ನೀರವ್ ಮೋದಿಗೆ ಗಾಯದ ಮೇಲೆ ಬರೆ! ಸದ್ಯಕ್ಕೆ ಬಿಡುಗಡೆಯೂ ಇಲ್ಲ, ಸ್ವಿಸ್ ಖಾತೆಯಲ್ಲಿದ್ದ ಹಣವೂ ಸಿಗಲ್ಲ

ಡಿಜಿಟಲ್ ಕನ್ನಡ ಟೀಮ್:

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 13 ಸಾವಿರ ಕೋಟಿ ಸಾಲ ಮಾಡಿ ಮರು ಪಾವತಿ ಮಾಡದೇ ದೇಶ ಬಿಟ್ಟಿರುವ ವಜ್ರ ವ್ಯಾಪಾರಿ ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಒಂದೆಡೆ ನೀರವ್ ಮೋದಿ ಅವರ ಜೈಲುವಾಸವನ್ನು ಇಂಗ್ಲೆಂಡ್ ನ್ಯಾಯಾಲಯ ಜು.25ರವರೆಗೆ ವಿಸ್ತರಿಸಲಾಗಿದ್ದು, ಮತ್ತೊಂದೆಡೆ ಸ್ವಿಸ್ ಬ್ಯಾಂಕ್ ನಲ್ಲಿ ಇದ್ದ ನೀರವ್ ಮೋದಿ ಕುಟುಂಬಸ್ಥರ ನಾಲ್ಕು ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ನೀರವ್ ಹಾಗೂ ಆತನ ಸಹೋದರಿ ಪೂರ್ವಿ ಮೋದಿ ಒಟ್ಟು ನಾಲ್ಕು ಸ್ವಿಸ್ ಖಾತೆಗಳನ್ನು ಹೊಂದಿದ್ದರು. ಅವುಗಳಲ್ಲಿ ಒಟ್ಟು 280 ಕೋಟಿ ಹಣ ಇಡಲಾಗಿದ್ದು, ಇವುಗಳು ಅಕ್ರಮ ಹಣ ಎಂದು ಜಾರಿ ನಿರ್ದೇಶನಾಲಯ ತಿಳಿಸಿತ್ತು. ಇಡಿಯ ಈ ಮಾಹಿತಿ ಪರಿಗಣಿಸಿ ಆ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದರೊಂದಿಗೆ ಈ ಹಣವನ್ನು ನೀರವ್ ಮೋದಿ ವಾಪಸ್ ಪಡೆಯಲು ಸಾಧ್ಯವಿಲ್ಲದಂತಾಗಿದೆ.

Leave a Reply