ರಿಸ್ಯಾಟ್ 2ಬಿ ಯಶಸ್ವಿ ಉಡಾವಣೆ! ಏನಿದರ ಪ್ರಯೋಜನ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಬುಧವಾರ ಬೆಳಗಿನ ಜಾವ ಪಿಎಸ್ಎಲ್ ವಿ ರಾಕೆಟ್ ಮೂಲಕ ರಿಸ್ಯಾಟ್ 2ಬಿ ರಾಡರ್ ಇಮೇಜ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅದರೊಂದಿಗೆ ತನ್ನ ರಾಡರ್ ಇಮೇಜ್ ಕ್ಷಮತೆಯನ್ನು ವಿಸ್ತರಿಸಿಕೊಂಡಿದೆ.

ಇಂದು ಬೆಳಗ್ಗೆ 5.30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆ ಮಾಡಲಾಗಿದ್ದು, 15 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು. ಇದು ಜಿಎಸ್ಎಲ್ ವಿ ಸಿ46, ಪಿಎಸ್ಎಲ್ ವಿ ಶ್ರೇಣಿಯ 48ನೇ ರಾಕೆಟ್ ಉಡಾವಣೆಯಾಗಿದ್ದು, ಇದು 615 ಕೆಜಿ ತೂಕದ ರಿಸ್ಯಾಟ್ 2ಬಿ ಅನ್ನು ಕಕ್ಷೆಗೆ ಸೇರಿಸಿದೆ. ಪ್ರಸಕ್ತ ಸಾಲಿನಲ್ಲಿ ಇಸ್ರೋ ಉಡಾವಣೆ ಮಾಡಿದ ಮೂರನೇ ಉಪಗ್ರಹ ಇದಾಗಿದೆ.

ಎಂಟು ವರ್ಷಗಳ ನಂತರ ಸ್ರೋ ರಿಸ್ಯಾಟ್ ಶ್ರೇಣಿಯ ಉಪಗ್ರಹವನ್ನು ಉಡಾವಣೆ ಮಾಡಿದ್ದು, ರಾಡರ್ ಇಮೇಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಇದು ಎಲ್ಲಾ ವಾತಾವರಣದಲ್ಲೂ ಅತ್ಯುತ್ತಮ ರೀತಿ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದೆ. ಈ ಉಪಗ್ರಹ ಕೃಷಿ, ಹವಾಮಾನ, ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಹೆಚ್ಚು ನೆರವಾಗಲಿದೆ.

Leave a Reply