ಕಿಚ್ಚನಿಗೆ ಸೂರಿ ಆಕ್ಷನ್ ಕಟ್! ಬಿಗ್ ಬಜೆಟ್ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಸುಕ್ಕಾ ಸೂರಿ ಕಾಬಿನೇಷನ್ ನಲ್ಲಿ ಚಿತ್ರವೊಂದು ಸೆಟ್ಟೇರಲು ಸಿದ್ಧವಾಗಿದ್ದು, ಇದು ಚಂದನವನದ ಬಿಗ್ ಬಜೆಟ್ ಚಿತ್ರವಾಗಲಿದೆ.

ಸದ್ಯ ಸುದೀಪ್ ಅವರ ಬಹುನಿರೀಕ್ಷೆಯ ಪೈಲ್ವಾನ್ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಕೋಟಿಗೊಬ್ಬ 3, ಹಿಂದಿಯ ದಬಾಂಗ್ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ಸೂರಿ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.

ಈ ಚಿತ್ರವನ್ನು ಟಗರು ಖ್ಯಾತಿಯ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಲಿದ್ದು, ಕೆಜಿಎಫ್ ನಂತರದ ಹೈ ಬಜೆಟ್ ಚಿತ್ರವಾಗಲಿದೆ. ಈ ಚಿತ್ರ ಕೂಡ 5 ಭಾಷೆಗಳಲ್ಲಿ ಸಿದ್ಧವಾಗಲಿದೆ. ಈಗಾಗಲೇ ಸುದೀಪ್ ಬಿಲ್ಲ ರಂಗ ಬಾಷಾ ಸಿನಿಮಾ ಪ್ರಕಟಿಸಿದ್ದು, ಈ ಎಲ್ಲ ಚಿತ್ರಗಳು ಮುಗಿದ ನಂತರ ಡಿಸೆಂಬರ್ ವೇಳೆಗೆ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ.

Leave a Reply