ಕುಮಾರಸ್ವಾಮಿ ಸರ್ಕಾರದಲ್ಲಿ 3ನೇ ವಿಕೆಟ್ ಪತನ..! ಯಾರು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಬೀಳುತ್ತೆ ಅನ್ನೋ ವದಂತಿ ರಾಜ್ಯಾದ್ಯಂತ ಹಬ್ಬಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸರ್ಕಾರ ಬೀಳೋದಿಲ್ಲ, ಬಿಜೆಪಿ ನಾಯಕರು ಅಧಿಕಾರದ ಆಸೆಯಲ್ಲಿ ಈ ರೀತಿಯ ಕನಸು ಕಾಣ್ತಿದ್ದಾರೆ ಅಂತಾರೆ. ಆದ್ರೆ ಪ್ರತಿದಿನ ಒಂದಲ್ಲ ಒಂದು ರೀತಿಯ ವಿವಾದಿತ ಹೇಳಿಕೆಗಳನ್ನು ಕೊಡುವ ಮೂಲಕ ಮೈತ್ರಿ ಸರ್ಕಾರದಲ್ಲಿ ಏನೋ ಸ್ವಲ್ಪ ಸರಿಯಿಲ್ಲ ಎನ್ನುವುದನ್ನು ತಾವೇ ಬಹಿರಂಗವಾಗಿ ತೋರಿಸಿಕೊಳ್ತಾರೆ. ಈ ನಡುವೆ ಕುಮಾರಸ್ವಾಮಿ ಸಂಪುಟದಿಂದ ಮೂರನೇ ವಿಕೆಟ್ ಪತನವಾಗೋದು ಕನ್ಪರ್ಮ್ ಆಗಿದ್ಯಂತೆ.

ಕುಮಾರಸ್ವಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲಿ ಕುಮಾರಸ್ವಾಮಿ ನೇತೃತ್ವದ ಸಂಪುಟದಿಂದ ಮೂರನೇ ಸಚಿವರು ಜಾಗ ಖಾಲಿ ಮಾಡುವ ಸಮತ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸಾಧ್ಯವಾಗದ ಕಾರಣಕ್ಕೆ ಸಚಿವರಾಗಿದ್ದ ಬಿಎಸ್‌ಪಿಯ ಎನ್ ಮಹೇಶ್ ರಾಜೀನಾಮೆ ನೀಡಿದ್ದರು. ಅದೇ ರೀತಿ ಸಚಿವರಾಗಿ ಇದ್ದರೂ ಪಕ್ಷ ವಿರೋಧಿ ಕೆಲಸ ಮಾಡಿದ ಆರೋಪದಿಂದ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿಗೆ ಸಂಪುಟದಿಂದ ಕೊಕ್ ಕೊಡಲಾಗಿತ್ತು. ಇದೀಗ ಮತ್ತೋರ್ವ ಸಚಿವನನ್ನು ಕೈಬಿಡುವ ಪ್ರಸಂಗ ಎದುರಾಗಿದೆ ಎನ್ನಲಾಗ್ತಿದೆ. ಇದನ್ನು ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ಖಚಿತ ಪಡಿಸಿದ್ದಾರೆ ಎನ್ನುತ್ತವೆ ಮೂಲಗಳು.

ಕಳೆದ ಶನಿವಾರ ಸಿಎಂ ಕುಮಾರಸ್ವಾಮಿ ಸಚಿವ ಸಂಪುಟ ಸಭೆ ಕರೆದಿದ್ರು. ಈ ವೇಳೆ ಕೃಷ್ಣಭೈರೇಗೌಡ ಅವರು ಸಂಪುಟಕ್ಕೆ ರಾಜೀನಾಮೆ ನೀಡುವ ವಿಚಾರ ಚರ್ಚೆಯಾಗಿದೆ ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ ಮಾತಿನಿಂದ ಇಡೀ ಸಂಪುಟವೇ ಕೆಲಕಾಲ ದಿಗ್ಬ್ರಾಂತಿಯಿಂದ ನಿಶಬ್ಧವಾಗಿತ್ತು. ಆ ಬಳಿಕ ಸ್ಪಷ್ಟನೆ ಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೃಷ್ಣಭೈರೇಗೌಡರು ಸದಾನಂದ ಗೌಡರನ್ನು ಸೋಲಿಸುವುದು ಖಚಿತವಾಗಿದೆ. ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ರಾಜೀನಾಮೆ ನೀಡಬೇಕಾಗುತ್ತೆ ಎಂದಿದ್ದಾರೆ. ಜೊತೆಗೆ ಫಲಿತಾಂಶ ಪೂರ್ವದಲ್ಲೇ ಕೃಷ್ಣಭೈರೇಗೌಡರಿಗೆ ಅಭಿನಂದನೆ ಸಲ್ಲಿಸಲಾಯ್ತು ಎನ್ನಲಾಗಿದ್ದು, ಸಂಪುಟ ಸಹೋದ್ಯೋಗಿಗಳು ನಿಟ್ಟುಸಿರು ಬಿಟ್ಟರು ಅನ್ನೋದು ಮೂಲಗಳ ಮಾಹಿತಿ. ಒಟ್ಟಾರೆ ಸಿಎಂ ಹೇಳಿರುವಂತೆ ಸಚಿವ ಕೃಷ್ಣಭೈರೇಗೌಡ ಸಂಸದರಾಗಿ ಆಯ್ಕೆಯಾದರೆ ಸರ್ಕಾರ ಮೂರನೇ ವಿಕೆಟ್ ಪತನ ಗ್ಯಾರಂಟಿ.

Leave a Reply