ಸಂಸದೆ ಸುಮಲತಾ ಮಾತಿಗೆ ಕೆಆರ್‌ಎಸ್‌ನಿಂದ ನೀರು ಹರಿಯುತ್ತಾ?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಜಿದ್ದಾಜಿದ್ದಿನ ರಾಜಕಾರಣ ಮಾಡಿ, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಸಂಸತ್ ಪ್ರವೇಶ ಮಾಡಿರುವ ಪಕ್ಷೇತರ ಸಂಸದೆ ಸುಮಲತಾ, ಮೊದಲ ಬಾರಿಗೆ ಸದನದಲ್ಲಿ ಮಾತನಾಡಿದ್ರು. ಕನ್ನಡದಲ್ಲಿ ಮಾತು ಆರಂಭಿಸಿದ ಸುಮಲತಾ, ನನ್ನ ಹೆಮ್ಮೆಯ ಮಂಡ್ಯದ ಸ್ವಾಭಿಮಾನಿ ಜನರಿಗೆ ಧನ್ಯವಾದ ಅಂತೇಳಿದ್ರು. ಬಳಿಕ ಇಂಗ್ಲಿಷ್​ನಲ್ಲಿ ಮಾತು ಮುಂದುವರಿಸಿದ ಸುಮಲತಾ, ಕರ್ನಾಟಕ ರಾಜ್ಯ ಹಾಗೂ ನನ್ನ ಕ್ಷೇತ್ರ ಮಂಡ್ಯದಲ್ಲಿ ತೀವ್ರ ಬರಗಾಲಕ್ಕೆ ಎದುರಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಕಬ್ಬು ಮತ್ತು ಭತ್ತ ಬೆಳೆಯುವ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರು ಕೃಷಿ ಸಾಲ ತೀರಿಸಲಾರದ ಹಂತಕ್ಕೆ ತಲುಪಿದ್ದಾರೆ ಎಂದು ಸದನಕ್ಕೆ ಮನವಿ ಮಾಡಿಕೊಂಡ್ರು.

ಮಂಡ್ಯದ ರೈತರ ಸಮಸ್ಯೆ ಬಗೆಹರಿಸಲು ನಾವೆಲ್ಲರೂ ನೆರವಿಗೆ ಧಾವಿಸಬೇಕಿದೆ ಎಂದಿರುವ ಸಂಸದೆ ಸುಮಲತಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಜಲಶಕ್ತಿ ಸಚಿವರು ಬರದ ಬಗ್ಗೆ ತುರ್ತು ಗಮನ ಕೊಡಬೇಕಿದೆ ಎಂದು ಮನವಿ ಮಾಡಿದ್ರು. ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಮುಂದಾಗುವ ಮೂಲಕ ಸಮಸ್ಯೆ ಬಗೆಹರಿಸಬೇಕಿದೆ ಎಂದಿರುವ ಅವರು, ರಾಜ್ಯ ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದ್ದು ಆ ಯೋಜನೆ ಇನ್ನೂ ಕೂಡ ಅಪೂರ್ಣವಾಗಿದೆ ಎನ್ನುವ ಮೂಲಕ ರಾಜ್ಯದ ಮೈತ್ರಿ ಸರ್ಕಾರವನ್ನು ಕುಟುಕಿದ್ದಾರೆ. ಕೊನೆಯಲ್ಲಿ ಜೈ ಜವಾನ್ ಜೈ ಕಿಸಾನ್ ಘೋಷಣೆ ಕೂಗುವ ಮೂಲಕ ಸುಮಲತಾ ಮಾತನ್ನು ಅಂತ್ಯಗೊಳಿಸುವ ಮೂಲಕ ಮೊದಲ ಭಾಷಣದಲ್ಲೇ ಸದನದ ಗಮನ ಸೆಳೆದಿದ್ದಾರೆ.

ಆದ್ರೆ ಇತ್ತ ಮಂಡ್ಯದಲ್ಲಿ ಕೆಆರ್‌ಎಸ್ ಡ್ಯಾಂನಿಂದ ಬೆಳೆಗೆ ನೀರು ಬಿಡಬೇಕು ಎಂದು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಇಂದು ಮಂಡ್ಯದ ಶಿವಳ್ಳಿ ಹಾಗೂ ಮದ್ದೂರಿನ ಗೆಜ್ಜಲಗೆರೆ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ರು. ಇದ್ರಿಂದಾಗಿ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಕೂಡಲೇ ನಾಲೆಗೆ ನೀರು ಹರಿಸುವಂತೆ ರೈತರ ಆಗ್ರಹ ಮಾಡಿದ್ದಾರೆ. ಇದೀಗ ಲೋಕಸಭೆಯಲ್ಲೂ ಮಂಡ್ಯ ಸಂಸದೆ ಸುಮಲತಾ ಮಂಡ್ಯ ರೈತರ ಪರವಾಗಿ ದನಿ ಎತ್ತಿದ್ದಾರೆ. ನೀರಿಗಾಗಿ ರಾಜ್ಯ ಸರ್ಕಾರದ ವಿರುದ್ಧ ರೈತರು ನಡೆಸುತ್ರಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಾ..? ಮಧ್ಯಪ್ರವೇಶ ಮಾಡಿ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಡಲು ಸೂಚನೆ ಕೊಡುತ್ತಾ ಅನ್ನೋ ಕುತೂಹಲ ಮೂಡಿಸಿದೆ.

Leave a Reply