ಮೈಸೂರು ಶೂಟೌಟ್, ₹500 ಕೋಟಿ ಡೀಲ್..! ಹಣ ಯಾರದ್ದು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ಸಾಂಸ್ಕೃತಿಕ ನಗರಿ ಮೈಸೂರು ನಿವೃತ್ತರ ಸ್ವರ್ಗ ಅನ್ನೊ ಖ್ಯಾತಿ ಪಡೆದಿದೆ. ಆದ್ರೆ ಗುರುವಾರ ಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ನಡೆದ ಶೂಟೌಟ್​ ಎಲ್ಲರ ಎದೆಯಲ್ಲಿ ಝಲ್ ಎನಿಸಿತ್ತು. ಶೂಟೌಟ್‌ನಲ್ಲಿ ಓರ್ವ ಸಾವನ್ನಪ್ಪಿದರೆ. ಮತ್ತಿಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಗದೆ ಎಸ್ಕೇಪ್​ ಆಗಿದ್ದರು. ಆ ಬಳಿಕ ಪೊಲೀಸರು ಸರಿಯಾದ ಮಾಹಿತಿ ನೀಡದ ಕಾರಣಕ್ಕೆ ಶೂಟೌಟ್​ ಬಗ್ಗೆಯೇ ಅನುಮಾನ ಮೂಡಿತ್ತು. ಪೊಲೀಸ್ರು ಯಾವುದೋ ದುರಾಲೋಚನೆಯಿಂದ ಪ್ಲಾನ್ ಮಾಡಿ ಎನ್‌ಕೌಂಟರ್ ಮಾಡಿದ್ರಾ ಅನ್ನೋ ಅನುಮಾನವೂ ಮೂಡಿತ್ತು. ಯಾಕಂದ್ರೆ ಅಮಾನ್ಯಗೊಂಡ ಹಳೆಯ ₹500 ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ ಹೆಸರಲ್ಲಿ ದಂಧೆ ನಡೆಯುತ್ತಿತ್ತು. ಆ ವೇಳೆ ಬಂಧನ ಮಾಡುಲು ತೆರಳಿದ ವಿದ್ಯಾನಗರ ಪೊಲೀಸ್ರ ಮೇಲೆ ಹಲ್ಲೆಗೆ ಯತ್ನ ನಡೆದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿತ್ತು. ಆದ್ರೆ ಎಷ್ಟು ಹಣವನ್ನು ಸೀಜ್ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ ಪೊಲೀಸರ ಬಳಿ ಉತ್ತರ ಇರಲಿಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಆ ಪ್ರಕರಣಕ್ಕೆ ಒಂದು ಹೊಸ ಟ್ವಿಸ್ಟ್​ ಸಿಕ್ಕಿದೆ. ಈ ಶೂಟೌಟ್ ಹಿಂದೆ ಬರೋಬ್ಬರಿ ₹500 ಕೋಟಿ ವ್ಯವಹಾರ ಇದೆ ಅನ್ನೋದು ಪತ್ತೆಯಾಗಿದೆ.

