ಸಮನ್ವಯ ಸಮಿತಿ- ಎಐಸಿಸಿ ಅಧ್ಯಕ್ಷ ಸ್ಥಾನ? ಯಾವುದಕ್ಕೆ ಖರ್ಗೆ ಹೆಚ್ಚು ಸೂಕ್ತ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಮನ್ವಯ ಸಮಿತಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂಬ ಮಾತುಗಳು ಆರಂಭವಾಗಿರುವ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲಿ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ವಿಚಾರ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ಖರ್ಗೆ ಯಾವುದಕ್ಕೆ ಹೆಚ್ಚು ಸೂಕ್ತ ಎಂಬ ವಿಶ್ಲೇಷಣೆಗಳು ಆರಂಭವಾಗುತ್ತಿದೆ.

ಸೋಲಿಲ್ಲದ ಸರದಾರ ಎಂಬ ಹೆಸರು ಹೊಂದಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದು, ಅವರ ರಾಜಕೀಯ ಪಯಣ ಅಂತ್ಯ ಎಂಬ ಚರ್ಚೆಗೆ ಕಾರಣವಾಗಿತ್ತು. ಆದರೆ ಸರಿಸುಮಾರು ನಾಲ್ಕು ದಶಕಗಳ ಕಾಲ ರಾಜಕೀಯ ಅನುಭವ ಹೊಂದಿರುವ ಮತ್ತು ದಲಿತ ನಾಯಕನಾಗಿರು ಖರ್ಗೆ ಅವರನ್ನು ಕಾಂಗ್ರೆಸ್ ಅಷ್ಟು ಸುಲಭವಾಗಿ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಅವರ ಅನುಭವ ಪಕ್ಷಕ್ಕೆ ಅಗತ್ಯವಿದೆ.

ಸದ್ಯ  ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೂ ಸರಿ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇತರೆ ಹಿರಿಯ ನಾಯಕರು ತಿರುಗಿ ಬಿದ್ದಿದ್ದು, ಹಾದಿಬೀದಿಯಲ್ಲಿ ಕೆಂಡಕಾರುತ್ತಿದ್ದಾರೆ. ಇದು ಸಹಜವಾಗಿಯೇ ಮೂಲ ಕಾಂಗ್ರೆಸಿಗರು ವರ್ಸಸ್ ವಲಸೆ ಕಾಂಗ್ರೆಸಿಗರು ಎಂಬ ಚರ್ಚೆಗೆ ಗ್ರಾಸವಾಗಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಅನ್ನು ಸಮರ್ಥವಾಗಿ ಮುನ್ನಡೆಸುವ ಸಾರಥಿ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ ಇತರೆ ನಾಯಕರುಗಳಿಗಿಂತ ಹಿರಿಯರು ಹಾಗೂ ಮೂಲ ಕಾಂಗ್ರೆಸಿಗರೇ ಆಗಿದ್ದು, ಸಮನ್ವಯ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಿದರೆ ಪಕ್ಷದಲ್ಲಿ ಎದ್ದಿರುವ ಬಿಕ್ಕಟ್ಟು ಶಮನಗೊಳಿಸಲು ಪ್ರಮುಖವಾಗಲಿದೆ.

ಇನ್ನು ಖರ್ಗೆ ಸಮನ್ವಯ ಸಮಿತಿ ಮುಖ್ಯಸ್ಥರಾದರೆ ಜೆಡಿಎಸ್ ಕೂಡ ಮೈತ್ರಿ ಸರ್ಕಾರದಲ್ಲಿ ಉತ್ತಮ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವ ಅವಕಾಶಗಳು ಹೆಚ್ಚಾಗಿದೆ. ಇನ್ನು ದಲಿತ ನಾಯಕರಾದ ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದು, ಖರ್ಗೆ ಸಮನ್ವಯ ಸಮಿತಿ ಮುಖ್ಯಸ್ಥರಾದರೆ ಹಿಂದುಳಿದ ವರ್ಗಕ್ಕೆ ಸರ್ಕಾರದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಅಲ್ಲದೆ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯವನ್ನು ನಿಯಂತ್ರಿಸಿ ಕಾಂಗ್ರೆಸ್ ಮತ್ತೆ ತನ್ನ ಹಿಡಿತ ಸಾಧಿಸಲು ಆ ಭಾಗದ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಿದಂತಾಗುತ್ತದೆ. ಈ ಎಲ್ಲ ವಿಚಾರಗಳನ್ನು ನೋಡಿದಾಗ ಖರ್ಗೆ ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥರಾಗುವುದು ಹೆಚ್ಚು ಸೂಕ್ತವಾಗುತ್ತದೆ.

