ಸಚಿವ ಡಿಕೆ ಶಿವಕುಮಾರ್ ಕಾರು ಬಿಟ್ಟು ಮೆಟ್ರೋ ಪ್ರಯಾಣ ಮಾಡಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಅವರು ಇಂದು ವಿಧಾನಸೌಧದಿಂದ ಸೆಂಟ್ರಲ್ ಕಾಲೇಜುವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿ ಐಟಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆಗೆ ಹಾಜರಾದರು.

ಸಚಿವರು ಇಂದು ಕಾರನ್ನು ಬಿಟ್ಟು ಮೆಟ್ರೋದಲ್ಲಿ ಪ್ರಯಾಣ ಮಾಡಿಲು ಕಾರಣವಿದೆ. ಅದೇನೆಂದರೆ ವಾಲ್ಮೀಕಿ ಸಂಘಟನೆ ಪ್ರತಿಭಟನೆ ಪ್ರಯುಕ್ತ ವಿಧಾನಸೌಧದ ಮುಂದೆ ರಸ್ತೆ ಬಂದ್ ಆಗಿದ್ದು, ಹೀಗಾಗಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ವಿಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ, ಕೋರ್ಟ್ ಗೆ ಹಾಜರಾಗಿದ್ದದಾರೆ.

Leave a Reply