ಮಂಡ್ಯಕ್ಕೆ ಬೆಂಕಿ ಬೀಳಲಿದೆ ಹುಷಾರ್..! ಡಿಸಿ ಎಚ್ಚರಿಕೆ..!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆ ಕಾವು ಇಡೀ ದೇಶಕ್ಕೆ ಬಿಸಿ ಮುಟ್ಟಿಸಿತ್ತು. ಮಾಧ್ಯಮಗಳು ಇಡೀ ಮಂಡ್ಯದ ಹಳ್ಳಿ ಹಳ್ಳಿಗಳ ಜನರ ನಾಡಿಮಿಡಿತವನ್ನು ದೇಶದ ಜನರಿಗೆ ತಲುಪಿಸುವ ಕೆಲಸ ಮಾಡಿದ್ವು. ದೇಶದ ಹಾಗೂ ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಚುನಾವಣೆ ಇದೆಯೋ ಇಲ್ಲವೋ ಅನ್ನುವಷ್ಟರ ಮಟ್ಟಿಗೆ ಮಂಡ್ಯ ತನ್ನ ಬಲಪ್ರದರ್ಶ ಮಾಡಿತ್ತು. ಇಷ್ಟಕ್ಕೆಲ್ಲಾ ಕಾರಣ ಅಂದ್ರೆ ಮಂಡ್ಯದಲ್ಲಿ ಸ್ಪರ್ಧಿಸಿದ್ದ ಇಬ್ಬರು ಘಟಾನುಘಟಿ ಸ್ಪರ್ಧಾಳುಗಳು. ಒಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ, ಇನ್ನೊಂದು ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧೆ ಮಾಡಿದ್ದು. ಅದರಲ್ಲೂ ಜೆಡಿಎಸ್ ಅಭ್ಯರ್ಥಿಗೆ ಎದುರಾಳಿಯಾಗಿದ್ದ ಸುಮಲತಾಗೆ ಮೈತ್ರಿ ಪಕ್ಷ ಕಾಂಗ್ರೆಸ್ ನಾಯಕರೇ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಸಪೋರ್ಟ್ ಮಾಡಿದ್ದು. ಜೊತೆಗೆ ಬಿಜೆಪಿ ಹಾಗೂ ರೈತ ಪಕ್ಷ, ಸಿನಿಮಾ ನಟರಾದ ದರ್ಶನ್ ಹಾಗೂ ಯಶ್ ಪ್ರಚಾರದ ಅಂಗಳಕ್ಕೆ ಧುಮುಕಿದ್ದು ರಣಕಣ ರಂಗೇರುವಂತೆ ಮಾಡಿತ್ತು.

ಮಂಡ್ಯದಲ್ಲಿ ಫಲಿತಾಂಶ ದಿನ ಭಾರೀ ಘರ್ಷಣೆ ನಡೆಯುವ ಸಾಧ್ಯತೆಯಿದ್ದು, ಗೆದ್ದವರು ಸೋತವರ ಮನೆ ಮುಂದೆ ಪಟಾಕಿ ಸಿಡಿಸುವ ಅಥವಾ ಮನೆಗಳಿಗೆ ಬೆಂಕಿ ಹಚ್ಚುವ ಸಾಧ್ಯತೆ ಇದೆ ಎಂದಿರುವ ಜಿಲ್ಲಾಡಳಿತ ಕಟ್ಟುನಿಟ್ಟಾಗಿ 144 ಸೆಕ್ಷನ್ ಜಾರಿ ಮಾಡಬೇಕು ಎಂದು ಸೂಚನೆ ರವಾನಿಸಲಾಗಿದೆ. ಯಾವುದೇ ಅಭ್ಯರ್ಥಿ ಸೋಲು ಅಥವಾ ಗೆಲುವಿನ ಬಳಿಕ ಉಭಯ ಕಾರ್ಯಕರ್ತರ ನಡುವೆ ಭಾರೀ ಗಲಾಟೆ ಆಗುವ ಸಾಧ್ಯತೆಯಿದ್ದು, ಘರ್ಷಣೆ, ಕಲ್ಲುತೂರಾಟ ನಡೆಯಬಹುದು. ಹಲ್ಲೆ ನಡೆಸಿ ಮನೆಗಳಿಗೆ ಬೆಂಕಿ ಹಚ್ಚುವ ಸಾಧ್ಯತೆಯೂ ಇದೆ ಸ್ವತಃ ಮಂಡ್ಯ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.

ಇದೀಗ 144 ಸೆಕ್ಷನ್ ಜಾರಿ ಮಾಡಿದ್ದು, ಮೇ 23ರಂದು ಸಭೆ ಸೇರುವುದು, ವಿಜಯೋತ್ಸವ ಆಚರಣೆ, ಪಟಾಕಿ ಸಿಡಿಸುವುದು, ಗುಂಪು ಗುಂಪಾಗಿ ನಿಂತು ಮಾತನಾಡುವುದು ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ನಿಷೇಧ ಮಾಡಿ ಆದೇಶ ಮಾಡಿದೆ. ಈ ಆದೇಶ ಮೇ 23 ರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದ್ದು, ಮೇ 24ರ ಮಧ್ಯರಾತ್ರಿ ತನಕ ಜಾರಿಯಲ್ಲಿ ಇರಲಿದೆ. ಈ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೂ ನಿಷೇಧ ಏರಲಾಗಿದೆ ಎಂದು ಮಂಡ್ಯ ಡಿಸಿ ಜಾಫರ್​ ಬರೆದಿರುವ ಪತ್ರದಲ್ಲೇ ಉಲ್ಲೇಖಿಸಿದ್ದಾರೆ. ಕಲ್ಲುತೂರಾಟದ ಜೊತೆಗೆ ಮನೆಗೆ ಬೆಂಕಿ ಹಚ್ಚುವ ಸಂಭವವಿದೆ ಎಂದಿರುವ ಡಿಸಿ ಜಾಫರ್ ಅವರೇ ಹೇಳಿರೋದ್ರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ‌ ಜೆಡಿಎಸ್ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದವರ ಮನಸ್ಸಲ್ಲಿ ಫಲಿತಾಂಶದ ಭಯ ಕಾಡುತ್ತಿದೆ ಎನ್ನಲಾಗ್ತಿದೆ.

Leave a Reply