ಶಿವಣ್ಣ ಮತ್ತೆ ಭಜರಂಗಿ ಧ್ಯಾನ!

ಡಿಜಿಟಲ್ ಕನ್ನಡ ಟೀಮ್:

ಭಜರಂಗಿ, ವಜ್ರಕಾಯದಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಅವರು ಮತ್ತೆ ಒಂದಾಗಿದ್ದು, ಈ ಬಾರಿ ಭಜರಂಗಿ 2 ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಗುರುವಾರ ಯಡಿಯೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು, ಗೀತಾ ಶಿವರಾಜ್ ಕುಮಾರ್ ಅವರು ಚಿತ್ರದ ಮೊದಲ ದೃಷ್ಯಕ್ಕೆ ಕ್ಲಾಪ್ ಮಾಡಿದ್ದಾರೆ. ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ಅವರು ನಿರ್ಮಾಣ ಮಾಡುತ್ತಿದ್ದು, ಸ್ವಾಮಿ ಆಂಜನೇಯನ ಹೆಸರಿನಲ್ಲಿ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ.

ಇದೇ ತಿಂಗಳು ಶಿವಣ್ಣ ಅಭಿನಯದ ರುಸ್ತುಂ ಚಿತ್ರ ತೆರೆಗೆ ಬರುವ ಸಂಭ್ರಮದಲ್ಲಿರುವ ಅಬಿಮಾನಿಗಳಿಗೆ ಭಜರಂಗಿ 2 ಚಿತ್ರ ಆರಂಭವಾಗಿರುವುದು ಡಬಲ್ ಧಮಾಕ ಕೊಟ್ಟಂತಾಗಿದೆ.

Leave a Reply