ಮೋದಿ ಯೋಗ ಮಾಡಿ ಗೆದ್ರು, ರಾಹುಲ್ ಯೋಗ ಮಾಡದೇ ಸೋತ್ರು! ಬಾಬಾ ರಾಮದೇವ್ ಲಾಜಿಕ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ ಅದಕ್ಕೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ…! ಹೀಗಂತಾ ಹೇಳಿದ್ದು ಬೇರಾರೂ ಅಲ್ಲ ಯೋಗ ಗುರು ಬಾಬಾ ರಾಮದೇವ್.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಅನೇಕ ವಿಶ್ಲೇಷಕರು ಅನೇಕ ವಿಶ್ಲೇಷಣೆ ಮಾಡಿದ್ದಾಗಿದೆ. ಆದರೆ ಬಾಬಾ ರಾಮದೇವ್ ಅವರ ಪ್ರಕಾರ ಕಾಂಗ್ರೆಸ್ ಹಿನ್ನಡೆಗೆ ಪ್ರಮುಖ ಕಾರಣ ರಾಹುಲ್ ಗಾಂಧಿ ಯೋಗ ಮಾಡದಿರುವುದು. ಅರೆ, ಯೋಗ ಮಾಡುವುದಕ್ಕೂ ಲೋಕಸಭೆ ಚುನಾವಣೆ ಗೆಲ್ಲೋದಕ್ಕೂ ಏನು ಸಂಬಂಧ ಅಂತಾ ಕೇಳ್ತೀರಾ? ಅದಕ್ಕೆ ರಾಮದೇವ್ ಅವರ ವ್ಯಾಖ್ಯಾನ ಕೇಳಬೇಕು. ನಾಳೆ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು ಈ ಸಂಬಂಧ ತಯಾರಿ ನಡೆಸಿರುವ ರಾಮದೇವ್ ಯೋಗ ಮಾಡುವವರಿಗಷ್ಟೇ ಒಳ್ಳೆದಿನ (ಅಚ್ಚೇ ದಿನ್) ಬರುತ್ತದೆ ಎಂದು ಹೇಳಿದ್ದಾರೆ.

‘ಯೋಗವನ್ನು ವಿಶ್ವವ್ಯಾಪಿ ಜನಪ್ರಿಯಗೊಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿರುವ ರಾಮದೇವ್, ರಾಹುಲ್ ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಮೋದಿ ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಯೋಗಾಭ್ಯಾಸ ಮಾಡುತ್ತಿದ್ದರು. ಆದರೆ ಅವರ ವಂಶದ ಕುಡಿಯಾಗಿರುವ ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ. ಹಾಗಾಗಿ ಅವರ ರಾಜಕೀಯ ಜೀವನ ಇಳಿಮುಖದತ್ತ ಸಾಗಿದೆ. ಯೋಗ ಮಾಡುವವರಿಗೆ ಮಾತ್ರ ಅಚ್ಚೇ ದಿನ್ ಬರುತ್ತದೆ.’

Leave a Reply