ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ಕೊಟ್ಟ ಯಶ್- ರಾಧಿಕಾ! ಖುಷಿಯಲ್ಲಿ ಅಭಿಮಾನಿಗಳ ಹಾಸ್ಯ ಚಟಾಕಿ

ಡಿಜಿಟಲ್ ಕನ್ನಡ ಟೀಮ್:

ರಾಕಿಂಗ್ ಸ್ಟಾರ್ ಯಶ್ ಮೊನ್ನೆಯಷ್ಟೇ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದರು. ಎರಡೇ ದಿನಗಳಲ್ಲಿ ಯಶ್- ರಾಧಿಕಾ ಜೋಡಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯ ಸುದ್ದಿ ನೀಡಿ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಹೌದು ತಮ್ಮ ಮಗು ಐರಾಳ ವಿಡಿಯೋ ಬಿಡುಗಡೆ ಮಾಡಿ ಈ ವಿಷಯ ಪ್ರಕಟಿಸಿದ್ದು, ಈ ಸುದ್ದಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನು ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ನೆಟ್ಟಿಗರು ನಗೆ ಚಟಾಕಿ ಹಾರಿಸುತ್ತಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಹಾಡಿನಲ್ಲಿ ವರ್ಷಕ್ಕೊಂದು ಪಾಪು ಕೊಡ್ತಿಯಾಸಾಲನ್ನು ಈ ಜೋಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ಕೆಜಿಎಫ್ ಚಾಪ್ಟರ್ 1ಗೆ ಮೊದಲ ಮಗಳು, ಕೆಜಿಎಫ್ ಚಾಪ್ಟರ್ 2ಗೆ ಎರಡನೇ ಮಗುವಿನ ನಿರೀಕ್ಷೆ ಇದ್ದು, ಮೂರನೇ ಭಾಗ ಮಾಡಿದರೆ ಮತ್ತೊಂದು ಮಗುವಿನ ನಿರೀಕ್ಷೆ ಮಾಡಬಹುದು ಎಂದೆಲ್ಲಾ ಹಾಸ್ಯ ಚಟಾಕಿ ಹರಿಬಿಡಲಾಗುತ್ತಿದೆ.

ಒಟ್ಟಿನಲ್ಲಿ ಯಶ್ ರಾಧಿಕಾ ಜೋಡಿ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ನೀಡುತ್ತಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದ್ದು, ಅವರ ಕುಟುಂಬ ಹೀಗೆ ಸುಖವಾಗಿರಲಿ ಎಂದು ಹಾರೈಸುತ್ತಿದ್ದಾರೆ.

 

Leave a Reply