ನಿಮಗೆ ಟೀ ಕಪ್ಪೇ ಗತಿ! ಪಾಕ್ ವಿವಾದಿತ ಜಾಹೀರಾತಿಗೆ ಪಾರುಲ್ ಕೊಟ್ಟ ತಿರುಗೇಟು ಮಿಸ್ ಮಾಡದೇ ನೋಡಿ!

ಡಿಜಿಟಲ್ ಕನ್ನಡ ಟೀಮ್:

ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಣ ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಅಭೂತಪೂರ್ವ ಗೆಲವುವನ್ನು ವಿಶ್ವದ ಎಲ್ಲೆಡೆ ಭಾರತೀಯ ಅಬಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಂದ್ಯಕ್ಕಾಗಿ ಪಾಕಿಸ್ತಾನ ವಾಹಿನಿ ಮಾಡಿದ್ದ ವಿವಾದಿತ ಜಾಹೀರಾತಿಗೆ ಪ್ರತಿಯಾಗಿ ಮುಟ್ಟಿನೋಡುಕೊಳ್ಳುವಂತಹ ತಿರುಗೇಟುಗಳು ಬರುತ್ತಿವೆ. ಆ ಪೈಕಿ ಸ್ಯಾಂಡಲ್ ವುಡ್ ನಟಿ ಪಾರುಲ್ ಯಾದವ್ ಅವರು ಕೂಡ ಪಾಕ್ ಜಾಹೀರಾತನ್ನು ವಮರು ಸೃಷ್ಟಿ ಮಾಡಿ ನಿಮಗೆ ಟೀ ಕಪ್ಪೇ ಗತಿ ಎನ್ನುವ ವಿಡಿಯೋ ಮಾಡಿ ಬಿಟ್ಟಿದ್ದಾರೆ.

ಪಂದ್ಯದ ಪ್ರಚಾರಕ್ಕೆ ಪಾಕಿಸ್ತಾನದ ಝಾಜ್ ಟೀವಿ ವಾಹಿನಿ ಅಭಿನಂದನ್ ಅವರ ಪ್ರಕರಣವನ್ನು ಬಳಸಿಕೊಂಡು ತನ್ನ ಕೀಳುಮಟ್ಟದ ಅಭಿರುಚಿಯನ್ನು ಪ್ರದರ್ಶಿಸಿತ್ತು. ಈಗ ಅದಕ್ಕೆ ಪ್ರತಿಯಾಗಿ ಪಾರುಲ್ ಅದೇ ಜಾಹೀರಾತನ್ನು ಮರುಸೃಷ್ಟಿ ಮಾಡಿರುವ ಪಾರುಲ್ ಯಾದವ್ ವಿಂಗ್ ಕಮಾಂಡರ್ ಅಭಿನಂದನ್ ರೀತಿ ಕಾಣಿಸಿಕೊಂಡಿದ್ದು, ಅಂತ್ಯದಲ್ಲಿ ‘ನೀವು ಈ ಟೀ ಕಪ್ ಇಟ್ಟುಕೊಳ್ಳಿ ನಾವು ವಿಶ್ವಕಪ್ ಇಟ್ಟುಕೊಳ್ಳುತ್ತೇವೆ’ ಎಂದು ತಿರುಗೇಟು ನೀಡಿದ್ದಾರೆ. ಪಾರುಲ್ ಅವರ ಈ ವಿಡಿಯೋಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದು, ಪಾಕಿಸ್ತಾನ ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ.

Leave a Reply