ರಮೇಶ್ ಜಾರಕಿಹೊಳಿ ರಾಜೀನಾಮೆ! ದೋಸ್ತಿ ಸರ್ಕಾರದ ಎರಡನೇ ವಿಕೆಟ್ ಪತನ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಸೋಮವಾರ ಶಾಕ್ ಮೇಲೆ ಶಾಕ್ ಸಿಕ್ಕಿದೆ. ಬೆಳಗ್ಗೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಮಧ್ಯಾಹ್ನ ಅತೃಪ್ತ ಗುಂಪಿನ ನಾಯಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

ಇದರೊಂದಿಗೆ ಮೈತ್ರಿ ಸರ್ಕಾರದ ಎರಡು ವಿಕೆಟ್ ಪತನಗೊಂಡಿದ್ದು ಇನ್ನು ಕೆಲವು ಅತೃಪ್ತ ನಾಯಕರು ರಾಜೀನಾಮೆ ನೀಡುವ ನಿರೀಕ್ಷೆ ಇದೆ. ಅದರೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ದೊಡ್ಡ ಕಂಟಕ ಎದುರಾಗಿದೆ.

 

ಬಿಜೆಪಿ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲ್ಲ ಎಂದು ಹಿಂದೆ ಸರಿದಿರುವಾಗಲೇ ಕಾಂಗ್ರೆಸ್ ನಲ್ಲಿ ಅತೃಪ್ತರ ಈ ನಡೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಆನಂದ್ ಸಿಂಗ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ರಮೇಶ್ ಜಾರಕಿಹೊಳಿ ರಾಜೀನಾಮೆ ಅಚ್ಚರಿ ಮೂಡಿಸಿಲ್ಲವಾದರೂ ಆನಂದ್ ಸಿಂಗ್ ರಾಜೀನಾಮೆ ನೀಡಿದ ದಿನವೇ ಇವರೂ ರಾಜೀನಾಮೆ ನೀಡಿರೋದು ಕುತೂಹಲ ಮೂಡಿಸಿದೆ.

ಈ ಇಬ್ಬರು ಶಾಸಕರ ರಾಜೀನಾಮೆ ಇತರ ಅತೃಪ್ತರು ಯಾವ ಹೆಜ್ಜೆ ಇಡುತ್ತಾರೆ ಹಾಗೂ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನಡೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply