ಸೋನಿಯಾ ಭೇಟಿಯಾಗಿ ಮಾತುಕತೆ ನಡೆಸಿದ ಪ್ರಹ್ಲಾದ್ ಜೋಷಿ..!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಆದ್ರೆ ಬಿಜೆಪಿಯಿಂದ ಆಯ್ಕೆಯಾದ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಿದ್ದು ಯಾಕೆ ಎಂದರೆ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ್ ಜೋಷಿ ಸಂಸತ್ ಕಲಾಪ ಸುಗಮವಾಗಿ ನಡೆಸಬೇಕಾದ ಜವಾಬ್ದಾರಿ ಹೊಂದಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಇದೀಗ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಲೋಕಸಭಾ ಅಧಿವೇಶನ ಆರಂಭಕ್ಕೂ ಮೊದಲು ಭೇಟಿ ಮಾಡಿ ಚರ್ಚೆ ನಡೆಸುವುದು ಸಾಮಾನ್ಯ. ಅದರಂತೆ ಪ್ರಹ್ಲಾದ್ ಜೋಷಿ ಸೋನಿಯಾ ಗಾಂಧಿ ಭೇಟಿ ಮಾಡಿದ್ದಾರೆ. ಸಂಸತ್ ಕಲಾಪದ ಯಶಸ್ಸಿಗೆ ಕೋರಿದ್ದಾರೆ. ಪ್ರಹ್ಲಾದ್ ಜೋಷಿಗೆ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ನರೇಂದ್ರ ಸಿಂಗ್ ತೋಮರ್ ಸಾಥ್ ನೀಡಿದ್ದರು.

ಜೂನ್ 17 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಜುಲೈ 26 ರವರೆಗೆ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ಹೊಸ ಸಂಸದರಿಂದ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು ಜೂನ್‌19ರಂದು ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜೂನ್ 20ರಂದು ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಜುಲೈ 5 ರಂದು ಹೊಸ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. ಇಷ್ಟೂ ಮಾಹಿತಿಯನ್ನು ಸೋನಿಯಾ ಗಾಂಧಿ ಅವರಿಗೆ ಕೊಟ್ಟು, ಸುಗಮ ಕಲಾಪಕ್ಕೆ ಸಹಕಾರ ಕೋರಿದರು. ಬಳಿಕ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್, ಲೋಕಸಭೆಯ ಡಿಎಂಕೆ ನಾಯಕ ಟಿಆರ್ ಬಾಲು ಅವರನ್ನೂ ಭೇಟಿ ಮಾಡಿ ಮಾಯುಕತೆ ನಡೆಸಿದ್ದಾರೆ.

ದೆಹಲಿಯಲ್ಲಿ ಕಾಡುತ್ತಿದೆ ಅನಂತ್ ನೆನಪು

ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದರೆ ಎಲ್ಲಾ ಪಕ್ಷದಲ್ಲೂ ಆತ್ಮೀಯ ಗೆಳಯರು ಇರುತ್ತಾರೆ. ಯಾಕಂದ್ರೆ ಸರ್ಕಾರದ ನಿರ್ಧಾರವನ್ನು ಖಂಡಿಸಿ‌ ಸದನದ ಬಾವಿಗಿಳಿದು ಪ್ರತಿಭಟೊಸುವಾಗ, ನಂತ್ರ ಸದನಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ನಡೆಸಿದರೆ ಪ್ರತಿಪಕ್ಣಗಳನ್ನು ಮನವೊಲಿಸುವ ಕೆಲಸ ಸಂಸದೀಯ ವ್ಯವಹಾರಗಳ ಖಾತೆ ಸಚಿವರ ಹೆಗಲ ಮೇಲಿರುತ್ತದೆ. ಈ ಖಾತೆ ನಿಭಾಯಿಸುವಲ್ಲಿ ಅನಂತ್ ಕುಮಾರ್ ನಿಸ್ಸೀಮರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸದೀಯ ಖಾತೆ ಸಚಿವರಾಗಿದ್ದ ಅನಂತ ಕುಮಾರ್ ಯಾವುದೇ ಗೊಂದಲ, ಗದ್ದಲಗಳಿಗೆ ಆಸ್ಪದ ಕೊಡದೆ ಸುಗಮ‌ ಕಲಾಪಕ್ಕೆ ವೇದಿಕೆ ರೂಪಿಸುತ್ತಿದ್ದರು. ಇದೀಗ ಮತ್ತೋರ್ವ ಕರ್ನಾಟಕದ ನಾಯಕ ಈ ಸ್ಥಾನಕ್ಕೆ ಏರಿದ್ದು, ಯಶಸ್ವಿಯಾಗಿ ನಿರ್ವಹಿಸಬೇಕಿದೆ.

2 COMMENTS

  1. cordial relations use to be benefishial for both partties as such..,,>><< national.. CONGRATS TP OUR m.p. PLUS PRESENT MINISTER. IT WAS MY DENADA THAT HE MUST BE MINISTER< COMMUNICATED ACCORDIN TO THEVENT AT THE TIME OF ELECTIONS AS NEWS ITEM. THANKS.

Leave a Reply