ಕಾಂಗ್ರೆಸ್ ಕಂಡೀಷನ್ ಒಪ್ಪಿದ ಶಂಕರ್! ಉತ್ತಮ ಇಲಾಖೆ ಸಿಗುವ ವಿಶ್ವಾಸ

ಡಿಜಿಟಲ್ ಕನ್ನಡ ಟೀಮ್:

ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಸೇರಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳಬೇಕು ಎಂಬ ಷರತ್ತಿಗೆ ಒಪ್ಪಿರುವ ಪಕ್ಷೇತರ ಶಾಸಕ ಶಂಕರ್, ತಮಗೆ ಉತ್ತಮ ಖಾತೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಶಂಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶಂಕರ್ ಹೇಳಿರುವುದಿಷ್ಟು… ‘ನಾನು ಕಾಂಗ್ರೆಸ್ ಪಕ್ಷ ಸೇರಲು ಒಪ್ಪಿದ್ದೇನೆ. ನನಗೆ ಈ ಹಿಂದೆ ಉತಮ ಖಾತೆಯನ್ನು ನೀಡಲಾಗಿತ್ತು. ಈಗಲೂ ಉತ್ತಮ ಖಾತೆ ಸಿಗುವ ವಿಶ್ವಾಸವಿದೆ. ಸದ್ಯ ಕಾಂಗ್ರೆಸ್ ನಲ್ಲಿ ಖಾಲಿ ಇರುವ ಖಾತೆಯನ್ನು ನೀಡುವ ಸಾಧ್ಯತೆ ಇದೆ. ನನ್ನ ಕ್ಷೇತ್ರದ ಹಿತದೃಷ್ಟಿಯಿಂದ ನಾನು ಕಾಂಗ್ರೆಸ್ ಸೇರಿ ಸಚಿವ ಸ್ಥಾನ ಅಲಂಕರಿಸಲು ನಿರ್ಧರಿಸಿದ್ದೇನೆ.’

Leave a Reply