ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಬಂಪರ್! ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆಗಳೇನು?

ಡಿಜಿಟಲ್ ಕನ್ನಡ ಟೀಮ್:

ದೇಶದ ಪ್ರಥಮ ಹಣಕಾಸು ಸಚಿವೆ ಎಂದೇ ಖ್ಯಾತಿ ಪಡೆದಿರುವ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ 2019-20ನೇ ಸಾಲಿನ ಚೊಚ್ಚಲ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಭರ್ಜರಿ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ.

ಈ ಬಾರಿ ಬಜೆಟ್ ನ ಪ್ರಮುಖ ನಿರೀಕ್ಷೆಗಳಲ್ಲಿ ಒಂದಾಗಿದ್ದ ತೆರಿಗೆ ವಿಚಾರವಾಗಿ ಸಚಿವರು ಸಿಹಿ ಸುದ್ದಿ ನೀಡಿದ್ದು, ‘ಜನರ ಮೇಲೆ ತೆರಿಗೆ ಹೊರೆ ಹೊರಿಸಲು ಸರ್ಕಾರ ಇಚ್ಚಿಸುವುದಿಲ್ಲ. ದೇಶದ ಅಭಿವೃದ್ಧಿಗೆ ತೆರಿಗೆ ಪಾವತಿಸುವ ನಾಗರಿಕರೇ ಮುಖ್ಯರಾಗಿದ್ದಾರೆ’ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಅಭಿಪ್ರಾಯವ್ಯಕ್ತಪಡಿಸಿದರು. ನಿರ್ಮಲಾ ಸೀತಾರಾಮನ್ ಅವರ ಪ್ರಮುಖ ಘೋಷಣೆಗಳು ಹೀಗಿವೆ…

  • 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
  • ವಾರ್ಷಿಕ 400 ಕೋಟಿ ರೂಪಾಯಿ ಆದಾಯ ಹೊಂದಿದ ಉದ್ಯಮಕ್ಕೆ ಶೇ.25ರಷ್ಟು ತೆರಿಗೆ. ಎಲೆಕ್ಟ್ರಿಕ ವಾಹನ ತಯಾರಿಕಾ ಕಂಪನಿಗಳಿಗೆ ಶೇ.5ರಷ್ಟು ಜಿಎಸ್ ಟಿ ಇಳಿಕೆ.
  • 10 ಲಕ್ಷ ಮೌಲ್ಯದ ವಾಹನ ಖರೀದಿಸುವ ಖರೀದಿದಾರರಿಗೆ ಶೇ.1.25 ಲಕ್ಷ ರೂಪಾಯಿ ಸಬ್ಸಿಡಿ. 45 ಲಕ್ಷ ರೂಪಾಯಿ ಕೊಟ್ಟು ಮನೆ ಖರೀದಿಸಿದರೆ 1.5 ಲಕ್ಷ ರೂಪಾಯಿ ತೆರಿಗೆ ವಿನಾಯ್ತಿ.
  • ಸ್ಟಾರ್ಟ್ ಅಪ್ ಗಳಿಗೆ ಇನ್ಮುಂದೆ ಏಂಜಲ್ ಟ್ಯಾಕ್ಸ್ ಇಲ್ಲ.
  • ತೆರಿಗೆ ಪಾವತಿಗೆ ಪ್ಯಾನ್ ಕಡ್ಡಾಯವಲ್ಲ.
  • ಇನ್ಮುಂದೆ ತೆರಿಗೆ ಪಾವತಿಸಲು ಪ್ಯಾನ್ ಕಾರ್ಡ್ ಕಡ್ಡಾಯವಲ್ಲ, ಆಧಾರ್ ಕಾರ್ಡ್ ಮೂಲಕವೂ ತೆರಿಗೆ ಪಾವತಿಸಬಹುದಾಗಿದೆ.
  • ಪ್ಯಾನ್ ಕಾರ್ಡ್ ಗೆ ಪರ್ಯಾಯ ಆಧಾರ್ ಎಂಬ ಹೊಸ ನಿಯಮ.

Leave a Reply