ಬಿಜೆಪಿಯಿಂದ ಔತಣಕೂಟ, ವಿರೋಧ ಪಕ್ಷಗಳಿಂದ ಆಯೋಗ ಭೇಟಿ, ರಾಷ್ಟ್ರ ರಾಜಕಾರಣ ಚುರುಕುಗೊಳಿಸಿದ ಎಕ್ಸಿಟ್ ಪೋಲ್!

ಡಿಜಿಟಲ್ ಕನ್ನಡ ಟೀಮ್:

ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣ ಚುರುಕುಗೊಂಡಿದೆ. ಕಳೆದ ಎರಡೂವರೆ ತಿಂಗಳಿಂದ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದ ನಾಯಕರು ಈಗ ಸರ್ಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಅದರ ಭಾಗವಾಗಿ ಇಂದು ಬಿಜೆಪಿ ಎನ್ ಡಿಎ ಮೈತ್ರಿಕೂಟದ ಪಕ್ಷಗಳ ಔತಣಕೂಟ ಹಮ್ಮಿಕೊಂಡಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ ಡಿಎ ಸರ್ಕಾರ ರಚನೆಯ ಸೂಚನೆ ನೀಡಿದ ಪರಿಣಾಮ ಬಿಜೆಪಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಸರ್ಕಾರ ರಚನೆ ಕಸರತ್ತಿಗೆ ಮುಂದಾಗಿದೆ. ಅಂದಹಾಗೆ ಚುನಾವಣೋತ್ತರ ಸಮೀಕ್ಷೆಯಂತೆ ಫಲಿತಾಂಶ ಪ್ರಕಟವಾಗುವುದಿಲ್ಲ. ಹೀಗಾಗಿ ಸಮೀಕ್ಷೆಗೆ ವಿರುದ್ಧವಾಗಿ ಎನ್ ಡಿಎ ಮೈತ್ರಿಕೂಟ ಕಡಿಮೆ ಸೀಟುಗಳನ್ನು ಪಡೆದರೂ ಇತರ ವೆಂಬಲ ಪಡೆಯುವ ಅಗತ್ಯ ಎದುರಾಗುತ್ತದೆ.

ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು, ಬಿಜೆಪಿ ಬೆಂಬಲಿಸುವ ಮೈತ್ರಿ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಗೆಲ್ಲುವ ಇತರರ ಬೆಂಬಲ ಪಡೆಯಲು ಯಾವ ರೀತಿ ತಂತ್ರಗಾರಿಕೆ ರೂಪಿಸಬೇಕು ಎಂಬುದರ ಬಗ್ಗೆ ಚರ್ಚೆ ಕೂಡ ನಡೆಯುವ ಸಾಧ್ಯತೆ ಇದೆ. ಔತಣ ಕೂಟದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಪ್ರಮುಖ ಸಚಿವರು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಲೋಕ್ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಇವಿಷ್ಟು ಬಿಜೆಪಿ ಹಾಗೂ ಎನ್ ಡಿಎ ಪಾಳಯದಲ್ಲಿ ಕಂಡು ಬರುತ್ತಿರುವ ಚಿತ್ರಣ.ಇನ್ನು ವಿರೋಧ ಪಕ್ಷಗಳು ಕೂಡ ದೆಹಲಿಯಲ್ಲಿಂದು ಸಭೆ ಸೇರುತ್ತಿದ್ದು, ಸರ್ಕಾರ ರಚಿಸಲು ತಮ್ಮ ಮುಂದಿರುವ ಅವಕಾಶಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಜತೆಗೆ ಮತಯಂತ್ರದ ವಿಚಾರವಾಗಿ ದೂರು ಹಾಗೂ ವಿವಿಪ್ಯಾಟ್ ಗಳಲ್ಲಿ ಲಭ್ಯವಾಗುವ ಎಲ್ಲ ಮತ ಚೀಟಿಗಳನ್ನು ಏಣಿಕೆ ಮಾಡಬೇಕು ಎಂದು ಚುನಾವಣ ಆಯೋಗವನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ. ಸುಪ್ರೀಂ ಕೋರ್ಟ್ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಐದು ಮತಗಟ್ಟೆಗಳಲ್ಲಿನ ವಿವಿಪ್ಯಾಟ್  ಮತಚೀಟಿಗಳನ್ನು ಏಣಿಕೆ ಮಾಡಬೇಕು ಎಂದು ಆದೇಶ ನೀಡಿದ್ದು, ವಿರೋಧ ಪಕ್ಷಗಳು ಎಲ್ಲ ಮತಗಟ್ಟೆಗಳಲ್ಲೂ ಇದೇ ರೀತಿಯ ಏಣಿಕೆ ನಡೆಯಬೇಕು ಎಂದು ಬೇಡಿಕೆ ಇಡಲಿದ್ದಾರೆ.

1 COMMENT

  1. SR, WHATS THIS ITS WASTE OF MAN POWER FOR THE CAUSE OF ELECTIONS wind only…. ONLY>> ONE MUST KNOW STILL WE RE NO DEVELOPED COUNTRY AND STARVINGFOR IT>>> TO EACH PARTIES BUT PLACED HERE IS ONLY PERSONS SPEECH AND NO PARTY TONGUE >> even p.m dared to criticize as if PERSONAL GROUNDS FOR SUCCESS BUT AS A MEMBER OF PARTY THE PARTY BE THE MIN ALWAYS BUT NOT ANY PERSONALITIES>> IT creates bad whether too the sounding even “OUT SIDE INDIA ALSO” i think. thank.
    2. ONLY COGNITION DEVELOPMENT OF IS OF NO USE>> BUT KAIKAVE KAILAS OR psycho-motor domain is need of an hour.. “that may be productivity..*** side by side preaching of our culture is ww. world wide now. LIKE OTHER VCASTES WE CAN FIND TRADITIONAL HINDUISM IN ALL COUNTRIES>>>. affection s only need of us but not preach i feel. thanks.

Leave a Reply