ಮೋದಿ ಬಜೆಟ್ ಅಲ್ಲಿ ಯಾವುದು ಅಗ್ಗ! ಯಾವುದು ದುಬಾರಿ!

ಡಿಜಿಟಲ್ ಕನ್ನಡ ಟೀಮ್:

ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯ್ತಿ ಘೋಷಿಸಿರುವ ವಿತ್ತ ಸಚಿವರು ಶ್ರೀಮಂತರಿಗೆ ತೆರಿಗೆ ಹೊರೆ ಹಾಕಿದ್ದಾರೆ. ಈ ಬಜೆಟ್ ನಿಂದ ಯಾವ ವಸ್ತುಗಳ ಬೆಲೆ ಹೆಚ್ಚಲಿವೆ ಹಾಗೂ ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂಬುದನ್ನು ನೋಡೋಣ…

ಯಾವುದು ಇಳಿಕೆ:

  • ಡಯಾಲಿಸಿಸ್ ಯಂತ್ರ ಮತ್ತು ಪರಿಕರ, ಕೃತಕ ಕಿಡ್ನಿ, ಶಸ್ತ್ರಚಿಕಿತ್ಸೆ ಉಪಕರಣ.
  • ಶಸ್ತ್ರಚಿಕಿತ್ಸಾ ಉಪಕರಣ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳ ತೆರಿಗೆ ರದ್ದು.
  • ಪಾಮ್ ಆಯಿಲ್, ಪ್ಯಾಟಿ ಆಯಿಲ್, ಪೇಪರ್ಸ್, ಕೋಬಾಲ್ಟ್, ಇಥಲಿನ್.

ಯಾವುದು ಹೆಚ್ಚಳ:

  • ಪೆಟ್ರೋಲ್, ಡೀಸೆಲ್ ಮೇಲೆ ಒಂದು ರೂಪಾಯಿ ಹೆಚ್ಚಳ ಮಾಡಲಾಗಿದೆ.
  • ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.12.5ಕ್ಕೆ ಏರಿಕೆ ಮಾಡಲಾಗಿದೆ.
  • ಪಿವಿಸಿ ಪೈಪ್, ಸಿಸಿ ಕ್ಯಾಮರಾ, ಡಿವಿಡಿ, ಐಪಿ ಕ್ಯಾಮರಾಗಳು.
  • ಬೆಲೆಬಾಳುವ ಲೋಹ, ಆಟೋ ಬಿಡಿ ಭಾಗಳಲು, ಮಾರ್ಬಲ್, ತಂಬಾಕು, ಟೈಲ್ಸ್, ರಬ್ಬರ್.

Leave a Reply