ರಾಬರ್ಟ್ ಫೋಟೋ ಅಸಲಿನಾ, ನಕಲಿನಾ..? ಏನಂತಾರೆ ನಿರ್ಮಾಪಕರು..??

ಡಿಜಿಟಲ್ ಕನ್ನಡ ಟೀಮ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಈ ಸ್ಟಿಲ್ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ಲಾಗಿದೆ. ಬೈಕ್ ಪಕ್ಕ ದರ್ಶನ್, ವಿನೋದ್ ಪ್ರಭಾಕರ್ ಸ್ಟೈಲಿಶ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರತಂಡ ಎಷ್ಟೇ ಜಾಗ್ರತೆ ವಹಿಸಿದ್ರೂ ಈ ಸ್ಟಿಲ್ ಹೇಗೆ ಲೀಕ್ ಆಯ್ತು ಅನ್ನೋದೇ ಅರ್ಥವಾಗ್ತಿಲ್ಲ. ಆದರೆ ಕೆಲವರು ಇದು ರಾಬರ್ಟ್ ಚಿತ್ರದ ಫೋಟೋ ಅಲ್ಲ, ಫ್ಯಾನ್ ಮೇಡ್ ಅಂತ ಹೇಳ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಅಫೀಷಿಯಲ್ಲಾಗಿ ಯಾವುದೇ ಕ್ಲಾರಿಟಿ ಕೊಟ್ಟಿಲ್ಲ.

ರಾಬರ್ಟ್ ಚಿತ್ರಕ್ಕಾಗಿ ಫೋಟೋಶೂಟ್ ಮಾಡಿದ್ದು, ನಿಜ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಇರೋದು ಸತ್ಯ. ಆದರೆ ಈ ಫೋಟೋ ಮಾತ್ರ ರಾಬರ್ಟ್ ಚಿತ್ರದ ಫೋಟೋ ಅಲ್ಲ ಅನ್ನಲಾಗ್ತಿದೆ. ಯಾರೋ ಅಭಿಮಾನಿಗಳು ತಮ್ಮ ಕ್ರಿಯೇಟಿವಿಟಿ ಬಳಸಿ ಫೋಟೋ ಮಾಡಿದ್ದಾರೆ ಅನ್ನೋದು ಕೆಲವರ ವಾದ. ಮತ್ತೆ ಕೆಲವರು ನೋ ವೇ ಛಾನ್ಸೇ ಇಲ್ಲ, ಇದು ಪಕ್ಕಾ ರಾಬರ್ಟ್ ಚಿತ್ರದ ಲೀಕ್ಡ್ ಫೋಟೋ ಅಂತಿದ್ದಾರೆ.

ಸ್ವತಃ ಚಿತ್ರದ ನಿರ್ಮಾಪಕರೇ ಇದು ಫ್ಯಾನ್ ಮೇಡ್ ಅಂತ ಒಬ್ಬ ಅಭಿಮಾನಿಗೆ ಹೇಳಿರುವಂತೆ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಹಾಗಾಗಿ ಯಾವುದೇ ನಿಜ, ಯಾವುದು ನಕಲಿ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಮತ್ತೆ ಕೆಲವರು ಫೋಟೋ ಸೂಪರ್ ಆಗಿದೆ. ಥೀಮ್ ಪೋಸ್ಟರ್ ಬದಲು ಇದನ್ನೇ ರಿಲೀಸ್ ಮಾಡಿದ್ರೆ ಚೆನ್ನಾಗಿರ್ತಿತ್ತು ಅಂತಿದ್ದಾರೆ. ಅದೇಲ್ಲ ಏನೇ ಇದ್ರು ರಾಬರ್ಟ್ ದಚ್ಚು ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.

Leave a Reply