ಧರ್ಮಸ್ಥಳದ ಪ್ರವಾಸ ಮುಂದೂಡಿ! ಭಕ್ತರಿಗೆ ಧರ್ಮಾಧಿಕಾರಿ ಮನವಿ ಮಾಡಿರೋದು ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಧರ್ಮಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿರುವ ಭಕ್ತರು, ಪ್ರವಾಸಿಗರು ತಮ್ಮ ಪ್ರಯಾಣವನ್ನು ಮುಂದೂಡಿ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ.

ಹೌದು, ಈ ಬಾರಿ ಬರದ ಭೀಕರತೆ ಹೆಚ್ಚಾಗಿದ್ದು ರಾಜ್ಯದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬರದ ಎಫೆಕ್ಟ್ ಈಗ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ತಟ್ಟಿದ್ದು, ಯಾತ್ರಾರ್ಥಿಗಳ ಅಗತ್ಯಕ್ಕೆ ತಕ್ಕಷ್ಟು ನೀರು ಇಲ್ಲವಾಗಿದೆ ಹೀಗಾಗಿ ಧರಮಾಧಿಕಾರಿಗಳು ಪತ್ರ ಬರೆದು ತಮ್ಮ ಪ್ರವಾಸವನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಧರಮಾಧಿಕಾರಿಗಳ ಪತ್ರ ಇಲ್ಲಿದೆ…

Leave a Reply