆ. ಇನ್ನು ಚಂದ್ರಯಾನ ನಡೆಸಲು ಇಸ್ರೋ ಸಿದ್ಧ ಇರಲಿಲ್ಲ.‌ ಚಂದ್ರಯಾನ ಸಕ್ಸಸ್ ಆಗಲು ಹುಣ್ಣಿಮೆ ದಿನ ಕಾರ್ಯಾಚರಣೆ ನಡೆಸಿ, ಆಗ ಪೂರ್ಣಚಂದ್ರ ಇರೋದ್ರಿಂದ ನೌಕೆ ಇಳಿಯಲು ಹೆಚ್ಚು ಜಾಗ ಸಿಗುತ್ತೆ ಎಂದು ಹೇಳಿದ್ದು ಇದೇ ನರೇಂದ್ರ ಮೋದಿ ಎನ್ನುವ ಟೀಕಾಸ್ತ್ರಗಳು ಜೋರಾಗಿವೆ. ಒಟ್ಟಾರೆ ಮಾತಿನ ಚತುರ ಪ್ರಧಾನಿ ನರೇಂದ್ರ ಮೋದಿ ಯಾಮಾರಿದ ನೀಡಿದ ಹೇಳಿಕೆ ಟ್ರೋಲ್ ಆಗುತ್ತಿದೆ.

Leave a Reply