ಕಪಿಲ್ ದೇವ್ ಪಾತ್ರದಲ್ಲಿ ಮಿಂಚಲು ರಣ್ವೀರ್ ಸಿಂಗ್ ರೆಡಿ!

ಡಿಜಿಟಲ್ ಕನ್ನಡ ಟೀಮ್:

1983ರ ವಿಶ್ವಕಪ್ ಭಾರತೀಯ ಕ್ರಿಕೆಟ್ ನ ದಿಕ್ಕನ್ನೇ ಬದಲಿಸಿದ ವೇದಿಕೆ. ಆಗ ವಿಶ್ವಕಪ್ ಅನ್ನು ಭಾರತ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಬಾಲಿವುಡ್ ಮಂದಿ ಆ ಅಭೂತಪೂರ್ವ ಕ್ಷಣವನ್ನು ಈಗ ’83 ದ ಫಿಲ್ಮ್’ ಮೂಲಕ ಬೆಳ್ಳಿ ಪರದೆ ಮೇಲೆ ತರುತ್ತಿದ್ದು, ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಪಾತ್ರದಲ್ಲಿ ರಣ್ವೀರ್ ಕಾಣಿಸಿಕೊಳ್ಳಲಿದ್ದು, ಅವರ ಮೊದಲ ಲುಕ್ ಬಿಡುಗಡೆಯಾಗಿದೆ.

ಥೇಟ್ ಕಪಿಲ್ ದೇವ್ ಅವರನ್ನೇ ಹೋಲುವಂತೆ ರಣ್ವೀರ್ ಸಿಂಗ್ ಗೆಟಪ್ ಹಾಕಿದ್ದು, ಅವರ ಬೌಲಿಂಗ್ ಶೈಲಿ, ಆಟದ ಶೈಲಿಯನ್ನು ರೂಢಿಸಿಕೊಳ್ಳಲು ಸ್ವತಃ ಕಪಿಲ್ ಅವರಿಂದಲೇ ತರಬೇತಿ ಪಡೆದಿದ್ದಾರೆ.

ಕೇವಲ ಕಪಿಲ್ ಮಾತ್ರವಲ್ಲ, ಮೊಹಿಂದರ್ ಅಮರನಾಥ್, ಸೈಯದ್ ಕಿರ್ಮಾನಿ ಸೇರಿದಂತೆ 1983ರ ವಿಶ್ವಕಪ್ ತಂಡದ ಆಟಗಾರರು ತಮ್ಮ ಪಾತ್ರ ನಿಭಾಯಿಸುತ್ತಿರುವ ಕಲಾವಿದರಿಗೆ ಟ್ರೈನಿಂಗ್ ಕೊಟ್ಟಿದ್ದಾರೆ.

ಟೂರ್ನಿಯಲ್ಲಿ ಭಾರತ ತಂಡದ ಹಾದಿ, ಆಟಗಾರರ ಸಿದ್ಧತೆ, ಅವರ ಮನಸ್ಥಿತಿ, ಹೋರಾಟ ಹೇಗಿತ್ತು ಎಂಬುದನ್ನು ಈ ಚಿತ್ರ ಎಳೆ ಎಳೆಯಾಗಿ ತೋರಿಸುವ ನಿರೀಕ್ಷೆ ಇದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ರಣ್ವೀರ್ ಸಿಂಗ್ ಅವರ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Leave a Reply