ಮಧ್ಯಪ್ರದೇಶ ಸರ್ಕಾರ ಉಳಿಸಿಕೊಳ್ಳಲು ಕರ್ನಾಟಕದ ದೋಸ್ತಿಗಳ ಅಸ್ತ್ರ ಪ್ರಯೋಗಿಸಿದ ಕಮಲನಾಥ್!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಆಪರೇಷನ್ ಕಮಲದಿಂದ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯೋಗಿಸಲಾದ ತಂತ್ರವನ್ನೇ ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ತಮ್ಮ ಸರ್ಕಾರ ಉಳಿಸಿಕೊಳ್ಳಲು ಬಳಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರವನ್ನು ಬೀಳಿಸುವ ಬಿಜೆಪಿ ಪ್ರಯತ್ನಕ್ಕೆ ಬ್ರೇಕ್ ಹಾಕಲು ಕಳೆದ ವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರು ಪಕ್ಷೇತರ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಇದೇ ತಂತ್ರವನ್ನೇ ಕಮಲನಾಥ್ ಪ್ರಯೋಗಿಸಿ ಮಧ್ಯಪ್ರದೇಶದಲ್ಲೂ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಲೋಕಸಭೆ ಚುನಾವಣೆ ಫಲಿಂತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಗಮನ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬದಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವತ್ತ ನೆಟ್ಟಿತ್ತು. ಹೀಗಾಗಿ ಬಿಜೆಪಿಗೆ ಇಂತಹ ಅವಕಾಶ ಮಾಡಿಕೊಡಬಾರದು ಎಂಬ ಉದ್ದೇಶದೊಂದಿಗೆ ಕಮಲನಾಥ್ ಅವರ ಸಂಪುಟದಲ್ಲಿ ಪಕ್ಷೇತರರು ಹಾಗೂ ಇತರೆ ಬೆಂಬಲಿತ ಪಕ್ಷದ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಮುಖ್ಯಮಂತ್ರಿ ಕಮಲ್​ನಾಥ್ ಸಂಪುಟದಲ್ಲಿ ಈಗಾಗಲೇ ಓರ್ವ ಪಕ್ಷೇತರ ಶಾಸಕ ಸಚಿವರಾಗಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನು ಮೂವರು ಪಕ್ಷೇತರ ಶಾಸಕರಿದ್ದಾರೆ. ಜತೆಗೆ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಎಸ್​ಪಿಯ ಇಬ್ಬರು ಶಾಸಕರು ಹಾಗೂ ಎಸ್​ಪಿ ಓರ್ವ ಶಾಸಕರು ಇದ್ದಾರೆ. ಅವರಿಗೂ ಕೂಡ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರದ ಬುಡ ಗಟ್ಟಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಇದಕ್ಕಾಗಿ ಮಧ್ಯಪ್ರದೇಶ ಕಾಂಗ್ರೆಸ್ ನ ಮೂವರು ನಾಯಕರಾದ ದಿಗ್ವಿಜಯ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕಮಲ್​ನಾಥ್ ಅವರ ಕೋಟಾದಲ್ಲಿನ ತಲಾ ಇಬ್ಬರು ಸಚಿವರನ್ನು ಕೈಬಿಟ್ಟು, ಅವುಗಳನ್ನು ಪಕ್ಷೇತರರು ಹಾಗೂ ಬೆಂಬಲಿತ ಇತರೆ ಪಕ್ಷದ ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ಮಧ್ಯಪ್ರದೇಶದಲ್ಲೂ ಆಪರೇಷನ್ ಕಮಲದ ಪ್ರಯತ್ನಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿದೆ.

2 COMMENTS

  1. self actualization is key factor..!!..!once upon a time bsy used the same Technic to get post of c.m. ship ;but sri KUMARASWAMY was harder to him..due to this reason bsy took charge of c.. ship but not for full term..!! he borrowed M.P. FROM CENTER. NAMELY sri SADANANDA GOUDA BUT HE WAS NOT FOR FULL TIME HE HANDED OVER THE CHARGE TO SREEE JADA DEESHI FOR SMALL PERIOD.. NEXT.. WHEN AHINDA WORKED IN KARNATAKA sidhareamaih WAS FULL TI C.M. OF KARNATAKA STATE FOR FULL TERM.. BUT SOME MINISTERS WERE ATTACHED WITH THE WORD ‘LINGAYATISM’ EVEN THEY WERE MINISTER TO PERFORM WELL.. THAT MAJOR DEFECTIVE PROCESS MADE DO DO LITTLE; NOW AND THEN IT’S REMINDER FOR CABINET AS WELL AS STAND POINT OF WORKING MINISTERS INVOLVED; SECVONDLY THE PERSONS WHO ENJOYED IN CONGREE RAJYA / DESH.. SOME ROYALTIES FOR THE CAUSE OF DISSATISFACTION.. BUT STAND POINT OF SIODDU WAS STRONG…”nanjanagooodu not wqorkable to desidents.. AND NOW ALOS LOYALS AREW NOT READY TO SACRIFICE TO GOVERNMENT OF PRESENT KARNATAKQA STATE.. < THAT TO JOINT VENTURE.. OPPONENT OF SIDDU WAS OPPOINTED AS JDS PRESIDENT SO ON HE ALSO CONTINUOUSLY FOLLOWING IRRITATABLE MWTHODS TO SATISF JDS TOP..!! AT LAST RESIGNED ALSO FOR CRITICAL REASONS OF EWLECTION POF KARNATAKA STATE…!! JDS BAGGED LITTLE SEATS BUT CONGRESS GOT MORE SEATS NOW ALSO IN VIDHANA SOUDHA.. BUTY THERE WAS NO NEED TO CRITISIZE FORMER C.M. OF KArnataka state.. because after.. jds combined and bsy full terme period lot of years were ruled by other parties but efforts of siddu only yieled lot now also..,! because of desidents there may be little seat but now govt is of jds+congress. that might be welcomed by congress head.. why jdfs oppointed rhe reval of siddu is ' only for tough fight to make their party strong.. thatr congress knows well. now only LEFT WITH GOVT IS TO SATISFY ALL.. ' WHO WILL BELL THE CAT NOW<<??!? RATS ARE RATTLING.. FOR PATYT SPIRIT OLD AND EXPERINCED MINISTERS OF KARNATAKA has wanted tosacrifice something for junierts.. then only prob;lem be solved.. still one more point which be mentioned her is''nobody is ready to dissolve the curent status of vidhan soudha.. because they are nof no confidance of win in forthcoming mid term elections.. am i right..,!!??

Leave a Reply