ಪೈಲ್ವಾನ ನಂತರ ಎಂಟ್ರಿ ಕೊಟ್ಟ ರಾಬರ್ಟ್! ಹೇಗಿದೆ ಗೊತ್ತಾ ದರ್ಶನ್ ಮುಂದಿನ ಚಿತ್ರದ ಪೋಸ್ಟರ್?

ಡಿಜಿಟಲ್ ಕನ್ನಡ ಟೀಮ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರದ ಬಾಕ್ಸರ್ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆಯಾಗಿದೆ. ಇದು ಚಂದನವನ ಪ್ರಿಯರಿಗೆ ಡಬಲ್ ಧಮಾಕ ಸಿಕ್ಕಂತಾಗಿದೆ.

ರಂಜಾನ್ ಹಬ್ಬದ ಸ್ಪೆಷಲ್ಲಾಗಿ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರದ ನಿರ್ಮಾಣ ಜವಾಬ್ದಾರಿ ಉಮಾಪತಿ ಶ್ರೀನಿವಾಸ್ ಅವರದ್ದು.

ಚಿತ್ರದ ಎರಡು ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರದಲ್ಲಿ ರಾಬರ್ಟ್ ಗೆ ಯಾರು ಹೀರೋಯಿನ್ ಎಂಬುದು ಇನ್ನು ಅಂತಿಮವಾಗಿಲ್ಲ.

ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು, ವಿನೋದ್ ಪ್ರಭಾಕರ್ ಆಕ್ಟ್ ಮಾಡ್ತಿದ್ದಾರೆ. ಈ ಥೀಮ್ ಪೋಸ್ಟರ್ ನಲ್ಲಿ ಜಾಕೆಟ್ ಮೇಲಿರೋ ಆನೆ ಚಿತ್ರ, ನಂಬರ್ ಪ್ಲೇಟ್ D boss ಅನ್ನೋ ತರ ಡಿಸೈನ್ ಮಾಡಿದ್ದು, KA 19 ಅನ್ನೋದು ಇದು ಮಂಗಳೂರಿನಲ್ಲಿ ನಡೆಯೋ ಕಥೆ ಅನ್ನೋದನ್ನ ಹೇಳೋ ತರ ಇದೆ.

Leave a Reply