ಅಮಿತ್ ಶಾಗೆ ಗೃಹ, ರಾಜನಾಥ್ ಸಿಂಗ್ ಗೆ ರಕ್ಷಣೆ! ಇಲ್ಲಿದೆ ಮೋದಿ ಸಂಪುಟ ಸಚಿವರ ಖಾತೆಗಳು

ಡಿಜಿಟಲ್ ಕನ್ನಡ ಟೀಮ್:

ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿರಂತಹ ಹಿರಿಯರ ಅನುಪಸ್ಥಿತಿ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎರಡನೇ ಅವಧಿಯ ಎನ್ಡಿಎ ಸರ್ಕಾರದ ಸಚಿವ ಸಂಪುಟ ರಚನೆ ಮಾಡಿದ್ದು, ಅಮಿತ್ ಶಾಗೆ ಗೃಹ, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ವಿತ್ತ ಖಾತೆ ಹಂಚಿಕೆ ಮಾಡಲಾಗಿದೆ.

ಇನ್ನು ರಾಜ್ಯದಿಂದ ಆಯ್ಕೆಯಾದ 25 ಸಂಸದರ ಪೈಕಿ ಮೂವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು, ಪ್ರಹ್ಲಾದ್ ಜೋಷಿ ಟವರಿಗೆ ಸಂಸದೀಯ ವ್ಯವಹಾರ,ಡಿ.ವಿ ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ, ಸುರೇಶ್‌ ಅಂಗಡಿ- ರೈಲ್ವೇ ಖಾತೆ (ಸಹಾಯಕ ಸಚಿವ) ನೀಡಲಾಗಿದೆ. ಕಳೆದ ಸರ್ಕಾರದಲ್ಲಿ ದಿವಂಗತ ಅನಂತ ಕುಮಾರ್ ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ಜೋಷಿ ಹಾಗೂ ಸದಾನಂದ ಗೌಡ ಅವರಿಗೆ ನೀಡಲಾಗಿದೆ. ಉಳಿದಂತೆ
ಎಸ್‌. ಜೈಶಂಕರ್ ಅವರಿಗೆ ವಿದೇಶಾಂಗ ಖಾತೆ, ನಿತಿನ್ ಗಡ್ಕರಿ ಅವರಿಗೆ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸ್ಮೃತಿ ಇರಾನಿ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಕಾಶ್ ಜಾವಡೇಕರ್ ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆ, ಸಂತೋಷ್ ಗಂಗ್ವಾರ್‌- ಕಾರ್ಮಿಕ ಮತ್ತು ಉದ್ಯೋಗ, ಜಿತೇಂದ್ರ ಸಿಂಗ್- ದಾನಿಗಳ ಖಾತೆ ಹಂಚಿಕೆ ಮಾಡಲಾಗಿದೆ.

ಮೋದಿ ಸಚಿವ ಸಂಪುಟ ಹೀಗಿದೆ…

ನರೇಂದ್ರ ಮೋದಿ: ಪ್ರಧಾನ ಮಂತ್ರಿಗಳು, ಸಿಬ್ಬಂದಿ ಖಾತೆ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ; ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ಎಲ್ಲ ಪ್ರಮುಖ ನೀತಿ ನಿರೂಪಣಾ ಅಧಿಕಾರ ಹಾಗೂ ಯಾರಿಗೂ ಹಂಚಿಕೆಯಾಗದ ಇತರ ಖಾತೆಗಳು.

