ಸರ್ಕಾರ ಬೀಳುವ ಮುನ್ನ ಗೌಡರ ಬ್ರಹ್ಮಾಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಬಿದ್ದರೆ ಬೀಳಲಿ ಅನ್ನೋದು ಮೈತ್ರಿಯ ಎಲ್ಲಾ ನಾಯಕರ ನಿರ್ಧಾರವಾಗಿದೆ. ಆದರೆ ಸರ್ಕಾರ ಬೀಳಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಶಿಷ್ಯಂದಿರ ಮೂಲಕ ರಾಜೀನಾಮೆ ನೀಡಿಸುವ ನಾಟಕವಾಡಿದ್ದಾರೆ ಅನ್ನೋದು ಮಾಜಿ ಪ್ರಧಾನಿ ದೇವೇಗೌಡರ ಬಲವಾದ ನಂಬಿಕೆ. ಇದೇ ಕಾರಣದಿಂದ ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರ ಬಿದ್ದರೂ ಬೀಳಲಿ ಅದಕ್ಕೂ ಮೊದಲು ಬಂಡಾಯ ಎದ್ದಿರುವ ಶಾಸಕರಿಗೆ ಬುದ್ಧಿ ಕಲಿಸಲೇ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ತಮಿಳುನಾಡಿನ ಅಸ್ತ್ರ ಬಳಕೆಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ತಮಿಳುನಾಡು ಮಾದರಿ ಅಸ್ತ್ರ ಪ್ರಯೋಗಕ್ಕೆ ಸ್ಕೆಚ್​ ಹಾಕಿರುವ ಹೆಚ್​.ಡಿ ದೇವೇಗೌಡರು, ಇದೀಗ ಬಂಡಾಯ ಎದ್ದಿರುವ ಎಲ್ಲಾ ಶಾಸಕರನ್ನು ಅನರ್ಹತೆ ಮಾಡುವ ಮೂಲಕ ಮೂಲಕ ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್​ ಮಾಡಲಾಗ್ತಿದೆಯಂತೆ. ಕಳೆದ ವರ್ಷ ಪಳನಿಸ್ವಾಮಿ ಸರ್ಕಾರದಲ್ಲಿದ್ದ ಎಐಡಿಎಂಕೆಯ 18 ಶಾಸಕರು ಸರ್ಕಾರದ ವಿರುದ್ಧ ಬಂಡೆದ್ದು, ರಾಜೀನಾಮೆ ಕೊಟ್ಟಿದ್ರು. ಆ ಬಳಿಕ ದಿನಕರನ್​ ಬೆಂಬಲಿಸಿದ್ರು. ಇದ್ರಿಂದ ಕುಪಿತಗೊಂಡ ಎಐಡಿಎಂಕೆ ಪಕ್ಷ ಸ್ಪೀಕರ್​ ಮೂಲಕ ಅಷ್ಟೂ ಶಾಸಕರನ್ನು ಅನರ್ಹತೆ ಮಾಡಿ ಆದೇಶ ಹೊರಡಿಸಿದ್ರು. ಸ್ಪೀಕರ್​​ ನಿರ್ಧಾರ ಪ್ರಶ್ನಿಸಿ ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿದ್ರೂ ಶಾಸಕರ ವಾದವನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಇದ್ರಿಂದ ಶಾಸಕರು ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಇದೀಗ ಕೇಸ್​ ಸುಪ್ರೀಂ ಅಂಗಳ ತಲುಪಿದ್ದು, ಕೋರ್ಟ್​ ನಿರ್ಧಾರದ ಬಳಿಕ ಶಾಸಕರ ಅನರ್ಹತೆ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ.

ಆದ್ರೆ ಕಳೆದೊಂದು ವರ್ಷದಿಂದ ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಸರ್ಕಾರ ಪಳನಿಸ್ವಾಮಿ ನೇತೃತ್ವದ ಸರ್ಕಾರ ಮಾತ್ರ ಸೇಫಾಗಿದೆ. ಇದೇ ರೀತಿ ಕರ್ನಾಟಕದಲ್ಲೂ ಕಾನೂನು ಅಸ್ತ್ರ ಪ್ರಯೋಗಿಸಿ ಬಂಡಾಯ ಎದ್ದಿರುವ ಶಾಸಕರನ್ನು ಇಕ್ಕಟಿಗೆ ಸಿಲುಕಿಸೋದು. ಈ ಮೂಲಕ ಸರ್ಕಾರ ಉಳಿಸಲು ಗೌಡರು ಯತ್ನ ಮಾಡಬಹುದು. ಅತ್ತ ಶಾಸಕತ್ವವೂ ಇಲ್ಲ, ರಾಜೀನಾಮೆಯೂ ಇಲ್ಲದ ಸ್ಥಿತಿಗೆ ಶಾಸಕರು ಸಿಲುಕಿದಾಗ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡುವ ಮೂಲಕ ರಾಜ್ಯ ಪಾಲರ ಆಳ್ವಿಕೆ ಹೇರಿಕೆ ಮಾಡಿದ್ರೆ ಮಾಡಲಿ ಅನ್ನೋ ನಿರ್ಧಾರಕ್ಕೆ ದೇವೇಗೌಡರು ಬಂದಿದ್ದಾರೆ ಎನ್ನಲಾಗಿದ್ದು, ಎಲ್ಲಾ ವಿಚಾರಗಳನ್ನು ಸಿಎಂ ಕುಮಾರಸ್ವಾಮಿ ಜೊತೆ ಚರ್ಚಿಸಿ ನಿರ್ಧಾರ ಪ್ರಕಟ ಮಾಡ್ತೇವೆ. ಸಿದ್ದರಾಮಯ್ಯ ಏನೆಲ್ಲಾ ಆಟವಾಡ್ತಿದ್ದಾರೆ ಅನ್ನೋದು ನಮಗೆ ಗೊತ್ತಿಲ್ವಾ ಎಂದು ಆಪ್ತರ ಬಳಿ ಹೆಲಿಕೊಂಡಿದ್ದಾರೆ ಎನ್ನಲಾಗಿದೆ.

Leave a Reply