ಈ ಮಧ್ಯೆ ಎಐಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನು ನೋಡುವುದಾದರೆ, ಲೋಕಸಭೆ ಫಲಿತಾಂಶದ ನಂತರ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲು ಇಚ್ಛಿಸುತ್ತಿಲ್ಲ. ಪಕ್ಷದನಾಯಕರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಎಂದು ಇತರ ನಾಯಕರು ಎಷ್ಟೇ ಮನವಿ ಮಾಡುತ್ತಿದ್ದರು ರಾಹುಲ್ ಮಾತ್ರ ಆ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಈ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಚಿಂತನೆ ನಡೆಯುತ್ತಿದೆ. ಕಳೆದ ಸರ್ಕಾರದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸದ್ಯ ಕಾಂಗ್ರೆಸ್ ನಾಯಕರ ಪ್ರಮುಖ ಆಯ್ಕೆಯಾಗಿದೆ. ಇಲ್ಲಿ ಖರ್ಗೆ ಅವರನ್ನು ಹಿರಿತನದ ಆಧಾರದ ಮೇಲೆ ಆಯ್ಕೆ ಮಾಡಲು ಮಾತುಕತೆ ನಡೆಯುತ್ತಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಹೊಸ ಶಕ್ತಿಯ ಅಗತ್ಯವಿದೆ. ಹೀಗಾಗಿ ಕೇವಲ ಹಿರಿತನವನ್ನೇ ಮಾನದಂಡವನ್ನಾಗಿಟ್ಟುಕೊಳ್ಳುವ ಬದಲು ದೇಶದ ಎಲ್ಲ ರಾಜ್ಯಗಳಲ್ಲೂ ಪಕ್ಷವನ್ನು ಸಂಘಟಿಸಬಲ್ಲ ಸಾಮರ್ಥ್ಯ ಯಾರಿಗಿದೆ ಎಂಬುದನ್ನು ನೋಡಿಕೊಂಡು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಿದೆ.

ಈ ಎಲ್ಲ ಅಂಶಗಳನ್ನು ನೋಡಿದಾಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕಿಂತ ರಾಜ್ಯದಲ್ಲಿ ಸಮನ್ವಯ ಸಮಿತಿ ಮುಖ್ಯಸ್ಥರಾಗುವುದು ಪಕ್ಷದ ಸಂಘಟನೆ ವಿಚಾರದಲ್ಲಿ ಉತ್ತಮ ಆಯ್ಕೆಯಾಗಲಿದೆ.

3 COMMENTS

 1. samanvaya samiti adhyaksha sthan TERAVADUDENU ALLA; teravu kottu taruva vishayavu ALLA..! karanaviste.CHUNAVANA SANDARBHADALLI congress paskshavannu munnadege tand shrteyua siddu abvarigide.
  2. asuyapara jana vayyaktika talahadiya mele “DOSHAROPANE MADUVA JAN HORAGE HOGIDDAREW:: avarige royal congress gumpu andaru addi YILLA yella..!!
  obbarantu coordinator avara virudhha gududanne arsambhisi minchiddare<< avarenu CONGRESS pakshadavaralla..
  3, GRAhike M. p huriyalu geddirali< sotitrali8 avarade ada shiddhanta astitvagalive..,??!!// m.l.a gumpinavsare rajyada muklhandatva horabwku;'m.p. adavaru deshada m,ukhandatva horabekebudu tatvika vada..!!<<
  4. jwalkanta manohar parikkara udaharane ide, adarante.. nammi sadanaNDA GOUDARU BSY NANTARADA AVADHIYALLI "bahala dsina mukhya mantri agi uliyale yiLLAVALLA< ; AVARANNU BADALISHI SRI JAGADESSHA SHETTARA AVARIGE ADHIKARA HASTANTARA MADUVA PRAMEYA BANTU BERE PAKSHADAVARIGE; ISTE ALL A ibbaru upa mukhya mantrigala gi vartisidaddu sullalla.MAHABHARATADA KATHEYANTE <> KUNTI >MADRI HAGEYE congress PAKSHA AGUVA AGATYAVADARU YENIDE.
  5. SIDU UTTAMA ADALLITA NADESHI CONGRESS PAKSHAVCANNU MUNNADESIDARU, HORAGE IDDAVARELLA ANDARE PAKSHA TOREDFAVARELLA vrita aropa maduttale sagidaru<< ittechinadu bidi.. PAKSHA BITTU HORA HODAVARELLA "nanjanagudininda yillivarega adanne madiddarallave??! ADAKKUTTARAVIDEYE YAROBBARA BALIYALLI.
  6 sthira jatyateeta nadeyalli munade sadhisida pakshakke iodu murane avatarada dristikona> 1,2, THREE HELALE.. SMK ADALITADA NANTARA CONGRESS NELAKACXHCHITU AA STHSANAVANNU JDS+BJP+TUMBIDAVU>><!! MADHYANRARADALLI CHUNAVANE YEDURISI BSY AVARU MUKHYAMANTRIGALADAVARU.. ADU SAHA IBBARU MULHYAMANTRIGALIGE ADHIKARA HASTANTAQRISUVA STHITIGE BANDADDU SULLENALLAQ.. ALVE MATTE.,

Leave a Reply