ಪಾಕಿಸ್ತಾನದ ವಿವಾದಿತ ಜಾಹೀರಾತಿಗೆ ತನ್ನ ಒಳಉಡುಪು ತೆಗೆದು ಉತ್ತರ ಕೊಟ್ಟ ಪೂನಂ ಪಾಂಡೆ!

ಡಿಜಿಟಲ್ ಕನ್ನಡ ಟೀಮ್:

ಭಾರತ ಹಾಗೂ ಪಾಕಿಸ್ತಾನ ನಡುವಣ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ಪಾಕಿಸ್ತಾನ ವಾಹಿನಿ ಮಾಡಿರುವ ವಿವಾದಾತ್ಮಕ ಜಾಹೀರಾತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಜಾಹೀರಾತನ್ನು ಖಂಡಿಸಿ ಬಾಲಿವುಡ್ ಬೆಡಗಿ ಪೂನಂ ಪಾಂಡೆ ಸಹ ಕಿಡಿ ಕಾರಿದ್ದು, ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಪೂನಂ ಪಾಂಡೆ ಅವರ ತಿರುಗೇಟು ನೀಡಿದ ವೀಡಿಯೋ ಹೀಗಿದೆ…

‘ಪಾಕಿಸ್ತಾನಕ್ಕೆ ನನ್ನ ಉತ್ತರ ಹೀಗಿದೆ… ಪಾಕಿಸ್ತಾನ ಕೇವಲ ಟೀ ಕಪ್ ಗೆ ಇಷ್ಟು ಆಸೆ ಪಡುವುದಾದರೆ ತಗೋಳಿ ನನ್ನ ಈ ಒಳಉಡುಪಿನಲ್ಲಿ ನೀವು ಎರಡು ಕಪ್ ಟೀ ಕುಡಿಯಬಹುದು’ ಎಂದು ಪೂನಂ ಪಾಂಡೆ ತಮ್ಮ ಒಳಉಡುಪನ್ನು ತೆಗೆದುಕೊಟ್ಟಿದ್ದಾರೆ.

ಪೂನಂ ಪಾಂಡೆ ಕ್ರಿಕೆಟ್ ಅಭಿಮಾನಿ ಎಂಬುದು ಎಳ್ಲರಿಗೂ ಗೊತ್ತಿರುವ ವಿಚಾರ. ಭಾರತ ತಂಡ ಗೆದ್ದರೆ ತನ್ನ ಸೌಂದರ್ಯ ದರ್ಶನ ನೀಡುವುದಾಗಿ ಹೇಳಿಕೆ ಕೊಟ್ಟು ಸುದ್ದಿ ಮಾಡುವ ಪೂನಂ ಪಾಂಡೆ ಇತ್ತೀಚೆಗೆ ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಂದ ಗೆದ್ದಾಗ ಟೀಂ ಇಂಡಿಯಾಗೋಸ್ಕರ ಹಾಟ್ ಫೋಟೋ ಅಪ್ ಲೋಡ್ ಮಾಡಿದ್ದರು. ಈಗ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದು, ಪೂನಂ ಅವರ ಈ ತಿರುಗೇಟನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.

Leave a Reply