ಬಿಎಸ್​ವೈ ಹಿಡಿತ ತಪ್ಪುತ್ತಿದೆ ಕಮಲ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್​ ನಾಯಕರು ಈ ರೀತಿಯ ಆರೋಪವೊಂದನ್ನು ಮಾಡ್ತಿದ್ರು. ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಲಾಗುತ್ತದೆ. ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಜೊತೆಗೆ ನಿಧಾನವಾಗಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಮನೆಗೆ ಕಳಹಿಸಲಾಗುತ್ತದೆ ಎಂದಿದ್ರು. ಆದ್ರೆ ಬಿಜೆಪಿ ನಾಯಕರು ಮಾತ್ರ ಅಲ್ಲಗಳೆದಿದ್ರು. ಲೋಕಸಭಾ ಫಲಿತಾಂಶ ಹೊರ ಬಿದ್ದ ಬಳಿಕ ಯಡಿಯೂರಪ್ಪ ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ತಾರೆ. ಅಧ್ಯಕ್ಷರಾಗಿ ಬಿಎಸ್​ವೈ ಅವಧಿ ಈಗಾಗಲೇ ಅಂತ್ಯವಾಗಿರುವ ಹಿನ್ನೆಯಲ್ಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ ಎಂದು ಹೇಳಿಕೊಂಡಿದ್ರು. ಆದ್ರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಎಸ್​ವೈ ಮಾತಿಗೆ ಕಿಮ್ಮತ್ತಿಲ್ವಾ ಎನ್ನುವಂತಾಗಿದೆ.

ಕೇಂದ್ರ ಸರ್ಕಾರದ ಮಂತ್ರಿ ಮಂಡಲ ರಚನೆಯಾಗಿದೆ. ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಸೇರಿ ನಾಲ್ವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ನಿರ್ಮಲಾ ಸೀತಾರಾಮನ್​ಗೆ ಕೇಂದ್ರ ಹಣಕಾಸು ಖಾತೆ ಸಿಕ್ಕಿದ್ರೆ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ ಸದಾನಂದಗೌಡರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹೊಣೆ ನೀಡಲಾಗಿದೆ. ಇನ್ನು ಧಾರವಾಡ ಸಂಸದ ಪ್ರಹ್ಲಾದ್​ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಖಾತೆ ನೀಡಲಾಗಿದೆ. ಇನ್ನು ಬೆಳಗಾವಿ ಸಂಸದ ಸುರೇಶ್​ ಅಂಗಡಿಯವರಿಗೆ ಗೃಹ ಖಾತೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಈ ಎಲ್ಲಾ ಸಚಿವರು ಆರ್​ಎಸ್​ಎಸ್​ ಮೂಲದವರಾಗಿದ್ದು, ಬಿಎಸ್​ ಯಡಿಯೂರಪ್ಪ ಹೇಳಿದ್ದ ಒಬ್ಬರೇ ಒಬ್ಬ ಸಂಸದರನ್ನು ಮೋದಿ ಹಾಗೂ ಅಮಿತ್​ ಶಾ ಪರಿಗಣಿಸಿಲ್ಲ ಅನ್ನೋದು ಇಂಪಾರ್ಟೆಂಟ್.

ಬಿ.ಎಸ್​ ಯಡಿಯೂರಪ್ಪ, ಈ ಬಾರಿ ಶೋಭಾ ಕರಂದ್ಲಾಜೆ, ಶಿವಕುಮಾರ್​ ಉದಾಸಿ, ಪಿ.ಸಿ ಗದ್ದಿಗೌಡರ್​ ಅವರಿಗೆ ಕೇಂದ್ರ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ವು. ಆದ್ರೆ ಈ ಮೂವರಲ್ಲಿ ಒಬ್ಬರೂ ಕೇಂದ್ರ ಸಚಿವರಾಗಲು ಸಾಧ್ಯವಾಗಿಲ್ಲ. ಬದಲಿಗೆ ಆರ್​ಎಸ್​ಎಸ್​ ನಾಯಕ ಸಂತೋಷ್​​ ನೀಡಿದ ಪಟ್ಟಿಯಲ್ಲಿ ಪ್ರಹ್ಲಾದ್​ ಜೋಶಿ, ಸುರೇಶ್​ ಅಂಗಡಿ ಅವರನ್ನು ಪರಿಗಣಿಸಿದ್ರೆ, ಬಿಎಸ್​ ಯಡಿಯೂರಪ್ಪ ಕೋಟ ಎಂದು ಸದಾನಂದಗೌಡರಿಗೆ ಮಣೆ ಹಾಕಲಾಗಿದೆ. ಆದ್ರೆ ಸದಾನಂದಗೌಡರು ಕೂಡ ಆರ್​ಎಸ್​ಎಸ್​ ಮೂಲದವರು ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಸದಾನಂದಗೌಡರಿಗೆ ಸ್ಥಾನ ಕಲ್ಪಿಸುವ ಮೂಲಕ ಶೋಭಾ ಕರಂದ್ಲಾಜೆ ಅವರ ಒಕ್ಕಲಿಗ ಕೋಟಾಗೂ ಕೊಕ್​ ಕೊಡಲಾಗಿದೆ ಎನ್ನಲಾಗಿದೆ. ಒಟ್ಟಾರೆ ಯಡಿಯೂರಪ್ಪ ಹೇಳಿದ ಯಾರೊಬ್ಬರಿಗೂ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿಲ್ಲ. ಹೈಕಮಾಂಡ್​ ಮಟ್ಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಇದೊಂದು ದೊಡ್ಡ ಹಿನ್ನಡೆಯಂದೇ ಚರ್ಚೆ ನಡೆಯುತ್ತಿದೆ. ಇನ್ಮುಂದೆ ರಾಜ್ಯದಲ್ಲೂ ಬಿಜೆಪಿ ಅಧ್ಯಕ್ಷಪಟ್ಟ ಹಾಗೂ ಜವಾಬ್ದಾರಿ ನಿಧಾನವಾಗಿ ಹಸ್ತಾಂತರವಾಗಲಿದೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.

1 COMMENT

  1. nimmi suchita hesarugalella kajyakke sa,mbhandita vishayagalige matra seemita nade hondiddare.. fedaralmadariyalli kendrada kadege valavu iddavarige sachiva sthana toretiruvadu santoshada vishaya;
    2 bsy team anta suchisiddadde astu samanjasa vennisadu avarella desha samshyagalatta gamana harisidare matra indilla nale active M.P ANTA KENDRA NAMBABAHUDENO ANNISUTTE. VAND ANE.,,.!!

Leave a Reply