ಡಿಜಿಟಲ್ ಕನ್ನಡ ಟೀಮ್:
2019ರ ಲೋಕಸಭಾ ಚುನಾವಣೆಯಲ್ಲಿ ಯಾರು ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲಕ್ಕೆ ಮೂರು ದಿನಗಳಲ್ಲಿ ಉತ್ತರ ಸಿಗುತ್ತದೆಯಾದರೂ ಇಂದು ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆ ಮತ್ತೊಮ್ಮೆ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂಬ ದಿಕ್ಸೂಚಿಯನ್ನು ನೀಡಿದೆ.
ಬಿಡುಗಡೆಯಾಗಿರುವ ಸುಮಾರು ಆರು ಸಮೀಕ್ಷಾ ವರದಿಗಳಲ್ಲಿ ಎನ್ಡಿಎ ಸರ್ಕಾರ 290ರಿಂದ 320ರ ಸರಾಸರಿಯಲ್ಲಿ ಬಹುಮತ ಪಡೆಯಲಿದೆ ಎಂಬ ಊಹೆ ಮಾಡಿದೆ. ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ರಾಜ್ಯದಲ್ಲಿ ಬಿಜೆಪಿ ಮೂರರಿಂದ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ನಿರೀಕ್ಷೆ ಮಾಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳುತ್ತಿವೆ.