ಭಾರತ- ಪಾಕ್ ವಿಶ್ವಕಪ್ ಪಂದ್ಯ ಪ್ರಚಾರಕ್ಕೆ ಅಭಿನಂದನ್ ಬಂಧನ ಪ್ರಕರಣ ಬಳಕೆ! ಮತ್ತೆ ನೀಚ ಬುದ್ಧಿ ಪ್ರದರ್ಶನ!

ಡಿಜಿಟಲ್ ಕನ್ನಡ ಟೀಮ್:

‘ಹುಟ್ಟ ಗುಣ ಸುಟ್ಟರು ಹೋಗಲ್ಲ…’ ಈ ಮಾತನ್ನು ಪಾಕಿಸ್ತಾನವನ್ನು ನೋಡಿಯೇ ಹೇಳಿರಬೇಕು. ಕಾರಣ ಪಾಕಿಸ್ತಾನ ಎಷ್ಟೇ ಪೆಟ್ಟು ತಿಂದರು ತನ್ನ ನೀಚ ಬುದ್ಧಿಯನ್ನು ಬಿಡುತ್ತಿಲ್ಲ. ಈಗ ಮತ್ತೊಮ್ಮೆ ತನ್ನ ಕೀಳು ಅಭಿರುಚಿಯನ್ನು ತೋರಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವೆ ಜೂನ್ 16ರಂದು ನಡೆಯಲಿರುವಕ್ ವಿಶ್ವಕಪ್ ಪಂದ್ಯಕ್ಕೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಂಧನ ಪ್ರಕರಣವನ್ನು ಬಳಸಿಕೊಂಡಿದೆ.

ಹೌದು, ಪಾಕಿಸ್ತಾನದ ಝಸ್ ಟಿವಿ ವಾಹಿನಿ ಈ ಪಂದ್ಯಕ್ಕಾಗಿ ಜಾಹಿರಾತು ಮಾಡಿದ್ದು, ಅದರಲ್ಲಿ ಅಭಿನಂದನ್ ಪ್ರಕರಣವನ್ನು ಬಳಸಿಕೊಂಡಿದೆ. ಈ ಜಾಹೀರಾತಿನ ಲಿಂಕ್ ಇಲ್ಲಿದೆ ನೋಡಿ…

ಈ ಜಾಹೀರಾತಿನಲ್ಲಿ ಅಭಿನಂದನ್ ರೀತಿ ಹೋಲುವ ಮೀಸೆ ಇರುವ ವ್ಯಕ್ತಿ ಭಾರತ ಕ್ರಿಕೆಟ್ ತಂಡದ ನೀಲಿ ಜೆರ್ಸಿ ತೊಟ್ಟಿದ್ದು, ಆತ ಟೀ ಕುಡಿಯುತ್ತಿರುತ್ತಾನೆ. ಆತನನ್ನು ವಿಚಾರಣೆ ಮಾಡುವ ವ್ಯಕ್ತಿ ಟಾಸ್ ಗೆದ್ದರೆ ಏನು ಆಯ್ಕೆ ಮಾಡಿಕೊಳ್ಳುತ್ತೀರಾ? ಎಂದು ಕೇಳುತ್ತಾನೆ ಅದಕ್ಕೆ, ಕ್ಷಮಿಸಿ ನಾನು ಅದನ್ನು ಹೇಳುವಂತಿಲ್ಲ ಎನ್ನುತ್ತಾನೆ. ಮತ್ತೆ ಪಂದ್ಯದಲ್ಲಿ ಯಾವ 11 ಆಟಗಾರರು ಆಡುತ್ತಾರೆ ಎಂದು ಕೇಳಿದಾಗ, ಅದನ್ನು ನಾನು ಹೇಳುವಂತಿಲ್ಲ ಎನ್ನುತ್ತಾನೆ.

ನಂತರ ಟೀ ಹೇಗಿದೆ ಎಂದು ವಿಚಾರಣೆ ಮಾಡುವ ವ್ಯಕ್ತಿ ಕೇಳಿದಾಗ, ಟೀ ಅದ್ಭುತವಾಗಿದೆ ಎಂದು ಉತ್ತರಿಸುತ್ತಾನೆ. ನಂತರ ಸರಿ ನೀನಿನ್ನು ಹೊರಡು ಎಂದು ವಿಚಾರಣೆ ಮಾಡುವ ವ್ಯಕ್ತಿ ಹೇಳಿದಾಗ ಅಭಿನಂದನ್ ಪಾತ್ರಧಾರಿ ಹೊರಡುತ್ತಾನೆ. ಆಗ ಆತನನ್ನು ತಡೆದು ‘ಕಪ್’ ಎಲ್ಲಿಗೆ ತಗೊಂಡು ಹೋಗ್ತಿಯಾ? ಎಂದು ಹೇಳಿ ಟೀ ಕಪ್ ಕಿತ್ತುಕೊಳ್ಳುತ್ತಾರೆ. ನಂತರ #letsbringthecuphome ಎಂಬ ಸಂದೇಶ ಹಾಕಿ, ಭಾರತ ಪಾಕ್ ಪಂದ್ಯದ ದಿನ ಹಾಗೂ ಸಮಯ ಹಾಕುತ್ತಾರೆ.

ಧೋನಿ ತನ್ನ ದೇಶದ ಸೈನಿಕರ ಬಲಿದಾನವನ್ನು ಸ್ಮರಿಸುವ ಲೋಗೋ ಧರಿಸಬೇಡಿ ಎಂದು ಹೇಳುವಾಗ, ಪಾಕಿಸ್ತಾನ ಜಾಹೀರಾತಿನಲ್ಲಿ ಎರಡು ರಾಷ್ಟ್ರಗಳ ನಡುವಣ ಬಿಕ್ಕಟ್ಟನ್ನು ಜಾಹೀರಾತಿನ ಸರಕಾಗಿ ಬಳಸುವುದು ಎಷ್ಟು ಸರಿ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

Leave a Reply