ಮೈಸೂರಿನಲ್ಲಿ 2ವರ್ಷಗಳ ಹಿಂದೆ ಅಮಾನ್ಯಗೊಂಡ ₹500 ಹಾಗೂ ₹1000 ಮುಖಬೆಲೆ ನೋಟುಗಳ ಎಕ್ಸ್​ಚೇಂಜ್​ ಮಾಡಿ ಈಗಿನ ಹೊಸ ನೋಟುಗಳನ್ನು ಕೊಡ್ತೇವೆ ಎಂದು ನಂಬಿಸಿ ವಂಚನೆ ಮಾಡಲಾಗಿತ್ತು. ಮೈಸೂರಿನ ವ್ಯಕ್ತಿಯೊಬ್ಬರ ಬಳಿ ಹಳೇ ನೋಟುಗಳಿದ್ದವು ಅನ್ನೋ ಮಾಹಿತಿ ಮೇಲೆ ಸುಖ್​ವಿಂದರ್ ಸಿಂಗ್ ಸಂಪರ್ಕ ಮಾಡಿದ್ದ. ಈತನ ಜೊತೆಗೆ ಮುಂಬೈ ಮೂಲದ ಇನ್ನಿಬ್ಬರು ಬಂದಿದ್ದರು. ಹಳೇ ನೋಟಿಗೆ ಹೊಸ ನೋಟು ಕೊಡೋದಾಗಿ ಡೀಲ್ ಮಾಡಿದ್ದ ಖದೀಮರು, ಮೈಸೂರಿನ ವ್ಯಕ್ತಿಯಿಂದ ₹10 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೂ ಹೊಸ ನೋಟು ಕೊಡದೇ ವಂಚನೆ ಮಾಡಿದ್ದರು. ಇದೀಗ ಮತ್ತೆ ನೋಟು ಬದಲಾವಣೆ ಹೆಸರಲ್ಲಿ ಸಂಪರ್ಕ ಮಾಡಿದಾಗ ನೋಟು ಎಕ್ಸ್‌ಚೇಂಜ್ ಹೆಸರಲ್ಲಿ ಮೋಸ ಹೋಗಿದ್ದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಪೊಲೀಸ್ರು ಬಂಧನಕ್ಕೆ ಮುಂದಾಗಿದ್ದ ವೇಳೆಯಲ್ಲಿ ಹಲ್ಲೆ ಯತ್ನ ನಡೆದಿದ್ದು ಪೊಲೀಸ್ರು ಫೈರ್ ಮಾಡಿದ್ದಾರೆ ಅನ್ನೋದು ಸದ್ಯದ ಮಾಹಿತಿ.

*ಯಾರ ಬಳಿ ಇನ್ನೂ ಇದೆ ₹500 ಕೋಟಿ ರೂಪಾಯಿ..?*

₹500 ಕೋಟಿ ರೂಪಾಯಿ ಮೌಲ್ಯ ಹಳೆಯ ನೋಟುಗಳನ್ನು ಹೊಸ ನೋಟಿನ ಜೊತೆ ಬದಲಾವಣೆ ಮಾಡಿಸಿಕೊಡಲು ಈ ತಂಡ ಬಂದಿತ್ತು ಅನ್ನೋದು ಸದ್ಯಕ್ಕೆ ಸಿಕ್ಕಿರುವ ಪೊಲೀಸ್ ಮೂಲಗಳ ಮಾಹಿತಿ. ‌ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ₹ 500 ಕೋಟಿ ಡೀಲ್ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ₹10 ಮುಂಗಡ ಪಡೆದು ವಂಚನೆ ಮಾಡಿರುವ ಬಗ್ಗೆಯೂ ಮಾಹಿತಿ ಇದೆ. ಆದ್ರೆ ಆ ದೂರುದಾರ ಯಾರು. ₹500 ಕೋಟಿ ಹಣದ ಬಗ್ಗೆ ಬಾಯ್ಬಿಟ್ಟವನನ್ನು ಪೊಲೀಸ್ರು ಬಂಧಿಸಿದ್ದಾರಾ..? ಅನ್ನೋ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ಹೊಸ ಯೋಜನೆಯಂತೆ ಗರಿಷ್ಠ ಹತ್ತು ಹಳೆಯ ನೋಟುಗಳನ್ನು ಹೊಂದಲು ಅವಕಾಶವಿದೆ. ₹500 ಹಣದ ಮಾಹಿತಿ ಕೊಟ್ಟವನನ್ನು ಪೊಲೀಸ್ರು ಬಿಟ್ಟಿದ್ಯಾಕೆ..? ಅನ್ನೋ ಅನುಮಾನ ಶುರುವಾಗಿದೆ. ಲೋಕಸಭಾ ಚುನಾವಣೆ ವೇಳೆ ಚುನಾವಣಾ ಅಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟದ್ದರು. ಆದರೂ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಪತ್ತೆಯಾಗದೆ ಇರುವುದು ಅಚ್ಚರಿಯ ವಿಚಾರ.‌

Leave a Reply