ಹರಿ-ಹರನ ಭಜಿಸಲು ಹಿಮಾಲಯಕ್ಕೆ ಹೊರಟ ಮೋದಿ..!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ, ಮಹಾನ್ ದೈವಭಕ್ತ ಎನ್ನುವುದು ಇಡೀ ಜಗತ್ತಿಗೇ ಗೊತ್ತಿರೋ ರಹಸ್ಯ. ಇದೀಗ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಇಂದು ಮನೆ ಮನೆ ಪ್ರಚಾರ ಕಾರ್ಯ ನಡೆಯಲಿದೆ. ನಾಳೆ ಅಂತಿಮ 7ನೇ ಹಂತದ ಮತದಾನ ನಡೆದರೆ ಮೇ 23 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈಗಾಗಲೇ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ದೈವದ ಮೊರೆ ಹೊರಟಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಕಳೆದ 2 ತಿಂಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶ ಸಂಚಾರ ಮಾಡಿದ್ದ ಚೌಕಿದಾರ್ ನರೇಂದ್ರ ಮೋದಿ, ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ್ ರಾಜ್ಯಕ್ಕೆ 2 ದಿನಗಳ​ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಗೆಲುವಿಗಾಗಿ ಮಹಾದೇವನಿಗೆ ಮೊರೆ ಇಡಲಿದ್ದಾರೆ. ಚುನಾವಣಾ ಜಂಜಾಟ ನಿನ್ನೆಗೆ ಬಹಿರಂಗ ಪ್ರಚಾರದಲ್ಲಿ ಅಂತ್ಯವಾಗಿದ್ದು, ಅಧಿಕಾರ ರಚನೆ ಕಸರತ್ತಿಗೆ ಮನಸ್ಸನ್ನು ತಯಾರಿ ಮಾಡಿಕೊಳ್ಳಲು ಹೋಗಿದ್ದಾರೆ ಎನ್ನಲಾಗಿದೆ.

ಉತ್ತರಾಖಂಡ್​ನ ಚಾರ್‌ಧಾಮ್ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚುಮೆಚ್ಚಿನ ತಾಣಗಳು. ಸಾಕಷ್ಟು ಬಾರಿ ಭೇಟಿ ಕೊಟ್ಟಿರುವ ಪ್ರಧಾನಿ ಮೋದಿ ತಪಸ್ಸನ್ನು ಕೈಕೊಂಡಿದ್ದಾರೆ. ಕೇದಾರನಾಥದಲ್ಲಿ ಮುಕ್ಕಣ್ಣನನ್ನು ಭಜಿಸಿ, ಪ್ರಾರ್ಥನೆ ಸಲ್ಲಿಸಲಿದ್ದು, ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಆ ಬಳಿಕ ಬದ್ರಿನಾಥಕ್ಕೆ ಭೇಟಿ ಕೊಡಲಿರುವ ಪ್ರಧಾನಿ‌ ಮೋದಿ, ನಾರಾಯಣ ಪೂಜೆ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಲಿ ಎಂದು ಹರ ಹರಿಯಲ್ಲಿ ಪ್ರಾರ್ಥಿಸಲಿದ್ದಾರೆ ಎನ್ನಲಾಗಿದೆ.

Leave a Reply