ಇರಾಕ್ ನಲ್ಲಿ ರಾಮನ ಕುರುಹು? ತಜ್ಞರು ಹೇಳೋದೇನು?

ಡಿಜಿಟಲ್ ಕನ್ನಡ ಟೀಮ್:

ಇಸ್ಲಾಂ ರಾಷ್ಟ್ರ ಇರಾಕ್ ನ ಹೊರೇನ್ ಶೇಖಾನ್ ಪ್ರದೇಶದ ಬಂಡೆಯಲ್ಲಿ ಹಿಂದೂ ದೇವತೆ ಶ್ರೀರಾಮಚಂದ್ರನ ಹೋಲುವ ಚಿತ್ರ ಅಥವಾ ಕುರುಹು ಪತ್ತೆಯಾಗಿದೆ ಎಂಬ ಸುದ್ದಿ ವ್ಯಾಪಕವಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಅಯೋಧ್ಯೆಯ ಶೋಧ ಸಂಸ್ಥಾನದ ಮನವಿ ಮೇರೆಗೆ ಇರಾಕ್ ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ಅವರ ನೇತೃತ್ವದ ತಂಡ ಈ ಸ್ಥಳಕ್ಕೆ ಭೇಟಿ ನೀಡಿದೆ.

ಈ ಬಂಡೆಯ ಮೇಲಿರುವ ಕುರುಹುವಿನಲ್ಲಿ ಬಿಲ್ಲುಧಾರಿಯ ರಾಜ ನಿಂತಿದ್ದು, ಪಕ್ಕದಲ್ಲಿ ಸೇವಕ ಮಂಡಿಯೂರಿ ನಮಿಸುತ್ತಿರುವ ಚಿತ್ರವಿದೆ. ಇದು ರಾಮ ಹಾಗೂ ಹನುಮನನ್ನು ನೆನಪಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪ್ರದೀಪ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪತ್ತೆಯಾಗಿರುವ ಕುರುಹು ರಾಜ ಮತ್ತು ಸೇವಕನ ಚಿತ್ರದಂತೆ ಕಾಣುತ್ತಿದೆ. ಇದು ಶ್ರೀರಾಮ ಹಾಗೂ ಹನುಮಂತನನ್ನು ನೆನಪಿಸುತ್ತದೆಯಾದರೂ. ಇರಾಕ್​ನ ಪ್ರಾಚ್ಯವಸ್ತು ಸಂಶೋಧಕರು, ಈ ಉಬ್ಬುಶಿಲ್ಪಕ್ಕೂ ಭಾರತದ ಶ್ರೀರಾಮನಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ಸಿಂಧೂ ಹಾಗೂ ಮೆಸಪೊಟೆಮಿಯಾ ನಾಗರಿಕತೆಗಳ ನಡುವಣ ಸಂಬಂಧವನ್ನು ಪತ್ತೆಹಚ್ಚಲು ಅನುಮತಿ ಕೋರಿ ಇರಾಕ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ನಾಗರಿಕತೆಗಳ ನಡುವಿನ ಸಂಬಂಧಗಳ ಅಧಿಕೃತ ಅಧ್ಯಯನ ಇದೇ ಮೊದಲ ಪ್ರಯತ್ನವಾಗಿದೆ ಎಂದಿದ್ದಾರೆ.

ಕ್ರಿ.ಪೂ 4500ರಿಂದ 1900 ಕಾಲಾವಧಿಯಲ್ಲಿ ಮೆಸಪೊಟೆಮಿಯಾ ನಾಗರೀಕತೆ ಮೇಲೆ ಸುಮೇರಿಯನ್ನರು ಆಳ್ವಿಕೆ ಮಾಡಿದ್ದರು. ಅವರು ನಂತರದ ಕಾಲಾವಧಿಯಲ್ಲಿ ಭಾರತದಿಂದ ಇರಾಕ್ ಗೆ ತೆರಳಿರಬಹುದು ಎಂಬ ಅಂದಾಜು ಮಾಡಲಾಗಿದೆ. ಜತೆಗೆ ಅವರ ವಂಶವಾಹಿಗಳು ಸಿಂಧೂ ಕಣಿವೆ ನಾಗರಿಕತೆಯ ಕುರುಹುಗಳ ಜತೆಗೆ ಹೋಲಿಕೆಯಾಗುತ್ತವೆ. ಹೀಗಾಗಿ ಭಾರತದ ಸಂಸ್ಕೃತಿ ಇಲ್ಲಿಯವರೆಗೆ ಹಬ್ಬಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Leave a Reply