ಕ್ರಿಕೆಟ್​ ಕಾಶಿ ಲಾರ್ಡ್ಸ್​ ನಲ್ಲಿ ಗೆದ್ದು ಬೀಗಿದ ಕಿಚ್ಚನ ಬಾಯ್ಸ್!

ಡಿಜಿಟಲ್ ಕನ್ನಡ ಟೀಮ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ, ಸಿಸಿಎಲ್ ನಲ್ಲಿ ಕನ್ನಡ ಚಿತ್ರರಂಗದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕಿಚ್ಚ ಈಗ ಎರಡನೇ ಬಾರಿಗೆ ಇಂಗ್ಲೆಂಡ್ ನಲ್ಲಿ ನಡೆಯುವ ಕಾರ್ಪೊರೇಟ್ ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮ ತಂಡ ‘ವಿಷನ್​ನೇರ್’ ಅನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಈ ಗೆಲುವನ್ನು ಅಗಲಿದ ನಟ ಹಾಗೂ ತಮ್ಮ ತಂಡದ ಸದಸ್ಯ ಧ್ರುವ ಅವರಿಗೆ ಅರ್ಪಿಸಿದ್ದಾರೆ.

ಈ ಜಯದ ಸಂಭ್ರಮವನ್ನು ಟ್ವಿಟರ್​ ಮೂಲಕ ಹಂಚಿಕೊಂಡಿರುವ ಸುದೀಪ್​, ‘ನಾವು ಮತ್ತೆ ಗೆದ್ದಿದ್ದೇವೆ. ಅಭೂತಪೂರ್ವ ಕಾರ್ಪೊರೇಟ್​ ಲೀಗ್​ ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಈ ಟೂರ್ನಿಯಲ್ಲಿ ಆದಿರುವುದು ತುಂಬಾ ಖುಷಿ ನೀಡಿದೆ. ಈ ಬಾರಿಯೂ ಟ್ರೋಫಿಯನ್ನು ನಮ್ಮ ವಿಷನೇರ್​ ತಂಡ ಗೆದ್ದಿದೆ. ನಮಗೆ ಮತ್ತೊಮ್ಮೆ ಸ್ವಾಗತ ಕೋರಿ, ಒಳ್ಳೆಯ ಸತ್ಕಾರ ನೀಡಿದ ಲಾರ್ಡ್ಸ್​ ಆಡಳಿತ ಮಂಡಳಿಗೆ ಧನ್ಯವಾದಗಳು. ಕಳೆದ ಬಾರಿ ನಮ್ಮೊಂದಿಗೆ ತಂಡದಲ್ಲಿದ್ದು, ಈಗ ನಮ್ಮನ್ನು ಅಗಲಿರುವ ಧ್ರುವನಿಗೆ ಈ ಟ್ರೋಫಿಯನ್ನು ಅರ್ಪಿಸುತ್ತಿದ್ದೇನೆ’ ಎಂದು​ ತಿಳಿಸಿದ್ದಾರೆ.

ಪ್ರತೀ ವರ್ಷ​ ನಡೆಯಲಿರುವ ಈ ಟೂರ್ನಿಯಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ ಓವೈಸ್ ಶಾ ಅವರ ತಂಡದ ಜತೆ ಕಿಚ್ಚನ ಹುಡುಗರು ಸೇರಿ ಕಾರ್ಪೊರೇಟ್​ ಕ್ರಿಕೆಟ್​ ಲೀಗ್​ನಲ್ಲಿ ಭಾಗವಹಿಸುತ್ತಾರೆ.

ಕಳೆದ ಭಾನುವಾರ ಲಾರ್ಡ್ಸ್​​ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಪಂದ್ಯವನ್ನೂ ಸುದೀಪ್​ ತಮ್ಮ ಪತ್ನಿ ಪ್ರಿಯಾ ಜತೆ ವೀಕ್ಷಿಸಿದ್ದರು. ಕಿಚ್ಚ ಸುದೀಪ್​ ಜತೆಯಲ್ಲಿ ನಟರಾದ ರಾಜೀವ್​ ಹಾಗೂ ಪ್ರದೀಪ್ ಕೂಡ ತಂಡದಲ್ಲಿದ್ದಾರೆ.

Leave a Reply