ಬಂದ ನೋಡೋ ಪೈಲ್ವಾನ!

ಡಿಜಿಟಲ್ ಕನ್ನಡ ಟೀಮ್:

ಕಿಚ್ಚನ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಆಗಿದೆ. ಆವೇಶದಿಂದ ಪೈಲ್ವಾನ್ ಎದುರಾಳಿಗೆ ಪಂಚ್ ಕೊಟ್ಟಂತಿರೋ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಚಿರಂಜೀವಿ ತೆಲುಗು ಪೋಸ್ಟರ್, ವಿಜಯ್ ಸೇತುಪತಿ ತಮಿಳು, ಮೋಹನ್ ಲಾಲ್ ಮಲಯಾಳಂ, ಸುನೀಲ್ ಶೆಟ್ಟಿ ಹಿಂದಿ ಪೋಸ್ಟರ್ ಶೇರ್ ಮಾಡಿದ್ರೆ, ಸುದೀಪ್ ಕನ್ನಡ ಪೋಸ್ಟರ್ ಅನಾವರಣಗೊಳಿಸಿದ್ದಾರೆ.

ಕೆಜಿಎಫ್ ಮಾದರಿಯಲ್ಲಿ ಪೈಲ್ವಾನ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗ್ತಿದ್ದು, ಐದು ಭಾಷೆಯ ಪೋಸ್ಟರ್ಸ್ ಹೊರಬಂದಿದೆ. ಹೆಬ್ಬುಲಿ ಖ್ಯಾತಿಯ ಕೃಷ್ಣ ಪೈಲ್ವಾನ್ ಚಿತ್ರವನ್ನ ನಿರ್ಮಿಸಿ, ನಿರ್ದೇಶನದ ಮಾಡಿದ್ದು, ಹಾಲಿವುಡ್ ತಂತ್ರಜ್ಞರು ಪೈಲ್ವಾನ್ ಕಿಚ್ಚನಿಗೆ ಬಲ ತುಂಬಿದ್ದಾರೆ. ಆಕಾಂಕ್ಷಾ ಸಿಂಗ್ ಚಿತ್ರದಲ್ಲಿ ಕಿಚ್ಚನಿಗೆ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸುದೀಪ್ ಕುಸ್ತಿಪಟುವಾಗಿ, ಬಾಕ್ಸರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ವರಲಕ್ಷ್ಮಿ ಹಬ್ಬಕ್ಕೆ ವಿಶ್ವದಾದ್ಯಂತ ಪೈಲ್ವಾನ್ ಖದರ್ ಶುರುವಾಗಲಿದೆ.

Leave a Reply