ಸೆಲೆಬ್ರಿಟಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕುತ್ತಿರೋ ಓಪನ್ ಚಾಲೆಂಜ್ ಏನು?

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್‌ವುಡ್‌ನ ದಾಸ ಚಾಲೆಂಜಿಂಗ್ ಸ್ಟಾರ್ ಆಗಿ ಗಾಂಧಿನಗರದಲ್ಲಿ ದರ್ಬಾರ್ ನಡೆಸುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ದಾಸ ಫುಲ್ ಸೈಲೆಂಟ್  ಯಾವುದೇ ವಿಚಾರಕ್ಕೂ ತಲೆ ಹಾಕೋದಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂದುಕೊಂಡು ಇರುವ ದಾಸ ಇವತ್ತು ಓಪನ್ ಚಾಲೆಂಜ್ ಹಾಕಲು ಸಿದ್ಧನಾಗಿದ್ದಾನೆ ಅಂದ್ರೆ ನೀವು ನಂಬಲೇ ಬೇಕು.

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್‌ ಚಾಲೆಂಜ್ ಅಂತ ಬರೆದಿರೋ ದರ್ಶನ್. ಮಧ್ಯಾಹ್ನ ಫೇಸ್ಬುಕ್ ಲೈವ್ ನಲ್ಲಿ ಎಲ್ಲವನ್ನೂ ತಿಳಿಸುತ್ತೇನೆ ಅಂತ ಬರೆದುಕೊಂಡಿದ್ದಾರೆ.  ದರ್ಶನ್ ಯಾವ ಚಾಲೆಂಜ್ ಬಗ್ಗೆ ಹೇಳ್ತಾರೆ ಅನ್ನೋ ಕುತೂಹಲದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಕುರುಕ್ಷೇತ್ರ ವಿವಾದ ಸೇರಿದಂತೆ ಇರಬಹುದು ಅನ್ನೋದು ಕೆಲವರ ಲೆಕ್ಕಾಚಾರ ಆದರೆ, ಮತ್ತೆ ಕೆಲವರದ್ದು ಸುದೀಪ್ ಬಗ್ಗೆ‌ ದರ್ಶನ್ ಮಾತಾನಾಡ್ತಾರೆ ಅಂತಾನೂ ಚರ್ಚೆ ನಡೆಸುತ್ತಿದ್ದಾರೆ. ಒಟ್ಟಾರೆ, ಯಾರ ಬಗ್ಗೆ ಮಾತನಾಡ್ತಾರೆ ದರ್ಶನ್ ಅನ್ನೋದು ಮಧ್ಯಾಹ್ನದ ಬಳಿಕ ಗೊತ್ತಾಗಲಿದೆ.  ಯಾವ ಸೆಲೆಬ್ರಿಟಿಗೆ ಚಾಲೆಂಜ್ ಮಾಡ್ತಾರೆ, ಏನ್ ವಿಷಯ..? ಏನಾದ್ರು ಗಿಮಿಕ್ ಮಾಡ್ತಿದ್ದಾರೋ ಅನ್ನೋ ಅನುಮಾನವೂ ಸಿನಿಪ್ರಿಯರನ್ನು ಕಾಡ್ತಿದೆ.

Leave a Reply