ಸಂಪುಟ ದರ್ಜೆ ಸಚಿವರು:
ರಾಜನಾಥ್ ಸಿಂಗ್‌: ರಕ್ಷಣೆ
ಅಮಿತ್ ಶಾ: ಗೃಹ
ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ಡಿ.ವಿ ಸದಾನಂದ ಗೌಡ: ರಾಸಾಯನಿಕ ಮತ್ತು ರಸಗೊಬ್ಬರ
ನಿರ್ಮಲಾ ಸೀತಾರಾಮನ್‌: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ
ರಾಮ್‌ ವಿಲಾಸ್ ಪಾಸ್ವಾನ್‌: ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ
ನರೇಂದ್ರ ಸಿಂಗ್ ತೋಮರ್‌: ಕೃಷಿ ಮತ್ತು ರೈತರ ಕಲ್ಯಾಣ; ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವರವಿಶಂಕರ್ ಪ್ರಸಾದ್‌: ಕಾನೂನು ಮತ್ತು ನ್ಯಾಯ; ಸಂಪರ್ಕ ಖಾತೆ ಮತ್ತು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ.
ಹರ್‌ಸಿಮ್ರತ್‌ ಕೌರ್ ಬಾದಲ್‌: ಆಹಾರ ಸಂಸ್ಕರಣೆ
ತಾವರ್ ಚಂದ್ ಗೆಹ್ಲೋಟ್‌: ಸಾಮಾಜಿಕ ನ್ಯಾಯ ಮತ್ತು ಸಶಸ್ತೀಕರಣ
ಡಾ. ಸುಬ್ರಹ್ಮಣ್ಯಂ ಜೈಶಂಕರ್‌: ವಿದೇಶಾಂಗ ವ್ಯವಹಾರ
ರಮೇಶ್ ಪೊಕ್ರಿಯಾಲ್‌ ನಿಶಾಂಕ್: ಮಾನವ ಸಂಪನ್ಮೂಲ ಅಭಿವೃದ್ಧಿ
ಅರ್ಜುನ್ ಮುಂಡಾ: ಬುಡಕಟ್ಟು ವ್ಯವಹಾರ
ಸ್ಮೃತಿ ಝುಬಿನ್ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವುಳಿ ಸಚಿವೆ
ಡಾ. ಹರ್ಷವರ್ಧನ್‌: ಆರೋಗ್ಯ ಮತ್ತು ಕುಟುಂಬ ಕಲ್ಯಾಣ; ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ
ಪ್ರಕಾಶ್ ಜಾವಡೇಕರ್‌: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ
ಪಿಯೂಷ್ ಗೋಯಲ್: ರೈಲ್ವೇ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ
ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಖಾತೆ
ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾರ
ಪ್ರಹ್ಲಾದ್ ಜೋಷಿ: ಸಂಸದೀಯ ವ್ಯವಹಾರಗಳು; ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರು
ಡಾ. ಮಹೇಂದ್ರನಾಥ್ ಪಾಂಡೆ: ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ
ಅರವಿಂದ ಗಣಪತ್ ಸಾವಂತ್‌: ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
ಗಿರಿರಾಜ್ ಸಿಂಗ್‌: ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ
ಗಜೇಂದ್ರ ಸಿಂಗ್‌ ಶೇಖಾವತ್‌: ಜಲಶಕ್ತಿ ಖಾತೆ.

ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ)
ಸಂತೋಷ್ ಕುಮಾರ್ ಗಂಗ್ವಾರ್‌: ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ)
ರಾವ್ ಇಂದ್ರಜಿತ್ ಸಿಂಗ್‌: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ನಿರ್ವಹಣೆ) ಹಾಗೂ ಯೋಜನಾ ಖಾತೆ ಸಹಾಯ ಸಚಿವರು (ಸ್ವತಂತ್ರ ನಿರ್ವಹಣೆ)
ಶ್ರೀಪಾದ ಯಸ್ಸೋ ನಾಯಕ್‌: ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಆಯುಷ್) ಹಾಗೂ ರಕ್ಷಣಾ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ),
ಡಾ. ಜಿತೇಂದ್ರ ಸಿಂಗ್‌: ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ)

ಕಿರಣ್‌ ರೆಜಿಜು: ಯುವಜನ ವ್ಯವಹಾರ ಮತ್ತು ಕ್ರೀಡೆ (ಸ್ವತಂತ್ರ ನಿರ್ವಹಣೆ), ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವರು
ಪ್ರಹ್ಲಾದ್ ಸಿಂಗ್ ಪಟೇಲ್: ಸಂಸ್ಕೃತಿ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ),
ರಾಜ್‌ಕುಮಾರ್ ಸಿಂಗ್- ವಿದ್ಯುತ್‌ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ನವೀನ ಮತ್ತು ಪುನರ್‌ ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವರು.
ಹರ್‌ದೀಪ್ ಸಿಂಗ್‌ ಪುರಿ: ಗೃಹ ಮತ್ತು ನಗರ ವ್ಯವಹಾರಗಳ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ); ನಾಗರಿಕ ವಿಮಾನಯಾನ ರಾಜ್ಯಸ ಚಿವರು (ಸ್ವತಂತ್ರ ನಿರ್ವಹಣೆ); ವಾಣಿಜ್ಯ ಮತ್ತು ಉದ್ಯಮ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ)
ಮನ್‌ಸುಖ್‌ ಎಲ್‌ ಮಾಂಡವೀಯ- ಹಡಗು ಖಾತೆ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವರು.

