ಬಿಗ್ ಬಾಸ್ ಸೀಸನ್ 13ಕ್ಕೆ ಸಲ್ಮಾನ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಡಿಜಿಟಲ್ ಕನ್ನಡ ಟೀಮ್:

ಹಿಂದಿಯ ಬಿಗ್ ಬಾಸ್ ಸೀಸನ್ 13ರ ಕಾರ್ಯಕ್ರಮದ ನಿರೂಪಣೆಯನ್ನು ಸಲ್ಮಾನ್ ಖಾನ್ ನಡೆಸುತ್ತಾರೆಯೇ ಇಲ್ಲವೇ ಎಂಬ ಅನುಮಾನ ಹುಟ್ಟಿದ್ದವು. ಆದರೆ ಈಗ ಸಲ್ಮಾನ್ ಅವರೇ ಫಿಕ್ಸ್ ಆಗಿದ್ದು, ಈ ಬಾರಿ ಅವರ ಸಂಭಾವನೆ ಪ್ರಮಾಣ ಕೇಳಿದ್ರೆ ನೀವು ಸುಸ್ತ್ ಆಗ್ತಾರಾ. ಕಾರಣ, ಸಲ್ಮಾನ್ ಖಾನ್ ಸುಮಾರು 400 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ!

ಹೌದು, ಸುದ್ದಿ ಜಾಲಾತಾಣ ಪಿಂಕ್ ವಿಲ್ಲಾ ವರದಿ ಪ್ರಕಾರ ಸಲ್ಮಾನ್ ಖಾನ್ ಪ್ರತಿ ವಾರಾಂತ್ಯದ ಸಂಚಿಕೆಗಳ ನಿರೂಪಣೆಗೆ ಸಲ್ಮಾನ್ ಖಾನ್ ಬರೋಬ್ಬರಿ 31 ಕೋಟಿ ಸಂಭಾವನೆ ಪಡೆಯಲಿದ್ದು, ಒಟ್ಟು 26 ಸಂಚಿಕೆಗಳನ್ನು ನಿರೂಪಣೆ ಮಾಡಲಿದ್ದಾರೆ. ಅದರೊಂದಿಗೆ ಸಲ್ಮಾನ್ ಸುಮಾರು 403 ಕೋಟಿ ಸಂಭಾವನೆ ಪಡೆಯಲಿದ್ದಾರೆ.

ಸೀಸನ್ 13ರ ಭಾಗವಾಗಿರುವುದನ್ನು ಸ್ವತಃ ಸಲ್ಮಾನ್ ಖಚಿತಪಡಿಸಿದ್ದು, ಸಂಭಾವನೆ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಇನ್ನು ಕಳೆದ ಮೂರು ಆವೃತ್ತಿಗಳಿಂದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೂ ಅವಕಾಶವಿತ್ತು. ಆದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಬಿನ್ ಬಾಸ್ ಮನೆಗೆ ಅವಕಾಶವಿದೆ.

Leave a Reply