ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿ ಆದೇಶ ಮಾಡಿದೆ. ಕಾಂಗ್ರೆಸ್ ನಾಯಕರ ವಿರುದ್ಧವೇ ವಾಗ್ದಾಳಿ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೋಟಿಸ್ ಜಾರಿ ಮಾಡಿದ್ರು. ಆದ್ರೆ ನಾನು ಯಾವುದೇ ನೋಟಿಸ್ಗೆ ಉತ್ತರ ಕೊಡಲ್ಲ ಎಂದು ಮಾಧ್ಯಮಗಳ ಮೂಲಕವೇ ಉತ್ತರ ಕೊಟ್ಟಿದ್ರು. ಇದೆಲ್ಲವನ್ನೂ ಪರಿಗಣಿಸಿದ್ದ ಕೆಪಿಸಿಸಿ, ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಕಳಹಿಸಿತ್ತು.
ಕೆಪಿಸಿಸಿ ಕಳುಹಿಸಿದ ಪ್ರಸ್ತಾವನೆಯನ್ನು ಎಐಸಿಸಿ ಅಂಗೀಕಾರ ಮಾಡಿದ್ದು ರೋಷನ್ ಬೇಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ ಎಂದು ಕೆಪಿಸಿಸಿ ಜನರಲ್ ಸೆಕ್ರೆಟ್ರಿ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಬಫೂನ್, ಸಿದ್ದು ದುರಹಂಕಾರಿ, ದಿನೇಶ್ ಗುಂಡೂರಾವ್ ಯೂಸ್ಲೆಸ್ ಪ್ರೆಸಿಡೆಂಟ್ ಎಂದು ವಾಗ್ದಾಳಿ ನಡೆಸಿದ್ದ ರೋಷನ್ ಬೇಗ್ ಲೋಕಸಭಾ ಸೋಲಿನ ಬಳಿಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದ ರೋಷನ್ ಬೇಗ್ ಕಾಂಗ್ರೆಸ್ ನಾಯಕರನ್ನು ಹೀನಾಯ ಮಾನಾಯವಾಗಿ ಟೀಕಿಸಿದ್ರು.
ಕುಮಾರಸ್ವಾಮಿ ಮನೆ ಬಾಗಿಲಿಗೆ ಸಿದ್ದರಾಮಯ್ಯನೇ ಹೋಗಿ ಅವರನ್ನ ಸಿಎಂ ಮಾಡಿದ್ರು. ಆದರೆ ಈಗ ನಾನೇ ಸಿಎಂ ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ ಎಂದು ಲೇವಡಿ ಮಾಡಿದ್ರು. ಜೊತೆಗೆ ನನ್ನನ್ನು ಹಾಗೂ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ರು. ಪಕ್ಷದಲ್ಲಿ ಹಿರಿಯ ನಾಯಕರನ್ನ ಕಡೆಗಣಿಸಲಾಗ್ತಿದೆ ಅಂತಾನೂ ಕಿಡಿಕಾರಿದ್ದರು. ಧರ್ಮ ಒಡೆಯೋದರ ಜೊತೆಗೆ ಬಾಯಿಗೆ ಬಂದಂತೆ ಮಾತಾಡಿದ್ರೆ ಜನ ಒಪ್ತಾರಾ..? ಎಂದು ಪ್ರಶ್ನಿಸಿದ್ದ ರೋಷನ್ ಬೇಗ್, ಅದೇ ಕಾರಣಕ್ಕಾಗಿ ವಿಧಾನಸಭೆಯಲ್ಲಿ 79 ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ರು. ಇದಕ್ಕೆಲ್ಲಾ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗ್ಗೆಯೂ ಕಿಡಿಕಾರಿದ್ರು. ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವ್ರದ್ದು ಬಹುದೊಡ್ಡ ಫ್ಲಾಪ್ ಶೋ. ಸಿದ್ದರಾಮಯ್ಯ ತಮ್ಮನ್ನ ತಾವೇ ಬಹುದೊಡ್ಡ ಸಿಎಲ್ಪಿ ಲೀಡರ್ ಅಂದುಕೊಂಡಿದ್ದಾರೆ. ಇದಕ್ಕೆಲ್ಲಾ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಜವಾಬ್ದಾರು ಎಂದು ಕಿಡಿಕಾರಿದ್ರು.
ಇದೀಗ ಸಿದ್ದರಾಮಯ್ಯ ಸ್ವತಃ ದೆಹಲಿಗೆ ತೆರಳಿ ರೋಷನ್ ಬೇಗ್ರನ್ನು ಪಕ್ಷದಿಂದ ಅಮಾನತು ಮಾಡುವಂತೆ ಒತ್ತಾಡ ಹೇರಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಪಿಸಿಸಿ ಪ್ರಸ್ತಾವನೆಯನ್ನು ಏಐಸಿಸಿ ಅಂಗೀಕಾರ ಮಾಡಿದೆ ಅನ್ನೋ ಮಾತುಗಳೂ ಕೇಳಿ ಬಂದಿವೆ. ಇದೀಗ ಐಎಂಎ ಹಗರಣದಲ್ಲಿ ಶಾಸಕ ರೋಷನ್ ಬೇಗ್ ಬಂಧನ ಆದರೂ ಅಚ್ಚರಿಯಿಲ್ಲ ಅನ್ನೋ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.