ಮೋದಿ ಮೀರಿಸಿದ ಗಾಂಧಿ ಕುಟುಂಬದ ಕುಡಿಗಳು!

ಡಿಜಿಟಲ್ ಕನ್ನಡ ಟೀಮ್:

ಸ್ವಾತಂತ್ರ್ಯ ಭಾರತವನ್ನು ಅತಿ ಹೆಚ್ಚು ಕಾಲ ಆಳಿದ್ದು ಕಾಂಗ್ರೆಸ್ ಪಕ್ಷ. ಅದರಲ್ಲೂ ಗಾಂಧಿ ಕುಟುಂಬ. ಜವಾಹರಲಾಲ್ ನೆಹರು 17 ವರ್ಷದ ಆಳ್ವಿಕೆ ಬಳಿಕ ಬಳಿಕ ರಾಜಕಾರಣಕ್ಕೆ ಬಂದ ಇಂದಿರಾಗಾಂಧಿ, ಬರೋಬ್ಬರಿ 16 ವರ್ಷಗಳ ಕಾಲ ಆಡಳಿತ ನಡೆಸಿದ್ರು. ಆ ಬಳಿಕ ಆದಿಕಾರಕ್ಕೆ ಏರಿದ ರಾಜೀವ್ ಗಾಂಧಿ 5 ವರ್ಷ ಪ್ರಧಾನಿಯಾಗಿದ್ರು. ಆ ನಂತ್ರ ಮನಮೋಹನ್ ಸಿಂಗ್ 10 ವರ್ಷ ಕಾಲ ಪ್ರಧಾನಿಯಾಗಿದ್ದರೂ ಬೆನ್ನೆಲುಬಾಗಿ ಇದ್ದಿದ್ದು ಸೋನಿಯಾ ಗಾಂಧಿ. ಒಟ್ಟಾರೆ ಗಾಂಧಿ ಕುಟುಂಬದಲ್ಲಿ ಆಡಳಿಯ ಅನ್ನೋದು ಸೊಂಟ ಮುರಿದುಕೊಂಡು ಬಿದ್ದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಟ್ಟದಿಂದ ಇಳಿಸುವುದಕ್ಕೆ ಪ್ರಯತ್ನ‌ ನಡೆಸಿರೋದು ಅದೇ ಗಾಂಧಿ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿಗಳು. ರಾಹುಲ್ ಗಾಂಧಿ‌ ಹಾಗೂ ಪ್ರಿಯಾಂಕಾ ಗಾಂಧಿ.

ಅಣ್ಣ ರಾಹುಲ್ ಗಾಂಧಿ‌ ಹಾಗೂ ತಂಗಿ ಪ್ರಿಯಾಂಕಾ ಗಾಂಧಿ ರಾಜಕಾರಣದಲ್ಲಿ‌ ನಿಧಾನವಾಗಿ ಪ್ರಬುದ್ಧತೆ ತೋರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯಾಕಂದ್ರೆ ರಾಜಕಾರಣದಲ್ಲಿ‌ ಸೋಲು ಗೆಲುವನ್ನು ಕಾಣದೆ ಕುಟುಂದ ಹೆಸರಿನ ಮೇಲೆ ಅಧಿಕಾರ ಅನುಭವಿಸುತ್ತಿದ್ದಾರೆ ಅನ್ನೋ ಮಾತಿಗೆ ಅಪವಾದ ಎನ್ನುವಂತೆ ತಮ್ಮ ನಡವಳಿಕೆ ಪ್ರದರ್ಶನ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿ ಬಗ್ಗೆ ಬಾರೀ ಟೀಕೆ ಮಾಡಿದ್ರು. ಭ್ರಷ್ಟಾಚಾರಿ ನಂಬರ್ ಒನ್ ಎಂದರೆ ಅದು ರಾಜೀವ್ ಗಾಂಧಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ಆರೋಪದ ಕರಿನೆರಳಲ್ಲೇ ಸಾವನ್ನಪ್ಪಿದ್ರು ಎಂದು ಆರೋಪಿಸಿದ್ರು. ಆ ಬಳಿಕ ಯುದ್ಧನೌಕೆಯನ್ನು ತಮ್ಮ ಟ್ಯಾಕ್ಸಿ ತರ ಬಳಸಿಕೊಂಡು ರಜೆ ದಿನಗಳನ್ನು ಐಶಾರಾಮಿಯಾಗಿ ಕಳೆಯಲು ಬಳಸಿಕೊಂಡಿದ್ರು ಎಂದು ಟೀಕೆ ಮಾಡಿದ್ರು. ಬದುಕಿಲ್ಲದವರ ಬಗ್ಗೆ ಟೀಕೆ ಸರಿಯಲ್ಲ ಅನ್ನೋ ಮಾತುಗಳೂ ಕೇಳಿಬಂದಿದ್ದವು. ಆದ್ರೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳಿಗೆ ತಿರುಗೇಟು ಕೊಟ್ಟಿರುವ ರಾಹುಲ್ ಗಾಂಧಿ, ನನ್ನ ಪ್ರಾಣ ಹೋದರೂ ಸರಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪ, ಅಮ್ಮನ ಗೌರವಕ್ಕೆ ಧಕ್ಕೆ ತರಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

