ಇನ್ಮುಂದೆ 4ನೇ ಶನಿವಾರ ಸರ್ಕಾರಿ ರಜೆ! ಈ ತಿಂಗಳಿಂದಲೇ ಜಾರಿ

ಡಿಜಿಟಲ್ ಕನ್ನಡ ಟೀಮ್:

ಇನ್ನುಮುಂದೆ ನಾಲ್ಕನೇ ಶನಿವಾರವು ಸರ್ಕಾರಿ ಕಚೇರಿಗಳಿಗೆ ರಜೆ ನೀಡಲು ಸರ್ಕಾರ ತೀರ್ಮಾನಿಸಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.

ರಾಜ್ಯ ಸರ್ಕಾರ ಬುಧವಾರ ಈ ಕುರಿತ ಗೆಜೆಟ್ ನೋಟಿಫಿಕೇಷನ್ ಬಿಡುಗಡೆ ಮಾಡಿದ್ದು, ಈ ತಿಂಗಳಿಂದಲೇ ಈ ರಜೆ ಜಾರಿಗೆ ಬರಲಿದೆ. ಇಷ್ಟು ದಿನಗಳ ಕಾಲ ನೀಡಲಾಗುತ್ತಿದ್ದ ಸಾಂದರ್ಭಿಕ ರಜೆಯನ್ನು 10ಕ್ಕೆ ಇಳಿಸಲಾಗಿದೆ.

ಸರ್ಕಾರದ ಈ ನಿರ್ಧಾರದೊಂದಿಗೆ ಇನ್ನುಮುಂದೆ ಪ್ರತಿ ತಿಂಗಳು ಎರಡನೇ ಶನಿವಾರದ ಜೊತೆ ನಾಲ್ಕನೇ ಶನಿವಾರವೂ ಸರ್ಕಾರಿ ಕಚೇರಿಗಳಿಗೆ ರಜೆ ಸಿಗಲಿದೆ.

Leave a Reply