ಕೋತಿಗಳು ಕುಳಿತಿರುವ ತೆಪ್ಪ ಮುಳುಗುತ್ತಂತೆ..! ರಿವರ್ಸ್ ಆಪರೇಷನ್‌ಗೆ ಬಿಎಸ್‌ವೈ ಸವಾಲ್..!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲ ಪ್ರತಿ ಬಾರಿ ವಿಫಲ ಆಗುತ್ತಿದ್ದರಿಂದ ಈ ಬಾರಿ ಸೀಕ್ರೆಟ್ ಆಪರೇಷನ್ ನಡೆಸಲಾಗ್ತಿದೆ. ಆದ್ರೆ ಆಪರೇಷನ್ ಕಮಲಕ್ಕೆ ಇಬ್ಬರು ಶಾಸಕರು ಬಲಿಯಾದ ಕೂಡಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಬಿ.ಎಸ್ ಯಡಿಯೂರಪ್ಪ, ಕಳೆದ ಮೂರು ತಿಂಗಳಿನಿಂದ ಕಾಂಗ್ರೆಸ್, ಜೆಡಿಎಸ್ ನಾಯಕರು ಹೇಳ್ತಿದ್ದಾರೆ. ನಮ್ಮವರು ಯಾರೂ ರಾಜೀನಾಮೆ ಕೊಡೋದಿಲ್ಲ. ನಾವು ಎಲ್ಲಿಯೂ ಆಪರೇಷನ್ ಮಾಡ್ತೀವಿ ಎಂದು ಹೇಳಿಲ್ಲ. ರಿವರ್ಸ್ ಆಪರೇಷನ್ ಮಾಡೋದಿದ್ರೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಅಧಿವೇಶನದಲ್ಲಿ ವಿಶ್ವಾಸ ಮತ ಯಾಚನೆ ಪ್ರಶ್ನೆ ಇಲ್ಲ. ಈ ಬೆಳವಣಿಗೆಗಳನ್ನು ನೋಡಿ ಸದನದಲ್ಲಿ ಏನು ಮಾಡಬೇಕು ಎಂದು ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿ ನಂತರ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

ನಾವು ಯಾವ ಆಪರೇಷನ್ ಕೂಡ ಮಾಡ್ತಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಈಗಾಗಲೇ ಅದಕ್ಕೆ ತೂತು ಬಿದ್ದು ಒಂದೂವರೆ ತಿಂಗಳಾಯ್ತು. ಅಂತ ಹಡಗನ್ನ ಯಾರಾದ್ರೂ ಏರೋಕೆ ಹೋಗ್ತಾರಾ? ಎಂದು ಪ್ರಶ್ನಿಸಿರುವ ಬಿಜೆಪಿ ಶಾಸಕ ಮಾಧುಸ್ವಾಮಿ, ಅದೆಲ್ಲ ಶುದ್ಧಸುಳ್ಳು. ನಮ್ಮ ಶಾಸಕರು ಯಾರೂ ಕೂಡ ಹೋಗೊದಿಲ್ಲ. ಮೈತ್ರಿ ಸರ್ಕಾರ ತೆಪ್ಪ, ಯಾವಾಗ ಮುಳುಗುತ್ತೋ ಹೇಳೊಕೆ ಬರೊದಿಲ್ಲ. ಮೈತ್ರಿ ಸರ್ಕಾರ ತೆಪ್ಪದಲ್ಲಿ ಕೋತಿ ಕುಳಿತ ಹಾಗಿದೆ. ಕೋತಿಗಳು ಈ ಕಡೆ ಆ ಕಡೆ ಆದ್ರೆ ತಕ್ಷಣ ತೆಪ್ಪ ಮುಳುಗುತ್ತೆ. ಯಾವಾಗ ಮುಳುಗುತ್ತೆ ಅಂತ ಹೇಳೋಕಾಗೊದಿಲ್ಲ. ಸದ್ಯದಲ್ಲೇ ತೆಪ್ಪ ಮುಳುಗೋದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಬಿಎಸ್ ಯಡಿಯೂರಪ್ಪಗೆ ಸಿಎಂ ಆಗುವ ಹೆಚ್ಚಾಗಿದೆ ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರ ಕನಸು ನನಸಾಗುವುದಿಲ ಎಂದಿದ್ದಾರೆ ಬಸವರಾಜ ರಾಯರೆಡ್ಡಿ ಹಾಗೂ ವಿನಯ್ ಕುಲಕರ್ಣಿ. ಇಷ್ಟೆಲ್ಲದರ ನಡುವೆ ನಾಳೆ ರಾಜ್ಯಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಭೇಟಿ ನೀಡುತ್ತಿದ್ದು, ಬಂಡಾಯದ ಬಾವುಟ ಹಾರಿಸಿರುವ ಶಾಸಕರ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನೇರವಾಗಿ ಬಿಜೆಪಿ ಹೈಕಮಾಂಡ್ ಕಡೆಗೆ ಬೊಟ್ಟು ಮಾಡಿದ್ದು, ನಾಳೆ ನಡೆಯುವ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

Leave a Reply