ಇನ್ನೂ ಪ್ರಿಯಾಂಕಾ ಗಾಂಧಿ ಕೂಡ ಕಡಿಮೆ ಏನಿಲ್ಲ. ಹಲವು ಕಾಂಗ್ರೆಸ್ ನಾಯಕರು ಪ್ರಚಾರ ನಡೆಸುವಾಗ ಅಥವಾ ರೋಡ್ ಶೋ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲುವ ಬಿಜೆಪಿ ಕಾರ್ಯಕರ್ತರು ಅಥವಾ ಅಂದಾಭಿಮಾನಿಗಳು ಮೋದಿ ಮೋದಿ ಎಂದು ಘೋಷಣೆ ಕೂಗುವುದು ಸಾಮಾನ್ಯ ಸಂಗತಿ. ಆದ್ರೆ ಇದೇ ರೀತಿ ಮಂಗಳವಾರ ಮಧ್ಯಪ್ರದೇಶದ ಸಿಎಂ ಕಮಲನಾಥ್ ಜೊತೆ ಇಂಧೋರ್‌ನಲ್ಲಿ ರೋಡ್ ಶೋ ನಡೆಸಿ ತೆರಳುವಾಗ ಮೋದಿ ಅಭಿಮಾನಿಗಳು ಮೋದಿ ಮೋದಿ ಘೋಷಣೆ ಕೂಗಿದರು. ಕಾರಿನಲ್ಲಿ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಕಾರಿನಿಂದ ಇಳಿದು ಮೋದಿ ಅಭಿಮಾನಿಗಳನ್ನು ಮಾತನಾಡಿಸಲು ಮುಂದಾದರು. ಆ ವೇಳೆ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಹಸ್ತಲಾಘವ ನೀಡಿ ಶುಭಕೋರಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಅಚ್ಚರಿಯ ನಡವಳಿ ಕಂಡು ಭದ್ರತಾ ಸಿಬ್ಬಂದಿ ಜೊತೆ ಬಿಜೆಪಿ ಕಾರ್ಯಕರ್ತರೇ ಅವಕ್ಕಾಗಿದ್ದಾರೆ. ಒಟ್ಟಾರೆ ಅಣ್ಣ ರಾಹುಲ್ ಗಾಂಧಿ ಒಂದು ರೀತಿ ಪ್ರಬುದ್ಧತೆ ತೋರಿಸಿದ್ರೆ, ತಂಗಿ ಇನ್ನೊಂದು ರೀತಿಯಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದಾರೆ. ಗಾಂಧಿ ಕುಟುಂಬದಲ್ಲಿ ಜನಿಸಿದ್ದಕ್ಕೂ ಸಾರ್ಥಕ ಎನ್ನುವಂತಾಗಿದೆ ಇಬ್ಬರ ನಡವಳಿಕೆ. ಚುನಾವಣೆಯಲ್ಲಿ ಸೋಲು ಗೆಲುವುದು ಎರಡನೇ ಮಾತು. ರಾಜಕಾರಣಿಗಳ ನಡವಳಿಕೆ ಪ್ರಮುಖವಾಗುತ್ತದೆ.

Leave a Reply