ರಾಜ್ಯ ದರ್ಜೆ ಸಚಿವರು:
ಫಗನ್‌ ಸಿಂಗ್ ಕುಲಸ್ತೆ: ಉಕ್ಕು ಖಾತೆ ಸಹಾಯಕ ಸಚಿವರು.
ಆಶ್ವಿನಿ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ.
ಅರ್ಜುನ್ ರಾಮ್ ಮೇಘ್ವಾಲ್: ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವರು; ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ಸಹಾಯಕ ಸಚಿವರು.
ಜನರಲ್ (ನಿವೃತ್ತ) ವಿ.ಕೆ ಸಿಂಗ್: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಹಾಯಕ ಸಚಿವ.
ಕೃಷ್ಣ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ.
ಧನ್ವೇ ರಾವ್ ಸಾಹೇಬ್‌: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣೆ ಸಹಾಯಕ ಸಚಿವರು.
ಜಿ. ಕಿಶನ್ ರೆಡ್ಡಿ: ಗೃಹ ಖಾತೆ ಸಹಾಯಕ ಸಚಿವ
ಪರ್ಷೋತ್ತಮ್ ರೂಪಾಲ: ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವ
ರಾಮದಾಸ್ ಅಠವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಹಾಯಕ ಸಚಿವ.
ಸಾಧ್ವಿ ನಿರಂಜನ್ ಜ್ಯೋತಿ: ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವೆ.
ಬಾಬುಲ್ ಸುಪ್ರಿಯೋ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಹಾಯಕ ಸಚಿವ.
ಸಂಜೀವ್ ಕುಮಾರ್ ಬಲ್ಯಾನ್: ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಾಯಕ ಸಚಿವ.
ಧೋತ್ರೆ ಸಂಜಯ್‌ ಶಾಮ್‌ರಾವ್: ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಪರ್ಕ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳ ಸಹಾಯಕ ಸಚಿವರು.
ಅನುರಾಗ್ ಸಿಂಗ್‌ ಠಾಕೂರ್: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಗಳ ಸಚಹಾಯಕ ಸಚಿವರು.
ಅಂಗಡಿ ಸುರೇಶ್ ಚನ್ನಬಸಪ್ಪ: ರೈಲ್ವೇ ಖಾತೆ ಸಹಾಯಕ ಸಚಿವ.
ನಿತ್ಯಾನಂದ ರಾಯ್: ಗೃಹ ಖಾತೆ ಸಹಾಯಕ ಸಚಿವ.
ರತನ್‌ಲಾಲ್‌ ಖಟಾರಿಯಾ: ಜಲಶಕ್ತಿ ಖಾತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಗಳ ಸಹಾಯಕ ಸಚಿವರು.
ವಿ. ಮುರಳೀಧರನ್‌: ವಿದೇಶಾಂಗ ವ್ಯವಹಾರಗಳ ಖಾತೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವರು.
ರೇಣುಕಾ ಸಿಂಗ್‌ ಸರುತಾ: ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವೆ.
ಸೋಮ್ ಪ್ರಕಾಶ್: ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಹಾಯಕ ಸಚಿವ.
ರಾಮೇಶ್ವರ ತೆಲಿ: ಆಹಾರ ಸಂಸ್ಕರಣೆ ಉದ್ಯಮ ಖಾತೆ ಸಹಾಯಕ ಸಚಿವ.
ಪ್ರತಾಪ್ ಚಂದ್ರ ಸಾರಂಗಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಹಾಗೂ ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆಗಳ ಸಹಾಯಕ ಸಚಿವರು.
ಕೈಲಾಶ್ ಚೌಧರಿ: ಕೃಷಿ ಮತ್ತು ರೈತರ ಕಲ್ಯಾಣ ಸಹಾಯ ಸಚಿವರು.
ದೇಬಶ್ರೀ ಚೌಧರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಹಾಯಕ ಸಚಿವೆ.

Leave a Reply