ಶಾಸಕರ ಸರಣಿ ರಾಜೀನಾಮೆ… ಸಂಖ್ಯಾಬಲ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೊನೆಗೂ ಪತನ ಹಾದಿ ಹಿಡಿದಿದೆ. ಈಗಾಗಲೇ ಗುಂಪು ಗುಂಪಾಗಿ ಬಂದು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ವಿಧಾನಸೌಧದಲ್ಲಿ ಕುಳಿತಿದ್ದಾರೆ. ರಾಜೀನಾಮೆ ವಿಷಯನ್ನು ಸ್ವತಃ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಮಾಧ್ಯಮಗಳ ಎದುರು ಬಹಿತಂಗವಾಗಿಯೇ ಹೇಳಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಗಳಿಸಿದ್ದ ಬಿಜೆಪಿ ಉಮೇಶ್ ಜಾಧವ್ ರಾಜೀನಾಮೆ ಬಳಿಕ ಆ ಕ್ಷೇತ್ರವನ್ನು ಗೆದ್ದುಕೊಂಡು 105ಕ್ಕೆ ಬಲ ಹೆಚ್ಚಿಸಿಕೊಂಡಿತ್ತು. ಆ ಬಳಿಕ ವಿಜಯನಗರ ಶಾಸಕ ಆನಂದ್​ ಸಿಂಗ್​ ಕೂಡ ರಾಜೀನಾಮೆ ಸಲ್ಲಿಸಿದ್ದರು. ಅದೇ ದಿನ ಗೋಕಾಕ್ ಶಾಸಕ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದ್ದೇನೆ ಎಂದಿದ್ದರು. ಇಂದು ಹಲವಾರು ಶಾಸಕರು ವಿಧಾನಸೌಧದಲ್ಲೊ ಠಿಕಾಣಿ ಹೂಡಿದ್ದಾರೆ. ರಾಜೀನಾಮೆ ನೀಡಲು ಸ್ಪೀಕರ್‌ಗಾಗಿ ಕಾಯುತ್ತಿದ್ದಾರೆ.

ಯಾರೆಲ್ಲಾ ರಾಜೀನಾಮೆ ಕೊಡೋ ನಿರೀಕ್ಷೆ ಇದೆ ಎಂದು ನೋಡೋದಾದ್ರೆ.

ಹೆಚ್​.ವಿಶ್ವನಾಥ್​, ಹುಣಸೂರು ಶಾಸಕ
ಕೆ.ಗೋಪಾಲಯ್ಯ, ಮಹಾಲಕ್ಷ್ಮಿಲೇಔಟ್
ನಾರಾಯಣಗೌಡ, ಕೆ.ಆರ್​. ಪೇಟೆ

ಕಾಂಗ್ರೆಸ್

ಬಿ.ಸಿ. ಪಾಟೀಲ್ ಹಿರೇಕೆರೂರು
ಶಿವರಾಮ್ ಹೆಬ್ಬಾರ್, ಯಲ್ಲಾಪುರ
ಪ್ರತಾಪ್‌ ಗೌಡ ಪಾಟೀಲ್,ಮಸ್ಕಿ
ಮಹೇಶ್​ ಕುಮಟಳ್ಳಿ, ಅಥಣಿ
ಎಸ್​.ಟಿ.ಸೋಮಶೇಖರ್​, ಯಶವಂತಪುರ
ಮುನಿರತ್ನ, ರಾಜರಾಜೇಶ್ವರಿನಗರ ಶಾಸಕ
ಭೈರತಿ ಬಸವರಾಜು, ಕೆ.ಆರ್​.ಪುರಂ ಶಾಸಕ
ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್​ ಶಾಸಕ
ಸೌಮ್ಯಾ ರೆಡ್ಡಿ, ಜಯನಗರ ಶಾಸಕಿ
ರೋಷನ್​ ಬೇಗ್​, ಶಿವಾಜಿನಗರ
ಶ್ರೀಮಂತ ಪಾಟೀಲ್, ಕಾಗವಾಡ
ನಾಗೇಂದ್ರ, ಬಳ್ಳಾರಿ ಗ್ರಾಮಾಂತರ
ಬಸವಗೌಡ ಗದ್ದಲ್, ರಾಯಚೂರು ಗ್ರಾಮಾಂತರ
ಶಿವಣ್ಣ, ಆನೇಕಲ್​ ಶಾಸಕ

ಈಗಾಗಲೇ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಸೇರಿದಂತೆ ಸುಮಾರು 16 ಶಾಸಕರು ರಾಜೀನಾಮೆ ನೀಡಲಿದ್ದಾರೆ. ಅದರೊಂದಿಗೆ ವಿಧಾನಸಭೆ ಸಂಖ್ಯಾಬಲ 208ಕ್ಕೆ ಕುಸಿಯಲಿದೆ. ಆಗ 105 ಸಂಖ್ಯಾಬಲ ಇರುವ ಬಿಜೆಪಿ ಬಹುಮತ ಪಡೆಯಲಿದೆ. ಆದರೆ ಇವರ ರಾಜೀನಾಮೆಯನ್ನು ಸ್ಪೀಕರ್ ಯಾವಾಗ ಅಂಗೀಕರಿಸುತ್ತಾರೆ. ಕಾಂಗ್ರೆಸ್, ಜೆಡಿಎಸ್ ಮುಂದಿನ ನಡೆ ಏನು? ಎಂಬುದು ಸದ್ಯದ ಕುತೂಹಲ.

Leave a Reply