ಜಪಾನ್ ನಲ್ಲಿ ‘ಜೈ’ ಮಂತ್ರ! ಇಂಡೋ ಪೆಸಿಫಿಕ್ ಸಹಕಾರಕ್ಕೆ ಮೂರು ರಾಷ್ಟಗಳ ಸಂಕಲ್ಪ!

ಡಿಜಿಟಲ್ ಕನ್ನಡ ಟೀಮ್:

ಜಪಾನ್, ಅಮೆರಿಕ ಹಾಗೂ ಭಾರತ (JAI) ರಾಷ್ಟ್ರಗಳ ತ್ರಿಪಕ್ಷೀಯ ಸಭೆಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಎಂದು ಕರೆದಿದ್ದರೂ. ಪ್ರಸ್ಕ್ತ ಸಾಲಿನ ಜಿ20 ರಾಷ್ಟ್ರಗಳ ಸಭೆಯಲ್ಲಿ ಈ ಮೂರೂ ರಾಷ್ಟ್ರಗಳು ತ್ರಿಪಕ್ಷೀಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾದ ವಿಚಾರ ಎಂದರೆ ಇಂಡೋ ಫೆಸಿಫಿಕ್ ಸಹಕಾರ.

ಭಾರತ ಪ್ರಧಾನಿಯಾಗಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿಯಾಗಿ ಶಿಂಜೊ ಅಬೆ ಮರು ಆಯ್ಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದಿಸಿದರು. ಈ ಸಭೆಯಲ್ಲಿ ಹಿಂದೂ ಮಹಾ ಸಾಗರ ಹಾಗೂ ಪೆಸಿಫಿಕ್ ಮಹಾ ಸಾಗರಗಳಲ್ಲಿ ಸಂಪರ್ಕ ಜಾಲ, ಮೂಲಸೌಕರ್ಯ, ಶಾಂತಿ ಮತ್ತು ಭದ್ರತೆ ವಿಚಾರವಾಗಿ ಪರಸ್ಪರ ಸಹಕಾರ ನೀಡುವುದು ಈ ಸಭೆಯ ಪ್ರಮುಖ ಅಜೆಂಡಾ ಆಗಿತ್ತು.

ಇನ್ನು ಭಾರತ ಹಾಗೂ ಅಮೆರಿಕ ನಡುವೆ ರಷ್ಯಾ ಜತೆಗಿನ ವ್ಯಾಪಾರ ಒಪ್ಪಂದ, ಸುಂಕ ವಿಚಾರವಾಗಿ ಹಗ್ಗಜಗ್ಗಾಟ ನಡೆಯುತ್ತಿರುವಾಗ ಮೋದಿ ಹಾಗೂ ಟ್ರಂಪ್ ನಡುವಣ ಮಾತುಕತೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಇಬ್ಬರು ನಾಯಕರು ನಗುಮುಖದೊಂದಿಗೆ ಪರಸ್ಪರ ಹಸ್ತಲಾಘವ ಮಾಡಿ ಉಭಯ ದೇಶಗಳ ನಡುವಣ ಸಂಬಂಧ ಇನ್ನು ಉತ್ತಮವಾಗಿದೆ ಎಂಬ ಸಂದೇಶ ಸಾರುವ ಪ್ರಯತ್ನ ಮಾಡಿದರು.

ಈ ಸಭೆ ವೇಳೆ ಭಾರತವು ರಷ್ಯಾದಿಂದ ಖರೀದಿಸುತ್ತಿರುವ ಎಸ್ 400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆ ಕುರಿತು ಚರ್ಚೆ ನಡೆದಿಲ್ಲ. ಬದಲಿಗೆ ಇರಾನ್ ನಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಪರಿಣಾಮವಾಗಿ ಭಾರತಕ್ಕೆ ತೈಲ ಸಮಸ್ಯೆ ಮಾತ್ರವಲ್ಲ, ಗಲ್ಫ ರಾಷ್ಟ್ರಗಳಲ್ಲಿರುವ 8 ಕೋಟಿ ಭಾರತೀಯರ ಸುರಕ್ಷತೆ ಹಾಗೂ ಉದ್ಯೋಗ ಭದ್ರತೆ ವಿಚಾರವಾಗಿಯೂ ಚರ್ಚೆ ನಡೆಸಲಾಯಿತು ಎಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿ.ಕೆ ಗೋಖಲೆ ಮಾಹಿತಿ ನೀಡಿದ್ದಾರೆ.

Leave a Reply